ವಿಶ್ವವಾಣಿ

ಇನ್ಫೋಸಿಸ್ ಗೆ 3,483 ಕೋಟಿ ನಿವ್ವಳ ಲಾಭ

ದೆಹಲಿ: ಐಟಿ ಉದ್ಯಮದ ದೈತ್ಯ ಕಂಪನಿಯಾದ ಇನ್ಫೋಸಿಸ್ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದ್ದು, 3,483 ಕೋಟಿ ರು. ನಿವ್ವಳ ಲಾಭ ಗಳಿಸುವ ಮೂಲಕ ಕಂಪನಿಯ ಲಾಭ ಶೇ. 3.7 ರಷ್ಟು ಹೆಚ್ಚಾಗಿದೆ.
ಕಳೆದ ವರ್ಷದ ಕೊನೆ ತ್ರೈಮಾಸಿಕದಲ್ಲಿ ಇನ್ಫೋಸಿಸ್ 19,128 ಕೋಟಿ ನಿವ್ವಳ ಲಾಭ ಗಳಿಸಿ, ಶೇ. 12ರಷ್ಟು ಲಾಭ ಹೆಚ್ಚಳಗೊಂಡಿತ್ತು. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭ ಭಾರಿ ಪ್ರಮಾನದಲ್ಲಿ ಕುಸಿತವಾಗಿದೆ.