lakshmi-electricals

ಕಾರುಗಳು ಮುಖಾಮಖಿ ಡಿಕ್ಕಿ: ಎರಡು ಸಾವು

Posted In : ರಾಜ್ಯ, ಹಾಸನ

ಹಾಸನ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅರಣ್ಯ ಇಲಾಖೆ ನಿವೃತ್ತ ವಲಯ ಅರಣ್ಯಾಧಿಕಾರಿ ಸಿ. ಜಿ. ಮಂದಣ್ಣ ಹಾಗೂ ಒಂದು ಮಗು ಮೃತಪಟ್ಟಿದೆ.

ದುರ್ಘಟನೆ ಚನ್ನರಾಯಪಟ್ಟಣ ತಾಲೂಕಿನ ಬರಗೂರು ಶೆಟ್ಟಿಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗೃಹ ಪ್ರವೇಶ ನಿಮಿತ್ತ ಕುಟುಂಬ ಸಮೇತರಾಗಿ ಮಂದಣ್ಣ ಅವರು ಬೆಂಗಳೂರಿಗೆ ಹೋಗಿ, ಹಾಸನಕ್ಕೆ ಹಿಂದಿರುಗುವಾಗ ಮಾರ್ಗ ಮಧ್ಯೆ, ಅವರ ಹೋಂಡಾ ಅಸೆಂಟ್ ಕಾರಿಗೆ ಎದುರಿನಿಂದ ಬಂದ ರಿಡ್ಜ್ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಮಂದಣ್ಣ ಹಾಗೂ ಎದುರಿನ ಕಾರಿನಲ್ಲಿದ್ದ 4 ವರ್ಷದ ಮಗು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಪ್ರಕರಣ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

eighteen − 12 =

 
Back To Top