ಊಮ್ಮೆನ್ ಚಾಂಡಿ ವಿರುದ್ಧ ತನಿಖೆಗೆ ಆದೇಶ

Posted In : ದೇಶ

ತಿರುವನಂತಪುರ: ಕೇರಳದ ಮಾಜಿ ಮುಖ್ಯಮಂತ್ರಿ ಊಮ್ಮೆನ್ ಚಾಂಡಿ ಹಾಗೂ ಆವರ ಸಂಪುಟದ ಕೆಲ ಸಚಿವರ ವಿರುದ್ಧ ಸೋಲಾರ್ ಹಗರಣದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದ್ದು ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ.

ಸೋಲಾರ್ ಪ್ಯಾನೆಲ್‌ಗಳನ್ನು ಪೂರೈಸುವುದಾಗಿ ಹೂಡಿಕೆದಾರರಿದಂದ ಹಣ ಪಡೆದು ವಂಚಿಸಿದ್ದ ದಂಪತಿಯೊಂದಿಗೆ ಹಿಂದೆ ಮುಖ್ಯ ಮಂತ್ರಿಯಾಗಿದ್ದ ಊಮ್ಮೆನ್ ಚಾಂಡಿ ಕಚೇರಿಯ ಮೂವರು ಅಧಿಕಾರಿಗಳು ಶಾಮೀಲಾಗಿದ್ದ ಕುರಿತು 2013ರಲ್ಲಿ ಬಂದಿದ್ದ ವರದಿ ಗಾಳಿಯೆಬ್ಬಿಸಿತ್ತು.

ಟೀಮ್ ಸೋಲಾರ್ ಕಂಪನಿಯಿಂದ ಲಂಚ ಪಡೆದು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಲಾಭಗಳನ್ನು ಮಾಡಿಕೊಟ್ಟ ಆರೋಪದ ಮೇಲೆ ಆಡಳಿತಾರೂಢ ಎಲ್‌ಡಿಎಫ್ ಸರಕಾರವು ಊಮ್ಮೆನ್ ಚಾಂಡಿ ವಿರುದ್ಧ ವಿಚಕ್ಷಣಾ ಸಮಿತಿಯ ತನಿಖೆಗೆ ಆದೇಶಿಸಿದೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಜಿ ಶಿವರಾಜನ್ ಆಯೋಗದ ವರದಿಯನ್ನು ಪರಿಗಣಿಸಿರುವ ಕೇರಳ ಸರಕಾರ ತನಿಖೆ ನಡೆಸಲು ಮುಂದಾಗಿದೆ.

Leave a Reply

Your email address will not be published. Required fields are marked *

seventeen + nine =

 
Back To Top