About Us Advertise with us Be a Reporter E-Paper

ಯಾತ್ರಾ panel 1

ಉ.ಕ ದರ್ಶನ…

ವಿನುತಾ ಹೆಗಡೆ ಕಾನಗೋಡ

ಮುರುಡೇಶ್ವರ
ಮುರುಡೇಶ್ವರ ನಗರವು ಭಟ್ಕಳ ತಾಲೂಕು ಕೇಂದ್ರ ದಿಂದ ಸುಮಾ ರು 16 ಕಿ.ಮೀ. ದೂರದಲ್ಲಿದೆ. ಬೃಹ ದಾಕಾರದ ಬಂಡೆಗಲ್ಲಿನ ಮೇಲೆ ಶಿವನ ವಿಗ್ರಹ ಸ್ಥಾಪಿ ಸಲಾಗಿದೆ. ದೇವಸ್ಥಾನವೂ ಕೂಡ ಇದೆ. ಸಮುದ್ರವು ದೇವಸ್ಥಾನದ ಮೂರು ಕಡೆಯಿಂದ ಸುತ್ತುವರೆದಿದ್ದು, ಒಂದು ಸಣ್ಣ ಗುಡ್ಡವನ್ನು ಸೃಷ್ಟಿಸಿದೆ. ಇದನ್ನು ಕಂದೂಕ ಗಿರಿ ಎಂದೂ ಕರೆಯುತ್ತಾರೆ.

ಇಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದು, ಗೋವಾ ವಿಮಾನ ಬಂದಿಳಿದು ಕಾರವಾರ, ಅಂಕೋಲಾ, ಕುಮಟಾ ಮಾರ್ಗ ವಾಗಿ ಮುರುಡೇಶ್ವಕ್ಕೆ ಬರಬಹುದು ಇದು 201 ಕಿಮಿ ದೂರವಾಗ ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ದಿಂದಲೂ ಸುಮಾರು 208 ಕಿಮಿ ದೂರವಾಗಲಿದ್ದು, ಎನ್ ಎಚ್ 63 ಮೂಲಕ ಅಥವಾ ಎನ್ ಎಚ್ 52 ಮತ್ತು 66 ಮೂಲ ಕವೂ ಬರಬಹುದಾಗಿದೆ. ಯಲ್ಲಾಪುರ, ಅಂಕೋಲಾ, ಕುಮಟಾ ಮಾರ್ಗವಾಗಿ ಬರಬಹುದು. ಬಸ್ ವ್ಯವಸ್ಥೆ ಕೂಡಾ ಇದೆ.

ಓಂ ಕಡಲ ತೀರ
ಓಂ ಕಡಲತೀರವು ಓಂ ಆಕಾರವನ್ನು ಎರಡು ಅರ್ಧ ವೃತ್ತಗಳನ್ನು ಹೊಂದಿದೆ. ಗೋಕರ್ಣ ದಲ್ಲಿ ಇದು ಅತ್ಯಂತ ಪ್ರಸಿದ್ಧ ಕಡಲತೀರವಾಗಿದೆ. ಓಂ ಕಡಲತೀರದ ಹೊರತಾಗಿ, ಗೊಕರ್ಣವು ಕುಡ್ಲೆ, ಹಾಲ್ ಮೂನ್ ಮತ್ತು ಪ್ಯಾರಡೈಸ್ ಕಡಲ ತೀರಗಳ ನೆಲೆಯಾಗಿದೆ. ಇಲ್ಲಿ ಸದಾ ವಿದೇಶಿ ಪ್ರವಾಸಿಗರನ್ನು ನಾವು ನೋಡ ಬಹುದಾಗಿದೆ. ಇದು ಕುಮಟಾದಿಂದ ಮಾದನಗೇರಿ ಮಾರ್ಗ ವಾಗಿ ಗೋಕರ್ಣ ತಲಪ ಬಹುದು, ಶಿರಸಿ ಕುಮಟಾ ಮಾರ್ಗವಾಗಿ, ಹುಬ್ಬಳ್ಳಿ ಯಿಂದ ಅಂಕೋಲಾ ಮಾರ್ಗವಾಗಿ, ಗೋವಾದಿಂದ ಕಾರವಾರ ಮಾರ್ಗವಾಗಿಯೂ ಬರಬಹುದಾಗಿದೆ.

ಶಿರಸಿ
ಜಿಲ್ಲೆಯ ಶಿರಸಿ ನಗರ ದಲ್ಲಿರುವ ಮಾರಿಕಾಮಬಾ ದೇವಾಲಯವು ಹಿಂದೂ ದೇವಸ್ಥಾನವಾಗಿದ್ದು, ಮಾರಿ ಕಾಂಬಾದೇವಿಯು ಇಲ್ಲಿನ ದೇವತೆ. ಈ ದೇವಸ್ಥಾನವು 1688ರಲ್ಲಿ ನಿರ್ಮಾಣ ಗೊಂಡಿದೆ. ಶಕ್ತಿ ಪೀಠವೆನಿಸಿರುವ ಈ ದೇವಾ ಲಯದ ಸುಂದರ ಕೆತ್ತನೆ ಗಳು, ಶಿಖರ ಮತ್ತು ಪ್ರಾಚೀನ ಕಲೆ ಇಲ್ಲಿ ಭಕ್ತರನ್ನು ಸೆಳೆಯುತ್ತಿದೆ. ಪ್ರತೀ ಎರಡು ವರ್ಷಕ್ಕೊಮ್ಮೆ ಒಂದು ವಾರ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದು ಶಿರಸಿ ನಗರ ದಲ್ಲೇ ಇರುವ ದೇವಸ್ಥಾನವಾಗಿದ್ದು, ಹುಬ್ಬಳ್ಳಿಯಿಂದ ಗೋಡ ಮಾರ್ಗವಾಗಿ ಬರಬಹುದಾಗಿದೆ. ಸಾಗರ ದಿಂದ ಸಿದ್ದಾಪುರ ಮಾರ್ಗವಾಗಿಯೂ ಇಲ್ಲಿಗೆ ಬರ ಬಹುದು. ಬಸ್ ಸೌಲಭ್ಯ ಎಲ್ಲೆಡೆಯಿಂದಲೂ ಇದೆ.

ಶಿರ್ವೆ ಬೆಟ್ಟ
ಕಾರವಾರ ಕಡಲ ತಡಿಯಲ್ಲಿ ಹಬ್ಬಿರುವ ಬೆಟ್ಟಗಳ ಸಾಲೇ ಶಿರ್ವೆ ಬೆಟ್ಟ. ಕವಿ ರವೀಂದ್ರನಾಥ ಟಾಗೋರರು ಈ ಕಡಲತಡಿಯ ಸೌಂದರ್ಯವನ್ನು ತಮ್ಮ ಕವಿತೆಯೊಂದರಲ್ಲಿ ಹಾಡಿ ಹೊಗಳಿದ್ದರು. ಸುಂದರ ಕಡಲು ತೀರ ಗಳು, ದ್ವೀಪಗಳು, ಸುತ್ತ ಹಚ್ಚ ಹಸರಿನ ವನರಾಶಿ ಹೊಂದಿದ ಕಾರವಾರವನ್ನು ‘ಕನ್ನಡ ನಾಡಿನ ಕಾಶ್ಮೀರ’ ಎಂದೂ ಸದಾಶಿವ ಗಢ ಕೋಟೆ, ಸೀಬರ್ಡ ನೌಕಾನೆಲೆ, ಜಲ ಸಾಹಸ ಕೇಂದ್ರ, ದುರ್ಗಾ ದೇಗುಲಗಳು ಇಲ್ಲಿನ ಪ್ರವಾಸಿ ತಾಣಗಳು. ಕಾರವಾರ ಹತ್ತಿರದ ಶಿರ್ವೆ ಗ್ರಾಮದ ಎದುರಿಗೆ ಶಿರ್ವೆ ಹೆಸರಿನ ಪರ್ವತ ಶ್ರೇಣಿ ಇದೆ. ಈ ಶ್ರೇಣಿಯ ನಡುವೆ, ನೆಲಮಟ್ಟದಿಂದ 3,500ರಿಂದ 4,000 ಅಡಿಗಳಷ್ಟು ಎತ್ತರದ ಬೃಹತ್ ಶಿಲಾಬಂಡೆ ಯೊಂದು ಎದ್ದು ನಿಂತಿದೆ. ಶಿರ್ವೆ ಪರ್ವತಶ್ರೇಣಿ ಇರುವುದು ಕಾರವಾರ ಪಟ್ಟಣದಿಂದ 35 ಕಿ. ಮೀ. ದೂರದಲ್ಲಿ. ಮಲ್ಲಾಪುರ ಮರ್ಗವಾಗಿ ಹೋಗುವ ರಸ್ತೆಯಲ್ಲಿ ಎಂಬ ಪುಟ್ಟ ಊರು ದಾಟುತ್ತಿದ್ದಂತೆಯೇ ಬಲಗಡೆ ಕಚ್ಚಾರಸ್ತೆ ಕಾಣಿಸುತ್ತದೆ. ಆ ದಾರಿಯಲ್ಲಿ ನಡದರೆ 4-5 ಕಿ.ಮೀ. ದೂರದಲ್ಲಿ ಶಿರ್ವೆ ಗ್ರಾಮವಿದೆ.

ಶಿರ್ವೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ರಸ್ತೆ ಯಿಂದ ಮೂರು-ನಾಲ್ಕು ಕಿ.ಮೀ. ಮುನ್ನಡೆದು ಎಡಭಾಗದ ಅರಣ್ಯ ತಿರುವಿನಲ್ಲಿ ಹೊರಳಿದರೆ ಶಿರ್ವೆ ಬೆಟ್ಟದ ಚಾರಣದ ಆರಂಭ. ತಿರುವಿನ ಎದುರಿನಲ್ಲಿ ಹೊಲ ಗದ್ದೆಗಳ ಸಾಲು ಸಾಲು. ಹೂಬಳ್ಳಿಗಳ ರಾಶಿ ಕಣ್ಣಿಗೆ ಹಬ್ಬ. ಮುಂದೆ ಎರಡು ಕಿ.ಮೀ. ವರೆಗೆ ಕಚ್ಚಾರಸ್ತೆ ದಾಟಿದ ಬಳಿಕ ಮಾತ್ರ ಎತ್ತರೆತ್ತದ ದಾರಿ. ಒಂದೂವರೆ ತಾಸಿನ ಕಾಲ್ನಡಿಗೆಯ ನಂತರ ಶಿರ್ವೆ ಬೆಟ್ಟ ಒಂದು ಬಯಲಿನ ಭಾಗದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಸದಾಶಿವಗಡ ಇದು ಕಾಳಿ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ಜಾಗ ದಲ್ಲಿ ಇರುವ ಒಂದು ಸಣ್ಣ ಊರು. ಇದು ಕಾರವಾರ ದಿಂದ 6 ಕಿ.ಮೀ ದೂರದಲ್ಲಿದೆ.

ಜಗತ್ ಪ್ರಸಿದ್ಧ ಯಾಣ
ಯಾಣ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಲ್ಲೊಂದು. ಪಶ್ಚಿಮ ಘಟ್ಟಗಳ ಶ್ರೇಣಿ ಯಲ್ಲಿದೆ. ಇದು ಶಿರಸಿ ಇಂದ 45 ಕಿ.ಮಿ. ದೂರ ದಲ್ಲಿದೆ. ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ’’ ಎಂಬ ಮಾತು ಚಾಲ್ತಿಯಲ್ಲಿದೆ. ಏಕೆಂದರೆ ಯಾಣಕ್ಕೆ ಯಾತ್ರೆ ಕೈಕೊಳ್ಳುವುದು ಹಿಂದೆ ಅಷ್ಟೊಂದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ರಸ್ತೆ ಯಾಗಿದೆ. ಕೇವಲ ಒಂದು ಕಿಲೋಮೀಟರ್ ದೂರವನ್ನಷ್ಟೇ ನಡೆಯ ಬೇಕಾಗುವದು. ಕುಮಟಾ ದಿಂದ ಹರಿಟೆಯ ಬಳಿಯ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗ ವಾಗಿ ಶಿರಸಿಯಿಂದ ಹೆಗಡೆಕಟ್ಟೆ ಮಾರ್ಗವಾಗಿ ಹಾದು ಯಾಣವನ್ನು ತಲುಪಬೇಕು. ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿ ಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ತಪ್ಪಿದ್ದಲ್ಲ.

ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ 120 ಮೀಟರ್ ಎತ್ತರ ವಾದ ಸುಮಾರು ಅಷ್ಟೇ ಅಗಲವಾದ ನೆಲ ಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪ ವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥ ವನಾದರು ನಿಬ್ಬೆರಗಾಗಿ ಪ್ರಕೃತಿಯ ಮಹಾ ಕೃತಿಗೆ ತಲೆ ಬಾಗಲೇ ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯ ವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವರಲಿಂಗ ಎರಡು ಮೀಟರ್ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ.

ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹೆಜ್ಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿ ಯನ್ನು ಸೇರುತ್ತದೆ. ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ ‘ಹೊಲತಿ ಶಿಖರ’ (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿ ತೀರ್ಥದ ನೀರನ್ನು ತಂದು ಗೋಕರ್ಣದ ಮಹಾ ಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ ಬತ್ತಲೇಶ್ವರ ಕವಿ ಇಲ್ಲಿ ವಾಸಿಸಿದ್ದನಂತೆ. ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ. ಇಲ್ಲಿಗೆ ಶಿರಸಿ ಅಥವಾ ಕುಮಟಾ ಮಾರ್ಗವಾಗಿ ತೆರಳ ಬಹುದಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close