ವಿಶ್ವವಾಣಿ

ಆಲಸ್ಯ ಬಿಟ್ಟಾಕಿ ಸರಳ ಮನೆ ಮದ್ದು ಉಪಯೋಗಿಸಿ!

ಬೆಳಗಾಯಿತು ಎಂದರೆ ಕೆಲವರಿಗೆ ಎದ್ದೇಳುವುದಕ್ಕೂ ಸೋಂಬೇರಿತನ ಇರುತ್ತದೆ. ಇನ್ನು ಕೆಲವರಿಗೆ ನಿದ್ದೆ ಕಡಿಮೆ, ಆಯಾಸ, ಸುಸ್ತು ಆವರಿಸಿರುತ್ತದೆ. ಇದರಿಂದ ದಿನವಿಡೀ ಹ್ಯಾಪ್‍‍ ಮೋರೆ ಹಾಕಿಕೊಮಡಿರುವ ಬದಲು ಉತ್ಸುಕರಾಗಿ ಇರಲು ಕೆಲ ಮನೆ ಮದ್ದುಗಳನ್ನು ಹೇಳುತ್ತೇನೆ ಕೇಳಿ.

ಓಟ್ಸ್ ಸೇವಿಸಿ: ಓಟ್ಸ್ ರವೆ ಒಂದು ಪೌಷ್ಠಿಕ ಆಹಾರ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರು ಇರುತ್ತದೆ ಜತೆಗೆ ಜೀರ್ಣಕ್ರಿಯೆಗೂ ನೆರವಾಗುತ್ತದೆ.
ಓಟ್ಸ್ ಸೇವನೆಯಿಂದ ಅದರಲ್ಲಿನ ನಾನಾ ರೀತಿಯ ವಿಟಮಿನ್‍‍ಗಳು ಮತ್ತು ಖನಿಜಗಳು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ದೇಹದಲ್ಲಿನ ಕೆಟ್ಟ ಕೊಬ್ಬಿನಾಂಶಗಳನ್ನು ನಿಯಂತ್ರಿಸಿ ಉತ್ತಮ ಕೊಬ್ಬಿನ ಅಂಶಗಳನ್ನು ಹೆಚ್ಚಿಸಲು ನೆರವಾಗುತ್ತದೆ.

ಡ್ರೈ ಫ್ರೂಟ್ಸ್: ಡ್ರೈ ಫ್ರೂಟ್ಸ್‍‍ಗಳಲ್ಲಿ ಒಮೆಗಾ 3 ಕೊಬ್ಬಿನ ಅಂಶಗಳು ಇರುತ್ತದೆ. ಇವುಗಳನ್ನು ಬೆಳಗ್ಗೆ ಸೇವಿಸುವುದರಿಂದ ಸುಸ್ತು ಮತ್ತು ಹಸಿವಾಗುವುದನ್ನು ತಡೆಯುತ್ತದೆ.
ಡ್ರೈ ಫ್ರೂಟ್ಸ್ ಸೇವನೆಯಿಂದ ವಿಟಮಿನ್‍‍ ಬಿ ಹಾಗೂ ನರ ವ್ಯವಸ್ಥೆ ಜತೆಗೆ ಮಾನಸೀಕ ಾರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಮಟ್‍‍ಗಳಿದ್ದು, ತಲೆ ನೊವು, ಉದ್ವೇಗ, ಸ್ನಾಯುಗಳ ನೋವನ್ನು ನಿವಾರಿಸುತ್ತದೆ.

ದ್ವಿದಳ ಧಾನ್ಯ: ದ್ವಿದಳ ಧಾನ್ಯಗಲ ಸೇವನೆಗಲಲ್ಲಿ ಪೌಷ್ಠಿಕಾಂಶ ಹೆಚ್ಚಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶಗಳಿದ್ದು ಅಡ್ಡಪರಿಣಾಮಗಳನ್ನು ಇಲ್ಲವಾಗಿಸುತ್ತದೆ. ದೇಹದಲ್ಲಿ ಉತ್ತಮ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಗಳು ಲಭ್ಯವಿದ್ದು ಸುಗಮ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ಡಾರ್ಕ ಚಾಕೋಲೆಟ್‍‍: ಮೆದುಳಿಗೆ ಹಾನಿ ಎಸಗುವ ಉತ್ಕರ್ಷಣಶೀಲ ಒತ್ತಡದ ವಿರುದ್ಧ ಹೋರಾಡುವ ಶಕ್ತಿ ಡಾರ್ಕ್ ಚಾಕೋಲೆಟ್‍‍ಗೆ ಇದೆ. ನರಗಲ ವ್ಯವಸ್ಥೆಗೆ ಪ್ರಚೋದಿಸುವ ಇದು, ಹೃದಯದ ಆರೊಗ್ಯವನ್ನೂ ವೃದ್ಧಿಸುತ್ತದೆ.

ಬಾಳೇಹಣ್ಣು ತಿನ್ನಿ: ದಿನ ಬೆಳಗ್ಗೆ ಬಾಳೆ ಹಣ್ಣು ತಿನ್ನುವುದರಿಂದ ಕಾರ್ಬೋಹೈಡ್ರೇಟ್‍‍ ಮತ್ತು ನೈಸರ್ಗಿಕ ಶಕ್ತಿಯ ಮಟ್ಟ ಹೆಚ್ಚಿತ್ತದೆ. ಜತೆಗೆ ದೇಹದ ತೂಕ ನಿಯಂತ್ರಣ, ಮನೋಭಾವನೆಗಳ ನಿಯಂತ್ರಣ, ಜೀರ್ಣಕ್ರಿಯೆ ಉತ್ತಮಗೊಳ್ಳಲು ಸಹಕಾರಿ.

ಗ್ರೀನ್‍‍ ಟೀ ಕುಡಿಯಿರಿ: ಇದರಲ್ಲಿ ಕೆಫೀನ್‍‍ ಮತ್ತು ಎಲ್-ಥಿಯಾನೈನ್ ಎಮಬ ಪೌಷ್ಠಿಕಾಂಶಗಳಿರುತ್ತದೆ. ಇದು ದೇಹಕ್ಕೆ ಹೆಚ್ಚಿನ ಶಕ್ತಿ ತುಮಬುವುದರ ಜತೆಗೆ ಮೆದುಳಿನ ಒತ್ತಡ ಕ್ಷಿಣಿಸಿದರೆ ಹೆಚ್ಚಿಸಲು ಸಹಕಾರಿ.