About Us Advertise with us Be a Reporter E-Paper

ದೇಶಪ್ರಚಲಿತ

ಒಂದೇ ದಿನದಲ್ಲಿ 2.85 ಲಕ್ಷ ಟ್ವಿಟರ್​ ಹಿಂಬಾಲಕರನ್ನು ಕಳೆದುಕೊಂಡ ಮೋದಿ..!

ದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್​ ನಕಲಿ ಖಾತೆಗಳನ್ನು ತೊಡೆದು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ದಿನದಲ್ಲಿ ಬರೋಬ್ಬರಿ 3 ಲಕ್ಷ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಮೋದಿ 43.4 ಮಿಲಿಯನ್​ ಫಾಲೋಯರ್​ಗಳನ್ನು ಹೊಂದಿದ್ದರು. ಆದರೆ ಇದೀಗ 43.1 ಹಿಂಬಾಲಕರನ್ನು ಹೊಂದಿದ್ದಾರೆ. ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ 17,000 ಫಾಲೋಯರ್​ಗಳನ್ನು ಕಳೆದುಕೊಂಡಿದ್ದಾರೆ.

ವಿಶ್ವದ ಪ್ರಮುಖರ, ಪ್ರಮುಖ ಸಂಘ ಸಂಸ್ಥೆಗಳ ಟ್ವಿಟರ್​ ಖಾತೆಗಳ ಮೇಲೆ 24 ಗಂಟೆಗಳ ನಿಗಾ ವಹಿಸುವ SocialBlade.com ಎಂಬ ವೆಬ್​​ಸೈಟ್​ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಅದರಂತೆ ಮೋದಿ ಅವರ @narendramodi ಟ್ವಿಟರ್​ ಖಾತೆಯು 2,84,746 ಫಾಲೋಯರ್​ಗಳನ್ನು ಕಳೆದುಕೊಂಡಿದೆ. ಇದೇ ವೇಳೆ ಪ್ರಧಾನಮಂತ್ರಿ ಕಚೇರಿ ಖಾತೆ @PMOIndia ಕೂಡ 140,635 ಫಾಲೋಯರ್​ಗಳನ್ನು ಕಳೆದುಕೊಂಡಿದೆ.

ಇನ್ನೂ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರ @RahulGandhi ಖಾತೆ 17,503 ಫಾಲೋಯರ್​ಗಳನ್ನು ಕಳೆದುಕೊಂಡಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಕಾಂಗ್ರೆಸ್ ಮುಖಂಡ ಶಶಿ ತರೂರ್​ ಒಂದೂವರೆ ಲಕ್ಷ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ನಕಲಿ ಖಾತೆಗಳು, ನಿರ್ಬಂಧಿತ ಖಾತೆಗಳನ್ನು ತನ್ನ ವೇದಿಕೆಯಿಂದ ನಿರ್ಮೂಲನೆ ಮಾಡುವುದಾಗಿ ಟ್ವಟಿರ್​ ಇತ್ತೀಚೆಗಷ್ಟೇ ಘೋಷಿಸಿತ್ತು. ಅದರಂತೆ ಶುದ್ಧಿ ಕಾರ್ಯಕ್ಕೆ ಟ್ವಿಟರ್​ ಚಾಲನೆ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಫಾಲೋಯರ್​ಗಳನ್ನು ಹೊಂದಿರುವವರ ಅಕೌಂಟ್​ಗಳಲ್ಲಿ ಭಾರಿ ಪ್ರಮಾಣದಲ್ಲಿ ಕ್ಷಿಣಿಸುತ್ತಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ವಿಟರ್​ನ ಕಾನೂನು, ನೀತಿ ನಿರೂಪಣಾ ವಿಭಾಗದ ಮುಖ್ಯಸ್ಥ ವಿಜಯ್​ ಗದ್ದೆ, ಹಿಂಬಾಲಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿರುವುದರಿಂದ ಹಲವರಿಗೆ ಬೇಸರವಾಗಿರಬಹುದು. ಆದರೆ, ನಾವು ವಿಶ್ವಾಸಾರ್ಹತೆ, ಪಾರದರ್ಶಕತೆ ಮೂಲಕ ಟ್ವಿಟರ್​ಅನ್ನು ವಿಶ್ವಾಸನೀಯ ಮಾಧ್ಯಮವನ್ನಾಗಿಸಬೇಕಿದೆ ಎಂದಿದ್ದಾರೆ.

ಯಾರ್ಯಾರು ಎಷ್ಟೆಷ್ಟು ಹಿಂಬಾಲಕರನ್ನು ಕಳೆದುಕೊಂಡರು?
ಬರಾಕ್​ ಒಬಾಮ – 4,00,000
ಡೊನಾಲ್ಡ್​ ಟ್ರಂಪ್​ – 1,00,000
ಅರವಿಂದ ಕೇಜ್ರಿವಾಲ್ – 91,555
ಸುಷ್ಮಾ ಸ್ವರಾಜ್​ -74,132
ಅಮಿತ್​ ಶಾ – 33,363

Tags

Related Articles

Leave a Reply

Your email address will not be published. Required fields are marked *

Language
Close