lakshmi-electricals

ಆತ್ಮಹತ್ಯೆಗೆ ಯತ್ನ: ಇಬ್ಬರು ಮಕ್ಕಳು ಸಾವು

Posted In : ಉಡುಪಿ, ರಾಜ್ಯ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಬಳಿ ಗಂಗಾನಾಡು ಎಂಬಲ್ಲಿ  ಒಂದೇ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ.

ಮೃತ ಮಕ್ಕಳನ್ನು 16 ವರ್ಷದ ಅಶ್ವಿನ್ ಕುಮಾರ್ ಹಾಗೂ 14 ವರ್ಷದ ಐಶ್ವರ್ಯ ಹೆಬ್ಬಾರ್ ಎಂಬುವುದಾಗಿ ಗುರುತಿಸಲಾಗಿದೆ. ಇನ್ನು ಮಕ್ಕಳ ಹೆತ್ತವರಾದ 45 ವರ್ಷದ ಶಂಕರನಾರಾಯಣ ಹಾಗೂ 39 ವರ್ಷದ ಮಹಾಲಕ್ಷ್ಮೀ ಅವರ ಸ್ಥಿತಿ ಗಂಭೀರವಾಗಿದ್ದು, ಕುಂದಾಪುರದಲ್ಲಿರುವ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.  

 ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ದಂಪತಿ ತಮ್ಮ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 
 
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

six + 16 =

 
Back To Top