About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಇರಾನ್‌ ವಿರುದ್ಧ ಕಠಿಣ ನಿರ್ಬಂಧ ಮರಳಿ ತಂದ ಅಮೆರಿಕ

ಇರಾನ್‌ ವಿರುದ್ಧ ತನ್ನ ನಿರ್ಬಂಧವನ್ನು ಇನ್ನಷ್ಟು ಕಠಿಣಗೊಳಿಸಿರುವ ಅಮೆರಿಕ, ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ತೀಲಾಂಜಲಿ ಬಿಟ್ಟಿದೆ.

ಅಮೆರಿಕದ ನಿರ್ಬಂಧದ ಮೊದಲ ಎರಡು ಸುತ್ತುಗಳಲ್ಲಿ  ತನ್ನ ಬ್ಯಾಂಕ್‌ ನೋಟುಗಳು, ಕಾರುಗಳು ಸೇರಿದಂತೆ ತನ್ನೊಂದಿಗೆ ಇರಾನ್‌ಗೆ ಇದ್ದ ನಿಕಟತೆಗೆ ಕೊಡಲಿ ಏಟು ನೀಡಿದೆ. ಈ ಕಾರಣ, ಇರಾನ್‌ನ ರಿಯಾಲ್‌ ನಾಣ್ಯದ ಮೌಲ್ಯದಲ್ಲಿ ಅರ್ಧದಷ್ಟು ಕುಸಿತ ಕಂಡುಬಂದಿದೆ.

2015ರಲ್ಲಿ ಇರಾನ್‌ನೊಂದಿಗೆ ಮಾಡಿಕೊಂಡಿದ್ದ ಬಹುಪಕ್ಷೀಯ ಅಣ್ವಸ್ತ್ರ ಒಪ್ಪಂದದಿಂದ ಅಮೆರಿಕವನ್ನು ಹಿಂದಕ್ಕೆ ಪಡೆಯುವುದಾಗಿ ಅಧ್ಯಕ್ಷೀಯ ಚುನಾವಣೆಯ ತಮ್ಮ ಪ್ರಚಾರದ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು.

ಒಪ್ಪಂದದ ಕುರಿತಂತೆ ಇನ್ನೊಮ್ಮೆ ಸಿಡಿದೆದ್ದಿರುವ ಟ್ರಂಪ್‌,”ಇದೊಂದು ವಿವೇಚನಾರಹಿತ ಒಪ್ಪಂದವಾಗಿದ್ದು, ಅಣ್ವಸ್ತ್ರ ಬಾಂಬ್‌ ಹೊಂದದಂತೆ ಇರಾನ್‌ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದೆ” ಎಂದಿದ್ದರು. ಒಪ್ಪಂದದಿಂದ ಹಿಂದೆ ಸರಿಯದಂತೆ ಪಾಲುದಾರರಾದ ಬ್ರಿಟನ್‌, ಚೀನಾ, ಫ್ರಾನ್ಸ್‌, ಜರ್ಮನಿ, ರಷ್ಯಾ ಹಾಗು ಐರೋಪ್ಯ ಒಕ್ಕೂಟಗಳು ಕೇಳಿಕೊಂಡರೂ ಟ್ರಂಪ್‌ ತಮ್ಮ ನಿಲುವನ್ನು ಬದಲಿಸಿಲ್ಲ.

ಕ್ಷಿಪಣಿಗಳ ಅಭಿವೃದ್ಧಿ ಹಾಗು ಅಣ್ವಸ್ತ್ರ ಕಾರ್ಯಕ್ರಮಗಳನ್ನು ಇನ್ನಷ್ಟು ಮುಂದುವರೆಸದಂತೆ ಇರಾನ್‌ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಉದ್ದೇಶ ಇರುವುದಾಗಿ ಟ್ರಂಪ್‌ ಹೇಳಿದ್ದಾರೆ. ಇರಾನ್‌ನೊಂದಿಗೆ ತಮಗೆ ಇರುವ ವಹಿವಾಟುಗಳ ಹಿತಾಸಕ್ತಿ ಕುರಿತು ಒಪ್ಪಂದದ ಇತರ ಪಾಲುದಾರ ದೇಶಗಳು ಚಿಂತನೆ ನಡೆಸಿವೆ.

Tags

Related Articles

Leave a Reply

Your email address will not be published. Required fields are marked *

Language
Close