ವಿಶ್ವವಾಣಿ

ಐವೂಮಿಯಿಂದ ಐ2 ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ

2 ಮತ್ತು 3 ನೇ ನಗರಗಳ ಗ್ರಾಹಕರಿಗೆಂದೇ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್ ಇದು. ಚೀನಾದ ಪ್ರಮುಖ ಎಲೆಕ್ಟ್ರಾನಿಕ್ ಕಂಪನಿಯಾಗಿರುವ ಐವೂಮಿ (ಗಿಔಔಒ) ಐ2 ಲೈಟ್ ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಟ್ಯಾಗ್‌ಲೈನ್ ಸ್ಟೇಅನ್‌ಇಂಟೆರೆಪ್ಟೆಡ್ ಎಂದಿರುವುದು ವಿಶೇಷವಾಗಿದೆ. ಇದು ಅತ್ಯುತ್ತಮವಾದ ವಿಶೇಷತೆಗಳನ್ನು  ಬಳಕೆದಾರರಿಗೆ ಅನಿರ್ಬಂಧಿತ ಬಳಕೆಯ ಅನುಭವವನ್ನು ನೀಡಲಿದೆ. ಹಿಂಬದಿಯಲ್ಲಿ ಡ್ಯುಯೆಲ್ ಕ್ಯಾಮೆರಾ ಇದ್ದು, ಅತ್ಯುತ್ಕೃಷ್ಟ ದರ್ಜೆಯ ಸಾಮರ್ಥ್ಯ ಮತ್ತು ಆಕರ್ಷಕ ವಿನ್ಯಾಸವನ್ನು ಒಳಗೊಂಡಿದೆ. ಇದರ ಬೆಲೆ 6499 ರೂಪಾಯಿಗಳಾಗಿದ್ದು, ದೇಶದ ನಂಬರ್ ಒನ್ ಇ-ಕಾಮರ್ಸ್ ಪೋರ್ಟಲ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 4 ಜುಲೈ 2018 ರಿಂದ ಮಾರಾಟವಾಗುತ್ತಿವೆ.

ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 5.45 ಇಂಚು  ವಿಸ್ತೀರ್ಣದ ಸ್ಕ್ರೀನ್ ಅನ್ನು ಹೊಂದಿದೆ. 18:9 ಸ್ಕ್ರೀನ್ ರೇಶಿ ಯೋದೊಂದಿಗೆ ಎಚ್‌ಡಿ ಮತ್ತು  ವ್ಯೂವ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಮೂಲಕ ಯಾವುದೇ ಅಡೆತಡೆ ಇಲ್ಲದೇ ಬಳಕೆದಾರರು ಇದನ್ನು ಬಳಸಬಹುದಾಗಿದೆ. 1440್ಡ720ಪಿ ರೆಸಲೂಶನ್ ಪ್ರಕಾಶಮಾನವಾಗಿದ್ದು, ಅತ್ಯುತ್ಕೃಷ್ಠವಾದ ವರ್ಣರಂಜಿತವಾದ ಫೋಟೋಗಳನ್ನು ಕ್ಲಿಕ್ಕಿಸಬಹುದಾ ಗಿದೆ. ಐ2 ಲೈಟ್ 13 ಮೆಗಾಪಿಕ್ಸೆಲ್+2ಮೆಗಾಪಿಕ್ಸೆಲ್ ಡ್ಯುಯೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. 5 ಪಿ ಯ ಲಾರ್ಗನ್ ಲೆನ್ಸೆ ಮತ್ತು 4 ಪಿ ಸ್ಯಾಮ್‌ಸಂಗ್‌ನ 8 ಎಂಪಿ ಸೆಲ್ಫಿ ಕ್ಯಾಮೆರಾದೊಂದಿಗೆ ಸೋನಿ ಸೆನ್ಸಾರ್ ಸಾಫ್‌ಟ್ ಫ್ಲಾಶ್ ಅನ್ನು ಒಳಗೊಂಡಿದೆ. 2ಎ ಫಾಸ್‌ಟ್  ನೊಂದಿಗೆ 4000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಇದು ದೀರ್ಘ ಕಾಲದವರೆಗೆ ಬಾಳಿಕೆ ಬರಲಿದೆ.

ಇನ್ನೊಂದು ವಿಶೇಷವೆಂದರೆ ಲ್ಯಾಪ್‌ಟಾಪ್ ಮೇಲೆ ಸ್ಕ್ರೀನ್ ಮಿರರಿಂಗ್ ವ್ಯವಸ್ಥೆಯನ್ನು ಹೊಂದಿದೆ. 1.5 ಜಿಎಚ್‌ಝಡ್ ಕ್ವಾಡ್-ಕೋರ್ 6739 ಪ್ರೊಸೆಸರ್ ಹೊಂದಿರುವ ಈ ಐ2 ಆಂಡ್ರಾಯ್‌ಡ್ ಒರಿಯೋ 8.1 ಮತ್ತು ಡ್ಯುಯೆಲ್ 4ಜಿ ವೋಲ್ಟೆ ಮೂಲಕ ಕಾರ್ಯನಿರ್ವಹಿಸಲಿದೆ. ಇದರ ಅತ್ಯುತ್ತಮ ಮತ್ತು ವಿನೂತನವಾದ ವಿಶೇಷತೆಯೆಂದರೆ ಫೋನ್ ಅನ್‌ಲಾಕ್ ಆಗಲು ಮುಖವನ್ನು ಗುರುತಿಸುತ್ತದೆ. ಅಂದರೆ, ಅನ್‌ಲಾಕ್ ಮಾಡಲು  ಕ್ಯಾಮೆರಾಗೆ ನಿಮ್ಮ ಮುಖ ತೋರಿಸಿದರೆ ಅನ್‌ಲಾಕ್ ಆಗುತ್ತದೆ. ಇದಕ್ಕೂ ಮುನ್ನ ಸೆಟಿಂಗ್‌ಸ್ ನಲ್ಲಿ ನಿಮ್ಮ ಮುಖ ಸ್ಕ್ಯಾನ್ ಆಗಿರಬೇಕು. 2 ಜಿಬಿ ರ್ಯಾಂ+16 ಜಿಬಿ ಆರ್‌ಒಎಂ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಮರ್ಕುರಿ ಬ್ಲ್ಯಾಕ್, ಸ್ಯಾಟರ್ನ್ ಗೋಲ್‌ಡ್, ಮಾರ್ಸ್ ರೆಡ್ ಮತ್ತು ನೆಪ್ಚೂನ್ ಬ್ಲ್ಯೂ ಬಣ್ಣಗಳಲ್ಲಿ ಲಭ್ಯವಿದೆ.

ಐವೂಮಿ ಐ2 ಲೈಟ್ ವೈಶಿಷ್ಟ್ಯತೆಗಳು

•  5.45 ಇಂಚಿನ ಎಚ್‌ಡಿ+ಇನ್‌ಸೆಲ್ ಫುಲ್  ಡಿಸ್‌ಪ್ಲೇ (18:9 ಸ್ಕ್ರೀನ್ ರೇಶಿಯೋ).

•  1440್ಡ720 ಪಿಕ್ಸೆಲ್ ರೆಸಲೂಶನ್

•  ಸಾಫ್‌ಟ್ ಫ್ಲ್ಯಾಶ್‌ನೊಂದಿಗೆ (ಸೋನಿ

ಸೆನ್ಸಾರ್-5ಪಿ ಲಾರ್ಗನ್ ಲೆನ್‌ಸ್) 13 ಎಂಪಿ+2ಎಂಪಿ ಡ್ಯುಯೆಲ್ ರಿಯರ್ ಕ್ಯಾಮೆರಾ

•  4 ಪಿ ಸ್ಲಿಮ್ ಲೆನ್‌ಸ್ನೊಂದಿಗೆ 8 ಎಂಪಿ ಸೆಲ್ಫಿ ಕ್ಯಾಮೆರಾ

•  2ಜಿಬಿ ರ್ಯಾಂ+16 ಜಿಬಿ ಆರ್‌ಒಎಂ. 128 ಜಿಬಿವರೆಗೆ ವಿಸ್ತರಣೆಗೆ ಅವಕಾಶ

•  2ಎ ಫಾಸ್‌ಟ್ ಚಾರ್ಜ್ ಮತ್ತು ಒಟಿಜಿ ಸಪೋರ್ಟ್‌ನೊಂದಿಗೆ 4000 ಎಂಎಎಚ್ ಬ್ಯಾಟರಿ

•   ಗುರುತಿಸಿ ಅನ್‌ಲಾಕ್ ಸಿಸ್ಟಂ 1.5 ಜಿಎಚ್‌ಝಡ್ ಕ್ವಾಡ್ ಕೋರ್, ಎಂಟಿಕೆ 6739 ಪ್ರೊಸೆಸರ್

•  ಸಿಮ್ ಸಪೋರ್ಟ್‌ನೊಂದಿಗೆ ಡ್ಯುಯೆಲ್ 4ಜಿ ವೋಲ್ಟೆ

•  ಆಂಡ್ರಾಯ್‌ಡ್

•  ಜಿಎಸ್‌ಎಂ/ಜಿಪಿಆರ್‌ಎಸ್/ಎಡ್‌ಜ್ (900/1800 ಎಂಎಚ್‌ಝಡ್) 8.1 ಒರಿಯೋ

•  ಡಬ್ಲ್ಯೂಸಿಡಿಎಂಎ (900/2100 ಎಂಎಚ್‌ಝಡ್)