ಮಂಗಳೂರು: ಪ್ರತಿಭಟನೆ ಮಾಡುತ್ತಿದ್ದ ಜೆ.ಎನ್.ಯು ನ ಹದಿನೈದು ವಿದ್ಯಾರ್ಥಿಗಳ ಮೇಲಿನ ಅಮಾನತನ್ನು ಹಿಂತೆಗೆಯದಿದ್ದಲ್ಲಿ ಎಸ್ಐಒ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಸ್ಐಒ ಕರ್ನಾಟಕ ಅಧ್ಯಕ್ಷ ಮಹಮ್ಮದ್ ರಫೀಕ್ ಬೀದರ್ ತಿಳಿಸಿದ್ದಾರೆ.
ನಗರದ ದ.ಕ. ಜಿಲ್ಲಾಧಿಕಾರಿಯ ಕಚೇರಿಯ ಮುಂಭಾಗದಲ್ಲಿ ಜೆಎನ್ಯು ವಿದ್ಯಾರ್ಥಿ ಅಹ್ಮದ್ ನಜೀಬ್ನನ್ನು ಪತ್ತೆ ಹಚ್ಚಲು ವಿಫಲರಾಗಿರುವ ಕೇಂದ್ರ ಸರ್ಕಾರ ಹಾಗೂ ದೆಹಲಿಯ ಪೊಲೀಸ್ ಇಲಾಖೆ ವಿರುದ್ಧ `ನಜಾಬ್ ಎಲ್ಲಿ’ ಎಂಬ ಫಲಕದಡಿ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ನಜೀಬ್ ಕಾಣೆಯಾಗಿ 76 ದಿನ ಕಳೆದರೂ ಜೆಎನ್ಯು ಆಡಳಿತ ಘಟನೆಗೆ ನಾನು ಹೊಣೆಯಲ್ಲ ಎಂದು ನುಣುಚಿಕೊಳ್ಳುತ್ತಿದೆ. ದಿಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಕೇಂದ್ರ ಸರ್ಕಾರ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.