ಇರಾನ್‌,ಇರಾಕ್‌ನಲ್ಲಿ ಭಾರೀ ಭೂಕಂಪ

Posted In : ವಿದೇಶ

ದೆಹಲಿ: ಇರಾನ್‌-ಇರಾಕ್‌ ಗಡಿ ಪರ್ವತ ಪ್ರದೇಶದಲ್ಲಿ ಉಂಟಾದ ಭೂಕಂಪನಕ್ಕೆ ಕನಿಷ್ಠ 200 ಮಂದಿ ಮೃತಪಟ್ಟಿದ್ದು 1,700ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 7.3ರಷ್ಟಿತ್ತು. ರಾತ್ರಿ 9:20ರ ವೇಳೆಗೆ ಹೆಚ್ಚಿನ ಮಂದಿ ಮನೆಯಲ್ಲಿದ್ದ ಸಂದರ್ಭ ಕಂಪನ ಉಂಡಾದ ಕಾರಣ ಹೆಚ್ಚಿನ ಸಾವೊ ನೋವುಗಳು ದಾಖಲಾಗಿವೆ.

ಪರ್ವತ ಪ್ರದೇಶದಲ್ಲಿ ಉಂಟಾದ ಭೂಕುಸಿತದ ಪರಿಣಾಮ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಕ್ಲಿಷ್ಟಕರವಾಗುತ್ತಿದ್ದು ರೆಡ್‌ ಕ್ರಾಸ್‌ನ 30ಕ್ಕೂ ಹೆಚ್ಚು ತಂಡಗಳು ನೆರವಿನ ಕಾರ್ಯದಲ್ಲಿ ಮಗ್ನವಾಗಿವೆ.

ಮೂಮೇಲ್ಮೈನಿಂದ 25 ಕಿಮೀ ಆಳದಲ್ಲಿ ಉಂಟಾದ ಕಂಪನ ಇರಾಕ್‌ ರಾಜಧಾನಿ ಬಾಗ್ದಾದ್‌ಅನ್ನು 20 ಸೆಕೆಂಡ್‌ಗಳ ಕಾಲ ಕಂಪಿಸಿದೆ.

ಪಶ್ಚಿಮ ಇರಾನ್‌ ಹಾಗೂ ಈಶಾನ್ಯ ಇರಾಕ್‌ ನಡುವೆ ಇರುವ 1,500 ಕಿಮೀ ಉದ್ದಕ್ಕೂ ಕಂಪನವಾಗಿದೆ.

1990ರಲ್ಲಿ ಕ್ಯಾಸ್ಪಿಯನ್‌ ಸಮುದ್ರದಲ್ಲಿ ಉಂಟಾದ ಕಂಪನದಿಂದ 40,000 ಮಂದಿ ಮೃತಪಟ್ಟು ಮೂರು ಲಕ್ಷಕ್ಕೂ ಅಧಿಕ ಮಂಧಿ ಗಾಯಗೊಂಡಿದ್ದರು.  ಕೇವಲ ಸೆಕೆಂಡ್‌ಗಳಲ್ಲಿ 2,000ಕ್ಕು ಅಧಿಕ ಗ್ರಾಮಗಳು ಹಾಗೂ ಡಜನ್‌ಗಟ್ಟಲೇ ಪಟ್ಟಣಗಳು ನೆಲಸಮವಾಗಿದ್ದವು.

Leave a Reply

Your email address will not be published. Required fields are marked *

seventeen + 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top