About Us Advertise with us Be a Reporter E-Paper

ಸಿನಿಮಾಸ್

ಎರಡೇ ದಿನಕ್ಕೆ 75 ಕೋಟಿ ಬಾಚಿದ ಸಂಜು!

ಬಹುನಿರೀಕ್ಷಿತ ಸಂಜು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಿಡುಗಡೆಯಾದ ಎರಡೇ ದಿನದಲ್ಲಿ ಸಂಜು ಸುಮಾರು 75 ಕೋಟಿ ರೂ ಬಾಚಿಒಂಡಿದೆ

ಬಿಡುಗಡೆಯಾದ ಮೊದಲ ದಿನ 34.75 ಕೋಟಿ ರೂಪಾಯಿ ಗಳಿಕೆ ಕಂಡ ಚಿತ್ರ ಎರಡನೇ ದಿನ 38.25 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಎರಡನೇ ದಿನ 38.25 ಕೋಟಿ ಗಳಿಕೆ ಕಂಡ ಚಿತ್ರ ಬಾಹುಬಲಿ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಬಾಹುಬಲಿ ಎರಡನೇ ದಿನ 40.28 ಕೋಟಿ ಗಳಿಕೆ ಕಂಡಿತ್ತು. ಆದ್ರೆ ರಣಬೀರ್, ಸಂಜು ಚಿತ್ರದ ಮೂಲಕ ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ದಾಖಲೆಯನ್ನು ಮುರಿದಿದ್ದಾರೆ.

ಎರಡನೇ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಬಾಹುಬಲಿ ಮೊದಲ ಸ್ಥಾನದಲ್ಲಿದೆ. ಸಂಜು ಎರಡನೇ ಸ್ಥಾನದಲ್ಲಿದ್ದರೆ ಸುಲ್ತಾನ್ ಮೂರನೇ ಹಾಗೂ ರೇಸ್-3 ನಾಲ್ಕನೇ ಸ್ಥಾನದಲ್ಲಿದೆ. ಭಜರಂಗಿ ಭಾಯಿಜಾನ್ ಹಾಗೂ ದಬಂಗ್ ಐದನೇ ಹಾಗೂ 6ನೇ ಸ್ಥಾನದಲ್ಲಿದೆ.

ಸಂಜು 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರವಾಗಿದೆ. ಮೂರೇ ದಿನದಲ್ಲಿ ಚಿತ್ರ 100 ಕೋಟಿ ಗಳಿಕೆ ಕಾಣಲಿದೆ ಎನ್ನಲಾಗ್ತಿದೆ.

Related Articles

Leave a Reply

Your email address will not be published. Required fields are marked *

Language
Close