About Us Advertise with us Be a Reporter E-Paper

Breaking Newsರಾಜ್ಯ

ಆರನೇ ಬಾರಿ ಮುಳುಗಿ ದಾಖಲೆ ಬರೆದ ಹೆಬ್ಬಾಲೆ ಸೇತುವೆ

ಕಾಫಿನಾಡಲ್ಲಿ ಮುಂದುವರಿದ ಮಳೆ: 30 ವರ್ಷದ ನಂತರ 24 ಗಂಟೆಗಳ ಕಾಲ ಮುಳುಗಿದ ಸೇತುವೆ

ಚಿಕ್ಕಮಗಳೂರು: ಕಾಫಿನಾಡು ಮಲೆನಾಡು ಭಾಗದಲ್ಲಿ ವರುಣ ತನ್ನ ಆರ್ಭಟ ಮುಂದುವರೆಸಿದ್ದಾನೆ. ಅಪಾರ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೊರನಾಡು ಸಂಪರ್ಕಿಸುವ ಸೇತುವೆ ಆರನೇ ಬಾರಿ ಮುಳುಗಿ ದಾಖಲೆ ಬರೆದಿದೆ.

ಹತ್ತು ದಿನಗಳಿಂದ ಕಾಫಿನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ತತ್ತರಿಸಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಆರನೇ ಬಾರಿ ಮುಳುಗಿದೆ. ಇನ್ನು ನೀರಿನ ಪ್ರಮಾಣ ಹೆಚ್ಚುತ್ತಿದ್ದು, 30 ವರ್ಷಗಳ ನಂತರ ಹೆಬ್ಬಾಳೆ ಸೇತುವೆ 24 ಗಂಟೆಗಳ ಕಾಲ ಮುಳುಗಡೆಯಾಗಿ ಇತಿಹಾಸ ಸೃಷ್ಟಿಸಿದೆ.

ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿಯ ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಗಾಳಿಸಹಿತ ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ರಸ್ತೆಗೆ ಮರ ಬಿದ್ದು ಕೂವೆ ಹಾಗೂ ಆನೆಗುಂಡಿ ಗ್ರಾಮ ಸಂಪರ್ಕ ಕಡಿತಗೊಂಡಿದೆ. ಕಡಬದ ಹೊಸ್ಮಠ ಸೇತುವೆ ಮುಳುಗಡೆಯಾಗಿದೆ. ಶೃಂಗೇರಿ ಘಟ್ಟ ಪ್ರದೇಶದ ಮಳೆಗೆ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಹೇಮಾವತಿ ನದಿ ಕೂಡ ಮೈ ದುಂಬಿ ಹರಿಯುತ್ತಿದೆ.

ಭಾರೀ ಗಾಳಿ ಮಳೆಗೆ ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ತೇಗೂರು ಪರಮೇಶ್ವರ ದೇವಸ್ಥಾನದ ಮೇಲ್ಛಾವಣಿ ಕುಸಿದಿದೆ.

Related Articles

Leave a Reply

Your email address will not be published. Required fields are marked *

Language
Close