Sri Ganesh Tel

ಕನಕನಿಗೆ ಹೆಚ್ಚಿದ ಬೇಡಿಕೆ..?

Posted In : ಸಿನಿಮಾ ಸಮಾಚಾರ

ದುನಿಯಾ ವಿಜಿ ಹಾಗೂ ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ‘ಕನಕ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಸಾಕಷ್ಟು ಸದ್ದು ಮಾಡಿದ್ದು ಚಿತ್ರದ ಗೆಲುವಿನ ಸೂಚನೆ ತಂಡಕ್ಕೆ ಸಿಕ್ಕಿದೆ. ಸದ್ಯ ಚಿತ್ರ ಸೆನ್ಸಾರ್ ಅಂಗಳದಲ್ಲಿದ್ದು, ಸರ್ಟಿಫಿಕೇಟ್‌ಗಾಗಿ ಚಿತ್ರತಂಡ ಕಾಯುತ್ತಿದೆ. ಇದರ ಮಧ್ಯೆ ಹಿಂದಿ, ತೆಲುಗು, ತಮಿಳು ಸೇರಿದಂತೆ ಇತರ ಭಾಷೆಗಳಿಂದ ಹಲವು ನಿರ್ಮಾಪಕರು ಚಿತ್ರದ ಡಬ್ಬಿಂಗ್ ಹಕ್ಕುಗಳನ್ನು ಕೇಳಿಕೊಂಡು ಚಂದ್ರು ಅವರನ್ನು ಸಂಪರ್ಕಿಸಿದ್ದಾರಂತೆ.

ಅದರ ಜತೆಯಲ್ಲಿ ಚಿತ್ರದ ಹಂಚಿಕೆಯ ಹಕ್ಕುಗಳನ್ನು ಕೇಳಿಕೊಂಡು ಹಲವು ಡಿಸ್ಟ್ರಿಬ್ಯೂಟರ್‌ಗಳು ಚಂದ್ರು ಅವರೊಂದಿಗೆ ಮಾತುಕತೆ ನಡೆಸಿದ್ದಾರಂತೆ. ಸ್ವಂತ ಬ್ಯಾನರ್‌ನ ಸಿನಿಮಾ ಬಿಡಗುಡೆಗೂ ಮೊದಲೆ ನಿರ್ದೇಶಕ ಕಂ ನಿರ್ಮಾಪಕ ಆರ್. ಚಂದ್ರು ಅವರಿಗೆ ನಾಲ್ಕೈದು ಚಿತ್ರ ನಿರ್ದೇಶಿಸುವಂತೆ ಆಫರ್‌ಗಳು ಹುಡುಕಿಕೊಂಡು ಬಂದಿವೆ. ತಮ್ಮ ಕನಸಿನ ‘ಕನಕ’ ಬಿಡುಗಡೆಗೆ ಕಾಯುತ್ತಿರುವ ಚಂದ್ರು ಮುಂದಿನ ಚುನಾವಣೆ ಆಗುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಲು ತೀರ್ಮಾನಿಸಿದ್ದಾರಂತೆ.

ಎಲೆಕ್ಷನ್ ಮುಗಿದ ಬಳಿಕ ಮುಂದಿನ ನಡೆ ನಿರ್ಧರಿಸಲಿರುವ ಚಂದ್ರು ಅವರು ಚುನಾವಣೆಗೆ ನಿಲ್ಲುತ್ತಾರೆ ಎಂಬ ವದಂತಿಗಳೂ ಕೇಳಿಬರುತ್ತಿವೆ. ದುನಿಯಾ ವಿಜಿ, ಹರಿಪ್ರಿಯಾ, ಮಾನ್ವಿತಾ ಹರೀಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಚಂದನವನದಲ್ಲಿ ಸದ್ಯ ‘ಅಂಜನಿಪುತ್ರ’, ‘ಕನಕ’, ‘ಚಮಕ್’, ಟಗರು’ನಂಥ ದೊಡ್ಡ ಸಿನಿಮಾಗಳ ಎದುರು ಬೇರೆ ಚಿತ್ರ ಬಿಡುಗಡೆಗೆ ನಿರ್ಮಾಪಕರು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದರ ಮಧ್ಯೆ ಪರಭಾಷೆಯ ಚಿತ್ರಗಳೂ ಕನ್ನಡ ನಾಡಿನಲ್ಲಿ ತೆರೆ ಕಾಣಲಿದ್ದು ಹೊಸಬರ ಸಿನಿಮಾ ರಿಲೀಸ್‌ಗೆ ಒಂದು ಕ್ಷಣ ಯೋಚಿಸುವ ಹಂತ ತಲುಪಿದೆ.

Leave a Reply

Your email address will not be published. Required fields are marked *

six − 6 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top