lakshmi-electricals

ಕಾರು-ಬೈಕ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು

Posted In : ತುಮಕೂರು, ರಾಜ್ಯ

ತುಮಕೂರು: ನಿನ್ನೆ ತಿಪಟೂರಿನ ಮತ್ತಿಹಳ್ಳಿ ಗೇಟ್ ಬಳಿ ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಹಾಗೂ ಯುವತಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.

ತುರುವೇಕೆರೆ ಮೂಲದ 21 ವರ್ಷದ ಜಗದೀಶ್‌‌, 21 ವರ್ಷದ ಐಶ್ವರ್ಯ ಮೃತರು. ಇವರಿಬ್ಬರು ಕಲ್ಪತರು ಕಾಲೇಜಿನಲ್ಲಿ ಬಿ.ಎಸ್ಸಿ ವಿದ್ಯಾರ್ಥಿಗಳಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇವರು ಬೈಕ್‌‌‌ನಲ್ಲಿ ಅರಸೀಕೆರೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿತ್ತು. ಈ ಬಗ್ಗೆ ಹೊನ್ನವಳ್ಳಿ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

10 − 8 =

 
Back To Top