ವಿಶ್ವವಾಣಿ

ಈ ಕಾರ್ ನಂಬರ್ ಪ್ಲೇಟ್ ಬೆಲೆ ಬರೋಬ್ಬರಿ 132 ಕೋಟಿ ರು.!

ಹೊಸ ಕಾರು ಖರೀದಿ ಮಾಡಿದಾಗ, ಅದಕ್ಕೆೆ ತಮಗಿಷ್ಟವಾದ ಫ್ಯಾನ್ಸಿ ನಂಬರ್ ಪಡೆಯಬೇಕು ಎಂದು ಕೆಲವರ ಖಯಾಲಿ. ಅದಕ್ಕಾಗಿ ಸಾವಿರಾರು ರುಪಾಯಿ ಖರ್ಚು ಮಾಡುತ್ತಾರೆ. ಹೆಚ್ಚೆೆಂದರೆ ಒಂದೋ ಎರಡೋ ಲಕ್ಷ ಕೊಟ್ಟು ತಮಗಿಷ್ಟದ ನಂಬರ್ ಪಡೆದುಕೊಳ್ಳುತ್ತಾಾರೆ. ಒಂದೆರಡು ಲಕ್ಷ ಖರ್ಚು ಮಾಡಿದರೆ ಇವನಿಗೆಂಥ ಹುಚ್ಚು ಎಂದು ಹುಬ್ಬೇರಿಸುವವರೇ ನಮ್ಮಲ್ಲಿ ಹೆಚ್ಚು. ಆದರೆ ಈ ಕಾರ್ ನಂಬರ್ ಪ್ಲೇಟ್ ಪಡೆಯಲು ಕೊಟ್ಟ ಹಣದ ಬಗ್ಗೆೆ ಕೇಳಿದರೆ ಖಂಡಿತಾ ಬೆಚ್ಚಿಯೇ ಬೀಳುತ್ತೀರ. ಅಂದಹಾಗೆ ಈ ಕಾರ್ ನಂಬರ್ ಪ್ಲೇಟ್‌ಗೆ ನೀಡಿದ್ದು ಬರೋಬ್ಬರಿ 132 ಕೋಟಿ! ಆ ನಂಬರ್‌ನಲ್ಲಿ ಅಂಥ ವಿಶೇಷತೆ ಏನಿದೆ ಅಂತಿರಾ? ಇದನ್ನೊಮ್ಮೆ ಓದಿ.

– ಕಾರ್‌ಗೆ ಎಫ್1 ಎಂಬ ನಂಬರ್ ಇಂಗ್ಲೆೆಂಡ್‌ನಲ್ಲಿ 132 ಕೋಟಿ ರುಪಾಯಿಗೆ ಬಿಕರಿಯಾಗಿದೆ.
– ಕಳೆದ ಒಂದು ದಶಕಗಳ ಹಿಂದೆ ಈ ನಂಬರ್ ಖಾಸಗಿಯವರ ಪಾಲಾದ ನಂತರ ವಿವಿಧ ಕಾರುಗಳಲ್ಲಿ ರಾರಾಜಿಸಿತ್ತು.
– ಮರ್ಸಿಡೀಸ್, ಮೆಕ್‌ಲಾರೆನ್ ಎಸ್‌ಎಲ್‌ಆರ್, ರೇಂಜ್ ರೋವರ್ ಹಾಗೂ ಬುಗಾಟಿ ಮುಂತಾದ ಕಾರುಗಳಲ್ಲಿ ಈ ನಂಬರ್ ಬಳಕೆಯಾಗಿತ್ತು.
– 2008ರಲ್ಲಿ ಈ ನಂಬರ್ 4 ಕೋಟಿ ರುಪಾಯಿಗೆ ಬಿಕರಿಯಾಗಿತ್ತು.
– 1904 ರಿಂದ 2008ರ ವರೆಗೆ ಈ ನಂಬರ್ ಎಸ್ಸೆೆ ಸಿಟಿ ಕೌನ್ಸಿಲ್ ಒಡೆತನದಲ್ಲಿತ್ತು.
– ಬಳಿಕ ಬ್ರಿಟನ್‌ನ ವಿಶೇಷ ಕಾರು ತಯಾರಿಕೆಗೆ ಹೆಸರುವಾಸಿಯಾದ ಖಾನ್ ಡಿಸೈನ್ ಮಾಲಕರಾದ ಅಫ್ಜಲ್ ಖಾನ್ ಸುಪರ್ದಿಗೆ ಒಳಪಟ್ಟಿತ್ತು.
– ಎಫ್1 ಹೆಸರಿನಲ್ಲಿ ಮೋಟೋ ಸ್ಪೋರ್ಟ್ಸ್‌ ನೆಡೆಯುವುದರಿಂದ ಹಾಗೂ ಇಂಥ ಎರಡು ಅಂಕೆಗಳ ನಂಬರ್ ಪ್ಲೇಟ್ ಅಪರೂಪವಾಗಿರುವುದರಿಂದ ಇಂಗ್ಲಂಡಿನಲ್ಲಿ ಈ ಸಂಖ್ಯೆೆಗೆ ಬಹಳ ಬೇಡಿಕೆ ಇದೆ. 
– ಇದು ವಿಶ್ವದಲ್ಲೇ ಅತೀ ಹೆಚ್ಚು ಬೆಲೆಗೆ ಮಾರಾಟವಾಗ ನಂಬರ್ ಪ್ಲೇಟ್ ಆಗಿದ್ದು, ಇದಕ್ಕಿತ ಮುಂಚೆ ‘ಡಿ5’ ಸಂಖ್ಯೆೆಯ ನಂಬರ್ ಪ್ಲೇಟನ್ನು ದುಬೈ ಮೂಲದ ಭಾರತೀಯ ಉದ್ಯಮಿ ಬಲ್ವಿದರ್ ಸಹಾನಿ 67 ಕೋಟಿಗೆ ಖರೀದಿಸಿದ್ದರು.
– 2008ರಲ್ಲಿ ‘1’ ಸಂಖ್ಯೆೆಯ ನಂಬರ್ ಪ್ಲೇಟ್ 66 ಕೋಟಿಗೆ ಅಬುಧಾಬಿಯಲ್ಲಿ ಮಾರಾಟವಾಗಿತ್ತು.
– ಭಾರತದಲ್ಲೂ ಇಂಥ ವಿಶೇಷ ಸಂಖ್ಯೆೆಗಳ ನಂಬರ್ ಪಡೆಯುವ ಅವಕಾಶವಿದ್ದು ಆರ್‌ಟಿಒ ಅಧಿಕಾರಿಗಳ ಮೂಲಕ ಪಡೆದುಕೊಳ್ಳಬಹುದು.
– ಭಾರತದಲ್ಲಿ ಫ್ಯಾನ್ಸಿ ನಂಬರ್ ಪಡೆಯಬೇಕೆಂದಿದ್ದರೆ ದ್ವಿಚಕ್ರ ವಾಹನಗಳಿಗೆ ರು. 5000-50000 ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ರು. 15000-100000ದ ವರೆಗೂ ನೀಡಬೇಕಾಗುತ್ತದೆ.
– ಒಂದು ವೇಳೆ ಒಂದೇ ನಂಬರ್‌ಗೆ ಒಬ್ಬರಿಗಿಂತ ಅಧಿಕ ಮಂದಿ ಅಪೇಕ್ಷೆೆ ಸಲ್ಲಿಸಿದರೆ, ಬಿಡ್ ಮಾಡುವ ಮೂಲಕ ನಿರ್ಧರಿಸಲಾಗುತ್ತದೆ. ಹೆಚ್ಚು ಬಿಡ್ ಸಲ್ಲಿಸಿದವರಿಗೆ ಆ ನಂಬರ್ ನೀಡಲಾಗುತ್ತದೆ.