About Us Advertise with us Be a Reporter E-Paper

ಬಿಸಿನೆಸ್1

ಎಬೋಲ ಬೇಕಿಲ್ಲ ಭಯ

-ಸಂತೋಷ್ ಕುಮಾರ್ ಮೆಹಂದಳೆ

ಆಫ್ರಿಕೆ ಗಣರಾಜ್ಯದ ಆರೋಗ್ಯ ಇಲಾಖೆ ಪಟ್ಟಿಯಲ್ಲಿ ಇದರ ಹೆಸರೇ ಮೊದಲಿದೆ. ಜತೆಗೆ ವರ್ಷವೊಂದ ರಲ್ಲಿ ಇದು ತೆಕ್ಕೆಗೆಳೆದುಕೊಂಡಿರುವ ಮನುಷ್ಯರ ಸಂಖ್ಯೆಯೇ ಅನಾಮತ್ತು ಮೂವತ್ತು ಸಾವಿರ. ರೋಗ ಪತ್ತೆಯಾದರೆ ಸಾವಿನ ದಿನಾಂಕವನ್ನೂ ನಿಗದಿ ಮಾಡಿಕೊಂಡೆ ಬರುತ್ತಿದ್ದ ಈ ವೈರಸ್‌ಗೀಗ ದಶಕ ತುಂಬಿದೆ. ಸರಾಸರಿ ವರ್ಷಕ್ಕೆ  ಸಾವಿರ ಮನುಷ್ಯರಿಗೆ ಹೊಗೆ ಹಾಕಿಸುತ್ತಿದ್ದ ಇದ ಕ್ಕೀಗ ಕಡಿವಾಣ ಬೀಳುತ್ತಿದೆ. ಭಾರತದಲ್ಲೂ ಆಗೀಗ ಅಲ್ಲೋಲ ಕಲ್ಲೋಲ ಮಾಡಿದ ಎಬೋಲ (ಹ್ಯಾಮೇರಾಜಿಕ್ ಪೀವರ್)ಇದೀಗ ವೈದ್ಯ ವಿಜ್ಞಾನಿಗಳ ಶೀಷೆಗಳಲ್ಲಿ ಬಂಧಿಯಾಗಿ ಕದಲು ತ್ತಿದೆ. ಅಷ್ಟರ ಮಟ್ಟಿಗೆ ಜಗತ್ತಿಗೆ ಮಾರಕ ಎಬೋಲ ದಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಎಬೋಲ ಹುಟ್ಟಿದ್ದು ಆಫ್ರಿಕೆಯ ಜ್ವೈರೆಯ ಲ್ಲಾದರೂ ಇದರ ನಿರೋಧಕ ಔಷಧ ಹುಟ್ಟಿದ್ದು ದೂರದ ಗಿನಿಯಲ್ಲಿ. ಅದರಲ್ಲೂ ಜಗತ್ತಿನಲ್ಲೇ ಮೊದಲ ಬಾರಿಗೆ ವೈದ್ಯಕೀಯ ಪ್ರಯೋಗ (ಮೆಡಿಕಲ್  ನೇರವಾಗಿ ಮನುಷ್ಯರನ್ನೇ ಒಡ್ಡಿಸಿಕೊಂಡ ರೋಗ ಇದು. ಇಲ್ಲಿಯವರೆಗೆ ಯಾವ ಔಷಧಿಗೂ ವಿಶ್ವಸಂಸ್ಥೆ ನೇರವಾಗಿ ಮನುಷ್ಯ ಮೇಲೆಯೇ ಪ್ರಯೋಗ ಮಾಡಿ ಫಲಿ ತಾಂಶಕ್ಕಾಗಿ ಕಾಯ್ದ ಉದಾ.ಗಳಿಲ್ಲ. ಅದೇನಿದ್ದರೂ ಮೊದಲು ಪ್ರಾಣಿ-ಪಕ್ಷಿ, ಇಲಿಗಳ ಮೇಲೆಲ್ಲ ಪ್ರಯೋಗವಾಗಿ ನಂತರ ಮನುಷ್ಯರ ರಕ್ತನಾಳಕ್ಕೆ ಪ್ರವೇಶಿಸಿ ರೋಗ ನಿರೋಧಕಗಳು ತಯಾರಾಗುತ್ತಿ ದ್ದವು. ಆದರೆ ಈ ಏಬೋಲ ಎಬ್ಬಿಸಿದ್ದ  ಹಾವಳಿ ಅದೆಷ್ಟಿತ್ತೆಂದರೆ, ಹೇಗಿದ್ದರೂ ಹಿಡಿತಕ್ಕೆ ಸಿಗದೆ ಜನ ಸತ್ತು ಹೋಗುತ್ತಿದ್ದಾರೆ ಸಾಯುವ ರೋಗಿಗಳನ್ನೆ ಗಿನಿಪೆಗ್ ಮಾಡುವುದರಲ್ಲಿ ಯಾವ  ಇಲ್ಲ ಎನ್ನಿಸಿರಬೇಕು. 2014 ರ ಸೆಪ್ಟೆಂಬರ್ ಹೊತ್ತಿಗೆ ಪರವಾನಿಗೆ ಸಿಗುತ್ತಿದ್ದಂತೆ, ಸಾಲುಸಾಲು ಹೆಣ ವಾಗುತ್ತಿದ್ದ ರೋಗಿಗಳೆದುರಿಗೆ ಉಸಿರು ಬಿಗಿ ಹಿಡಿದು, ಹಗಲುರಾತ್ರಿ ಕಾಯ್ದ ನಿಂತು ಪ್ರಯೋಗ ಕ್ಕಿಳಿದ ವಿಜ್ಞಾನಿಗಳ ತಂಡ ಗೆಲುವಿನ ನಗೆ ಬೀರಿದೆ.

ವೈರಸ್ ನಿಯಂತ್ರಣದ ವರಸೆ ಬದಲಿಸಿದ ಪರಿ

RVSV-ZIVB-40 ಎಂಬ ಸಾಂಕೇತಿಕ ಶಬ್ದ ದಿಂದ ಗುರುತಿಸಲಾಗುತ್ತಿರುವ ಈ ಲಸಿಕೆಯ ರಹಸ್ಯ ಕೈಗೆಟುಕಲು ಸುಮಾರು ಐನೂರು ಜನ ವಿಜ್ಞಾನಿಗಳು ದುಡಿದಿದ್ದರೆ, ಅದಕ್ಕೂ ಮೊದಲು ಒಟ್ಟಾರೆ ಬಲಿಯಾದವರ  ಐದು ಲಕ್ಷದ ಆಸುಪಾಸು. ಜ್ವೈರೆ, ಲೈಬಿರಿಯ, ಸಿಯಾರ್ರ ಲಿಯೋನ್, ಕಾಂಗೊಗಳಲ್ಲಿ ಹಾವಳಿ ನಡೆಸಿದ ಈ ಜ್ವರರೂಪಿ ರೋಗದ ವ್ಯಾಲಿಡಿಟಿ ಹೆಚ್ಚೆಂದರೆ ಎರಡು ವಾರ.

Zmaap ಎನ್ನುವ ಅಮೆರಿಕೆಯ ಇನ್ನೊಂದು ಲಸಿಕೆ ಕೂಡಾ ಪರಿಣಾಮಕಾರಿ ಪ್ರಭಾವ ಬೀರಿದ್ದು ಸುಮಾರು ಹನ್ನೆರಡು ಸಾವಿರ ಜನ ಮೇಲಿನ ಪ್ರಯೋಗ ಯಶಸ್ವಿಯಾಗಿದ್ದು, ಎಬೋಲ ಒಂದು ಹದಕ್ಕೆ ಬಂದಂತೆ ಕಾಣಿಸುತ್ತಿದೆ. ಆದರೆ ಹರಡುವ ವೇಗ ಲಸಿಕೆ ದಕ್ಕುತ್ತಿರುವ ವೇಗಕ್ಕಿಂತ ಹಲವು ಪಟ್ಟು ಹೆಚ್ಚಿರುವುದರಿಂದ ಪ್ರಸ್ತುತ ಪ್ರತಿ  ರೋಗವೇ ಬರದಂತೆ ಕಾವಲು ಕಾಯು ತ್ತಿವೆ. ಕಾರಣ ಸುಮ್ಮನೆ ರೋಗ ಪೀಡಿತನೊಂದಿಗೆ ನೀವು ಇದ್ದರೂ ಸಾಕು ಅದು ನಿಮ್ಮನ್ನು ಆವರಿಸಿ ಕೊಳ್ಳಬಲ್ಲಷ್ಟು  ಸಾಂಕ್ರಮಿಕ ಮತ್ತು ಶಕ್ತಿಶಾಲಿ ವೈರಸ್ ಹೆಸರೇ ಎಬೋಲ. ಇದು ಕಾಂಗೋ ನದಿಯ ಹೆಸರು. ಮೂಲತ: ಹಿಂದೊಮ್ಮೆ ಆವರಿ ಸಿದ್ದ ಮಾಬರ್ಗ್ ಎಂಬ ರೋಗದ ಇನ್ನಷ್ಟು ಬಿರುಸುಗೊಂಡ ರೂಪವೇ ಎಬೋಲ ಆಗಿದೆ. ಜ್ವರದ ರೂಪದಲ್ಲಿ ಕಾಣಿಸಿಕೊಂಡು ದೇಹದ ಒಂದೊಂದೇ ಅಂಗಾಗವನ್ನು ಶಿಥಿಲಗೊಳಿಸಿ ಕೊನೆಗೆ ಪ್ರಮುಖ ಅಂಗವಾದ ಮೂತ್ರಪಿಂಡ  ಆವರಿಸಿ ಕೆಡುವುದರೊಂದಿಗೆ ರೋಗಿ ಹತ್ತನೆ ದಿನಕ್ಕೆ ಕಣ್ಮುಚ್ಚುತ್ತಾನೆ. ಇಷ್ಟು ವೇಗದ ಪ್ರಕ್ರಿಯೆ ಇರುವುದರಿಂದಾಗೇ ಎಬೋಲ ನಿಯಂತ್ರಣ ಕೈತಪ್ಪಿದ್ದು. ಆದರೆ ಯಾವಾಗ ಅದರ ವೇಗದ ಕೋಶಗಳು ಮನುಷ್ಯ ದೇಹದ ಪರಿಸರದಲ್ಲಿ ಒಳಜೀವಕೋಶಗಳನ್ನೇ ಬಳಸಿ ದ್ವಿಗುಣಗೊಳುತ್ತಿವೆ ಎಂದು ಗೊತ್ತಾಯಿತೋ, ವಿಜ್ಞಾನಿಗಳು ಅದರ ನಿಯಂತ್ರಣದ ವರಸೆಯನ್ನೇ ಬದಲಿಸಿದರು.

ಪ್ರತಿರೋಧಕ ಉತ್ಪಾದನೆ

ಪ್ರತಿ ಜೀವಿಯ ಹುಟ್ಟಿನ ಜತೆಗೆ ಅದರದ್ದೇ ದೇಹ ದಲ್ಲಿ ಪ್ರತಿಘಾತದ ಅಂಶವೂ ಇರುತ್ತದೆನ್ನುವುದು ಮೂಲ ವಿಜ್ಞಾನದ ಅಂಶ. ಇದನ್ನೆ ಆಧರಿಸಿ ಕೊಂಡು  ವೈರಸ್‌ನ್ನು ಪ್ರಯೋಗಾಲ ಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ಅದರ ಲ್ಲಿನ ಒಂದು ನಿರ್ದಿಷ್ಟ  ಪ್ರೋಟಿನ್ ಕಣ ಮಾನವನ ರಕ್ತಕ್ಕೆ ಅತ್ಯಂತ ತೀವ್ರವಾಗಿ ಸ್ಪಂದಿಸುವುದರಿಂದ, ಅದು ಮಾನವನ ದೇಹದಲ್ಲಿ ಇಮ್ಯೂನಿಟಿಯನ್ನು ಕೆಡುವಿ ಹಾಕುತ್ತ ಕ್ರಮೇಣ ಅಂಗಾಂಗಗಳ ಕೋಟೆ ಯನ್ನು ಆಕ್ರಮಿಸಿಕೊಳ್ಳುವಷ್ಟು ಬೆಳೆದು ಬಿಡ ತೊಡಗಿತ್ತು.  ಪ್ರೋಟಿನ್ ಕಣದ ಮೂಲ ರಚನೆಯನ್ನು ಅಭ್ಯಸಿಸಿ ಅದಕ್ಕೆ ಪ್ರತಿ ರೋಧಕವನ್ನು ಉತ್ಪಾದಿಸಲು ಮಾನವ ರಕ್ತಕಣದ ಬಳಕೆ ಮಾಡಿದ್ದಾರೆ. ವೈರಸ್‌ನ ಹೊರಮೈಗೆ ಆತುಕೊಂಡಿರುವ ಪ್ರೋಟಿನ್  ಬೆಳವಣಿಗೆ ಯನ್ನು ಹೆಚ್ಚಿಸುವಂತಹದ್ದು. ಅದು ತನ್ನ ಬೆಳವಣಿಗೆಗೆ ಮನುಷ್ಯನ ದೇಹದ ಜೀವಕೋಶ ಗಳನ್ನು ಬಳಸಿಕೊಳ್ಳುತ್ತಿತ್ತಲ್ಲ. ಅದನ್ನೆ ಚರ್ಮದ ಜೀವಕೋಶದ ಜತೆಗೆ ಸಂಯೋಜಿಸಿ, ಮನುಷ್ಯ ರಕ್ಷಣಾತ್ಮಕ ವಿಧಾನದಲ್ಲಿ ಕೂಡಲೇ ಪ್ರತಿರೋಧ ಉಂಟು ಮಾಡುವ ಕಾರ್ಯಾಚರಣೆಯಲ್ಲಿ ಸಂಚಲನೆಯನ್ನು ಸೃಷ್ಟಿಸಿದ್ದಾರೆ ವಿಜ್ಞಾನಿಗಳು.

ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಮಾನವನ ಜೀವ ಉಳಿಸುವ ಪ್ರತಿರೋಧಕಗಳ ಕಣಗಳೊಂದಿಗೆ ಮೇಲೆ ತಿಳಿಸಿದ ಪ್ರೋಟಿನ್ ಸಾರವನ್ನು, ಜೀವಕೋಶದ ಕಿಣ್ವಗಳೊಂದಿಗೆ ಸಂಯೋಜಿಸಿ ಮರುಬೆಳವಣಿಗೆಗಾಗಿ ದೇಹಕ್ಕೆ ಲಸಿಕೆಯ ರೂಪದಲ್ಲಿ ಸೇರಿಸಿದ್ದಾರೆ. ಮನುಷ್ಯನ ದೇಹದಲ್ಲಿ  ಕ್ಷಿಪ್ರವಾಗಿ ಪರಿಣಾಮ ಬೀರಲು ಆರಂಭವಾಗುತ್ತಿದ್ದಂತೆ ಅದರ ವೇಗ ವನ್ನು ಪಡೆದು ಪ್ರತಿರೋಧದ ಕಣಗಳು ಬೆಳೆದು ನಿಲ್ಲತೊಡಗಿದವು. ಕೃತಕವಾಗಿ ಸೇರಿಸಲಾಗಿದ್ದ ಜೀವರಕ್ಷಕವೂ ಅದರೊಂದಿಗೆ ಬೆಳೆದು ದೇಹದಲ್ಲಿ ಎಬೋಲ ವೈರಸ್ ಮೇಲೆ ದಾಳಿ ಮಾಡತೊಡಗಿ ಕಬಳಿಸಿಹಾಕುತ್ತಿವೆ. ಅಲ್ಲಿಗೆ ಒಂದು ದಿನದ ಹೋರಾಟದಲ್ಲಿ ರೋಗಿ ಹಿಡಿತಕ್ಕೆ ದಕ್ಕುತ್ತಿದ್ದಾನೆ. ಅಂದ ಹಾಗೆ ಸುಮಾರು ಹತ್ತುಸಾವಿರ ರೋಗಿಗಳ ಮೇಲೆ ಪ್ರಯೋಗ ಮಾಡಿರುವ ಝೀಮ್ಯಾಪ್ ಕೂಡ ಧನಾತ್ಮಕ ಫಲಿತಾಂಶವನ್ನೇ ಕೊಟ್ಟಿದ್ದು, ಗರ್ಭಿಣಿಯರಿಗೆ ತಗುಲಿದ ಸೋಂಕಿನ ಪರಿಣಾಮ ಶಿಶುವಿಗೆ  ತಡೆಯುವ ಮಟ್ಟಿಗೆ ಹಿಡಿತ ಸಾಧಿಸಲಾಗಿದ್ದು, ಇದರ ಫಲಿತಾಂಶ ಸರಿ ಸುಮಾರು ಶೇ.95. ಸಧ್ಯ ಇದು ಪ್ರಾಥಮಿಕವಾಗಿ ಮತ್ತು ರೋಗ ಶೇ.50ರಷ್ಟು ಉಲ್ಬಣಗೊಂಡಿದ್ದರೂ ಕಾರ್ಯ ನಿರ್ವಹಿಸು ತ್ತಿದ್ದು, ಇನ್ನಷ್ಟೆ ಇದರ ಉಳಿದ ಹಂತದ ಮೇಲೆ ಹಿಡಿತ ಸಾಧಿಸಬೇಕಿದೆ. ಆದರೆ ಆರಂಭದಲ್ಲೇ ಗುರುತಿಸುವ ಮೂಲಕವಾದರೂ ಎಬೋಲದಿಂದ ಮುಕ್ತಿ ದೊರೆಯುವ ನಿಟ್ಟಿನಲ್ಲಿ ವೈದ್ಯರು ಹೇಳುತ್ತಿ ದ್ದಾರೆ, ಇನ್ಮೇಲೆ ಅಂದರೆ ಎಬೋಲ – ಬೇಕಿಲ್ಲ ಭಯ ಎಂದು.

Leave a Reply

Your email address will not be published. Required fields are marked *

Language
Close