ಅಶ್ಲೀಲ ವಿಡಿಯೋ: ಹಾರ್ದಿಕ್‌ ಕುಪಿತ

Posted In : Others, ದೇಶ

ಅಹಮದಾಬಾದ್‌: ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ತಮ್ಮ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಬಿತ್ತರಗೊಂಡ ಬಳಿಕ ಪಾಟೀದಾರ್‌ ಕೋಟಾ ನಾಯಕ ಹಾರ್ದಿಕ್‌ ಪಟೇಲ್‌ ಕುಪಿತರಾಗಿದ್ದಾರೆ.

ಈ ಕುರಿತಾಗಿ ಹತ್ತು ದಿನಗಳ ಹಿಂದೆಯೇ ಮಾತನಾಡಿದ್ದ ಹಾರ್ದಿಕ್‌ ತಮ್ಮ ಉಪಸ್ಥಿತಿ ಇರುವಂತೆ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡಿ ತಮ್ಮನ್ನು ಅವಮಾನಿಸಲಾಗುವುದು ಹಾಗೂ ಆ ವಿಡಿಯೋಗಳನ್ನು ನೋಡಿ ಆನಂದಿಸಿ ಎಂದು ಹೇಳಿದ್ದರು.

“ಪಾಟೀದಾರ ಸಮುದಾಯ ಹಾಗೂ ಗುಜರಾತ್‌ನ ದ್ರೋಹಿ ಹಾರ್ದಿಕ್ ಪಟೇಲನ ಕಾಮ ಲೀಲೆ” ಹಾಗೂ “ಪಟೇಲ್‌ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿರುವ ಹಾರ್ದಿಕ್‌ ಪಟೇಲನ ಅಸಲಿ ಮುಖ ಇದು” ಎಂದು ಹೇಳಿಕೊಂಡು ಮೇ 16,2017ರ ರಾತ್ರಿಯ ವಿಡಿಯೋ ತುಣುಕುಗಳನ್ನು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ.

“ನನ್ನ ಹೋರಾಟಕ್ಕೂ ವಿಡಿಯೋ ತುಣುಕುಗಳಿಗೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ವೈಯಕ್ತಿಕ ಜೀವನವನ್ನು ಗುರಿಯಾಗಿಸಿದ್ದಾರೆ. ಆದರೆ ಇದೇ ಅವರಿಗೆ ತಿರುಗುಬಾಣವಾಗಲಿದೆ” ಎಂದು ಹಾರ್ದಿಕ್ ಸಮಜಾಯಿಷಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಮನ್‌ಸುಖ್‌ ಮಾಂಡವ್ಯ “ಹಾರ್ದಿಕ್‌ ಪಟೇಲ್‌ರ ವಿಡಿಯೋಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸುಮ್ಮನೇ ಬಿಜೆಪಿ ಮೇಲೆ ದೂರುವುದಕ್ಕಿಂತ ಹಾರ್ದಿಕ್‌ ದೂರು ದಾಖಲಿಸಬಹುದಿತ್ತು” ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಹಾರ್ದಿಕ್‌ನ ಆಪ್ತಅಶ್ವಿನ್‌ ಪಟೇಲ್‌ “ಹಾರ್ದಿಕ್‌ ಒಬ್ಬ ಸ್ತ್ರೀ ಲಂಪಟ ಎಂದು ತಿಳಿದ ಮೇಲೆ ಆತನಿಂದ ದೂರವಾಗಿದ್ದೇನೆ. ಪಾಟೀದಾರ ಸಮುದಾಯದ ಹೆಣ್ಣು ಮಕ್ಕಳನ್ನೂ ಆತ  ಬಿಟಿಲ್ಲ. ಸೂರತ್‌, ಮಾರ್ಬಿ ಹಾಗೂ ರಾಜ್‌ಕೋಟ್‌ನಲ್ಲಿರುವ ಆತನ ಸಂಬಂಧಿಕರೂ ಸ್ತ್ರೀ ಲಂಪಟರು” ಎಂದು ಹೇಳಿದ್ದಾನೆ.

ತನ್ನ ಮಾತು ಮುಂದುವರೆಸಿ “2015ರಲ್ಲಿ ಹಾರ್ದಿಕ್‌ ಒಮ್ಮೆ ದೆಹಲಿಯಲ್ಲಿ ಒಬ್ಬ ಹುಡುಗಿಯೊಂದಿಗೆ ಬಂದು ಆಕೆಯನ್ನು ತನ್ನ ಪತ್ನಿ ಎಂದಿದ್ದ. ಬಳಿಕ ಆತ ಮನಾಲಿಗೆ ತೆರಳಿದ್ದ. ನನ್ನ ಬಳಿ ಈ ಕುರಿತು ದಾಖಲೆಗಳು ಹಾಗೂ ಆಡಿಯೋ ತುಣುಕುಗಳು ಇವೆ. ನಾಲ್ಕು ದಿನದ ಒಳಗೆ ಹಾರ್ದಿಕ್‌ ಸ್ಪಷ್ಟನೆ ನೀಡದಿದ್ದಲ್ಲಿ ಈ ಎಲ್ಲಾ ದಾಖಲೆಗಳನ್ನು ಬಹಿರಂಗ ಪಡಿಸುತ್ತೇನೆ” ಎಂದು ಅಶ್ವಿನ್‌ ಹೇಳಿದ್ದಾನೆ.

ಈ ಕುರಿತು ಪ್ರತಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಶಕ್ತಿ ಸಿಂಗ್‌ ಗೋಹಿಲ್‌ “ತೀರಾ ಕೆಳ ಮಟ್ಟದ ರಾಜಕಾರಣ ಮಾಡಲು ಬಿಜೆಪಿ ಮುಂದಾಗಿದೆ. ಇಂಥ ಕಾರ್ಯಗಳಿಂದ ಪ್ರಜೆಯ ಮೂಲಭೂತ ಹಕ್ಕನ್ನು ಕಸಿದಂತಾಗುತ್ತದೆ” ಎಂದಿದ್ದಾರೆ.

Leave a Reply

Your email address will not be published. Required fields are marked *

17 − 8 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

 

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

Back To Top