About Us Advertise with us Be a Reporter E-Paper

ಆಟೋಮೊಬೈಲ್

ಕಾಲಕ್ಕೆ ತಕ್ಕಂತೆ ಕುಣಿಯದೇ ಕಾಲ್ತುಳಿತಕ್ಕೆ ಸಿಕ್ಕ YAHOO!

ಮರೀಚಿಕೆ: ಶ್ರೀನಿವಾಸ.ನಾ.ಪಂಚಮುಖಿ

Yet Another Hierarchical Offi cious Oracle ಎಂಬ ಹೆಸರನ್ನು ಕೇಳಿದ್ದೀರಾ? ಕೇವಲ ಎರಡು ದಶಕಗಳ ಹಿಂದೆ ಇಂಟರ್‌ನೆಟ್‌ನ ಇನ್ನೊಂದು ಹೆಸರೇ ‘ಯಾಹೂ’ ಆಗಿತ್ತು. 90ರ ದಶಕದ ಅಂತ್ಯದಲ್ಲಿ ಮತ್ತು 2000ರ ಪ್ರಾರಂಭದಲ್ಲಿ ಇ-ಮೇಲ್ ಉಪಯೋಗಿಸಲಾರಂಭಿಸಿದ ಬಹು ತೇಕರು ತಮ್ಮ ಪ್ರಥಮ ಇ-ಮೇಲ್ ಖಾತೆ ತೆರೆದದ್ದು, ಇಂದು ಅವಸಾನದಂಚಿನಲ್ಲಿರುವ/ಅಪ್ರಾಸಂಗಿಕ/ಅಸಂಗತವಾಗಿರುವ ಯಾಹೂವಿನಲ್ಲೇ! ಒಂದು ಯಾಹೂವಿನ ಚಾಟ್ ರೂಮ್ ಮತ್ತು ಯಾಹೂ ಮೆಸೆಂಜರ್ ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣದ ವೇದಿಕೆಗಳಾಗಿದ್ದವು. ಆಗ ಬಹುತೇಕ ಅಂತರ್ಜಾಲ ಬಳಕೆದಾರರ ಹೋಮ್ಪೇಜ್ ಕೂಡ ಯಾಹೂವಿನದೇ ಆಗಿರುತ್ತಿತ್ತು. ಅರ್ಥಾತ್ ಆಗ ಇಂಟರ್‌ನೆಟ್‌ನ ಜಗತ್ತಿನ ಪ್ರವೇಶ ದ್ವಾರ ಯಾಹೂವಿನ ಕಿಟಕಿಯಿಂದ ಹಾದು ಹೋಗುತ್ತಿತ್ತು!.

ಡೇವಿಡ್ ಫಿಲೋ ಮತ್ತು ಜರ್ರಿ ಯಾಂಗರಿಂದ 1994ರಲ್ಲಿ ಸ್ಥಾಪಿತವಾದ ಯಾಹೂ, ಕೆಲವೇ ವರ್ಷಗಳಲ್ಲಿ ಅಂತರ್ಜಾಲ ಲೋಕದ ಅತ್ಯಂತ ಸಫಲ ಕಂಪೆನಿಯಾಗಿ ಬೆಳೆದಿತ್ತು. ಆದರೆ 2017ರಲ್ಲಿ ಯಾಹೂವನ್ನು ಟೆಲಿಕಾಮ್ ಕಂಪೆನಿ ವೇರಿಜೋನ್ ಸುಮಾರು 32,000ಕೋಟಿ ರೂಪಾಯಿಗೆ ಖರೀದಿಸಿತು. ಇಂಗ್ಲಿಷ್‌ನ ನಾಣ್ಣುಡಿ Jack of all trades but master of noneಯಾಹೂಗೆ ಸರಿಯಾಗಿ ಹೊಂದುತ್ತದೆ. ಅಂದರೆ ಒಬ್ಬ ವ್ಯಕ್ತಿಗೆ ಅನೇಕ ವಿಷಯಗಳ ಮಾಹಿತಿ ಇದ್ದು, ತಕ್ಕ ಮಟ್ಟಿಗೆ ಕೆಲಸವನ್ನೂ ಮಾಡಬಲ್ಲ ಆದರೆ ಯಾವುದೊಂದು ವಿಷಯದಲ್ಲೂ ಪರಿಣತಿ ಇರುವುದಿಲ್ಲ. ಒಂದೇ ಬಾರಿ ಹಲವು ಕ್ಷೇತ್ರಗಳಿಗೆ ಕಾಲಿಟ್ಟ ಯಾಹೂ ಜಾಕ್ ಆಫ್ ಆಲ್ ಟ್ರೇಡ್‌ಸ್ನ ಖ್ಯಾತಿ ಪಡೆಯಿತು. ಆದರೆ ಕ್ಷೇತ್ರದಲ್ಲೂ ತನ್ನ ಪ್ರಾವೀಣ್ಯದ ಹೆಗ್ಗುರುತು ಮೂಡಿಸಿ ವಿಶೇಷತೆಯನ್ನು ಕಾಪಾಡಿ ಕೊಳ್ಳುವಲ್ಲಿ ವಿಫಲವಾಯಿತು.

ಜತೆಯಾಗದ ಗೂಗಲ್-ಯಾಹೂ
2000ನೇ ಇಸವಿಯಲ್ಲಿ ಯಾಹೂನ ಕಿಮ್ಮತ್ತು ಸರಿಸುಮಾರು 8 ಲಕ್ಷ 30 ಸಾವಿರ ಕೋಟಿ ರೂಪಾಯಿಯಾಗಿತ್ತು! 2002ರಲ್ಲಿ ಯಾಹೂ, ಇಂಟರ್‌ನೆಟ್ ಲೋಕದ ದಿಗ್ಗಜ ಕಂಪೆನಿ ಯಾದ ಗೂಗಲ್ಅನ್ನು ಖರೀದಿಸಲು ಪ್ರಯತ್ನಿಸಿತ್ತು. ಅದಕ್ಕಾಗಿ ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು. ಆದರೆ ಗೂಗಲ್ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು! ನೇತೃತ್ವದ ದೂರದೃಷ್ಟಿಯ ಕೊರತೆಯಿಂದ ಯಾಹೂ ಈ ಚೌಕಾಶಿಯಲ್ಲಿ ಎಡವಿ ಇಂದು ಕೊರಗುತ್ತಿದೆ! ಹಾಗೆಯೇ 2006ರಲ್ಲಿ ಯಾಹೂಗೆ ಫೇಸ್‌ಬುಕ್ ಅನ್ನು ಖರೀದಿಸುವ ಸುವರ್ಣಾವಕಾಶವಿತ್ತು. ಆದರೆ ಯಾಹೂ ಫೇಸ್‌ಬುಕ್‌ನ ಮೌಲ್ಯವನ್ನು ಗುರುತಿಸು ವಲ್ಲಿ ಮತ್ತೆ ಮುಗ್ಗರಿಸಿತ್ತು. 2017ರಲ್ಲಿ ಕೇವಲ 32,000ಕೋಟಿ ರೂಪಾಯಿಗೆ ಮಾರಾಟವಾದ ಯಾಹೂ, ಗೂಗಲ್ ಮತ್ತು ಫೇಸ್‌ ಬುಕ್‌ಗಳಿಗೆ ಹೋಲಿಸಿದಲ್ಲಿ ಕ್ಷುದ್ರ ಕಂಪೆನಿ ಯಾಗುಳಿದಿದೆ. ಫೋರ್ಬ್ಸ್ ಮ್ಯಾಗಜೀನ್‌ನಲ್ಲಿ ಉಲ್ಲೇಖಿಸಿದಂತೆ ಇವತ್ತಿನ ಗೂಗಲ್ನ ಬ್ರ್ಯಾಂಡ್ ವ್ಯಾಲ್ಯು ಯಾಹೂನ ಸುಮಾರು 18 ಪಟ್ಟಿದೆ!

ಮೈಕ್ರೋಸಾಫ್ಟ್ ಆಫರ್ ಅನ್ನೂ ತಳ್ಳಿಹಾಕಿತು!
ಇದೆ ರೀತಿ 2008 ಐ.ಟಿ. ದಿಗ್ಗಜ ಮೈಕ್ರೋಸಾಫ್ಟ್ ಯಾಹೂವನ್ನು 2.95 ಲಕ್ಷ ಕೋಟಿ ರೂಪಾಯಿಗೆ ಕೊಂಡುಕೊಳ್ಳುವ ಪ್ರಸ್ತಾವಇಟ್ಟಿತ್ತು. ಆದರೆ ಯಾಹೂ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಆದರೆ 2017ರಲ್ಲಿ 2008ಕಿಂತಲೂ 9ಪಟ್ಟು ಕಡಿಮೆ ಬೆಲೆಗೆ ಮಾರಾಟವಾಯಿತು! ಸಮಯಕ್ಕನು ಗುಣವಾಗಿ ಬದಲಾಗದಿರುವುದೇ ಯಾಹೂವಿನ ಪತನಕ್ಕೆ ಮುಖ್ಯ ಕಾರಣ. 2000ನೇ ಇಸವಿಯ ನಂತರ ಇಂಟರ್‌ನೆಟ್ ಜಗತ್ತಿನಲ್ಲಾದ ಬದಲಾವಣೆಯ ವೇಗಕ್ಕೆ ಯಾಹೂ ಹೊಂದಿ ಕೊಳ್ಳಲಿಲ್ಲ. ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಫೋನ್‌ಗಳ ಶಕ್ತಿಯನ್ನು ಗುರುತಿಸಿ ವಿವಿಧ ಇಂಟರ್‌ನೆಟ್ ಕಂಪನಿಗಳು ಮತ್ತು ಆಕರ್ಷಕ ಸೇವೆಗಳಿಗೆ ವೇದಿಕೆ ಒದಗಿಸುತ್ತಿದ್ದಾಗ, ಯಾಹೂ ತನ್ನ ಪುರಾತನ ಶೈಲಿಯಲ್ಲೇ ಕಾರ್ಯನಿರ್ವ ಹಿಸುತ್ತಿತ್ತು.

ನೋಕಿಯಾದ ಪಾಡು ಇದೇ…
ಎಲ್ಲಿ ಹೊಸ ವಿಚಾರಗಳಿಗೆ ಅವಕಾಶವಿರುವುದಿಲ್ಲವೋ ಮತ್ತು ಸಮಯಕ್ಕನುಗುಣವಾಗಿ ಬದಲಾಗುವ ಮನೋಭಾವ ಮತ್ತು ಇಚ್ಛಾಶಕ್ತಿ ಇರುವುದಿಲ್ಲವೋ, ಅಂತಹ ಸ್ಥಳ ಬಹುಬೇಗ ಇತಿಹಾಸದ ಪುಟ ಸೇರಿಕೊಳ್ಳುತ್ತದೆ. ಇದು ಬರಿ ಯಾಹೂವಿನ ಕತೆಯಷ್ಟೇ ಅಲ್ಲ, ಇದೆ ರೀತಿ ಸಮಯದ ಕರೆಗೆ ಓಗೊಡದ ಅನೇಕ ಕಂಪೆನಿಗಳು ಪಾತಾಳ ಸೇರಿವೆ. ಅಂತಹ ಇನ್ನೊಂದು ಕಂಪನಿ ನೋಕಿಯಾ. 1991ರಲ್ಲಿ ಪ್ರಧಾನಮಂತ್ರಿ ನೋಕಿಯಾದ ಫೋನ್ ಬಳಸಿ ವಿಶ್ವದ ಪ್ರಥಮ ಜಿ.ಎಸ್.ಎಂ.(Global System For Mobile Commu nication) ಕರೆ ಮಾಡಿದ್ದರು. 2009ರಷ್ಟೊತ್ತಿಗೆ ನೋಕಿಯಾ ತನ್ನ ಮಾರುಕಟ್ಟೆ ಯ ಪಾಲನ್ನು ಕಳೆದುಕೊಳ್ಳುತ್ತಿತ್ತು. ನೋಕಿಯಾ ಮೊಬೈಲ್ ಫೋನ್‌ಗಳ ಆಪರೇಟಿಂಗ್ ಸಿಸ್ಟಮ್ನಲ್ಲಾದ ಕ್ರಾಂತಿಕಾರಿ ಬದಲಾವಣೆಗಳ ಮಹತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ತನ್ನ ಹಳೆಯ ರಾಗದಲ್ಲೇ ಮುಂದುವರೆಯಿತು. ಮುಂದೆ ಸುಧಾರಿಸಿಕೊಳ್ಳದ ಸ್ಥಿತಿ ತಲುಪಿದ ನೋಕಿಯಾ 2013ರಲ್ಲಿ ಮೈಕ್ರೋಸಾಫ್‌ಟ್ನ ಪಾಲಾಗಿತ್ತು.

ಕೊಡ್ಯಾಕ್ ದಿವಾಳಿ!
ಇದೇ ರೀತಿ 1888ರಲ್ಲಿ ವಿಶ್ವದ ಕ್ಯಾಮೆರಾ ನಿರ್ಮಿಸಿದ ಕೊಡ್ಯಾಕ್ ಕಂಪನಿಯೂ ಕಾಲಕ್ಕೆ ತಕ್ಕಂತೆ ಕುಣಿಯುವಲ್ಲಿ ವಿಫಲವಾಗಿ ಬೇರೆ ಕಂಪನಿಗಳೊಂದಿಗೆ ಸ್ಪರ್ಧೆಯಲ್ಲಿ ಹಿಂದೆ ಬಿತ್ತು. ಕೊಡ್ಯಾಕ್ 1975ರಲ್ಲೇ ಡಿಜಿಟಲ್ ಕ್ಯಾಮೆರಾವನ್ನು ನಿರ್ಮಿಸಿದರೂ ಡಿಜಿಟಲ್ ಫೋಟೋಗ್ರಫಿಯ ಮಹತ್ವವನ್ನು ಅರಿಯುವಲ್ಲಿ ಎಡವಿತ್ತು. 2012ರಲ್ಲಿ ಕೊಡ್ಯಾಕ್ ದಿವಾಳಿಯಾಯಿತು! 
ಯಾಹೂ, ನೋಕಿಯಾ ಮತ್ತು ಕೊಡ್ಯಾಕ್ ಕಂಪನಿಗಳ ಸಂದರ್ಭದಲ್ಲಿ ಬ್ರಿಟಿಷ್ ಲೇಖಕ ಜಾರ್ಜ್ ಬರ್ನಾರ್ಡ್ ಷಾ ರ ಈ ವಾಕ್ಯ Progress without change is impossible and those who can’t change their minds can’t change anything, ಅತ್ಯಂತ ಸೂಕ್ತ ಮತ್ತು ಪ್ರಾಸಂಗಿಕವೆನಿಸುತ್ತದೆ. ಈ ಎಲ್ಲ ಕಂಪನಿಗಳು ಅಭೂತ ಪೂರ್ವ ಪ್ರಾರಂಭದ ಹೊರತಾಗಿಯೂ ಅವಧಿಗೆ ಮುನ್ನ ಇತಿಹಾಸದ ಪುಟ ಸೇರಿದವು. ಬದಲಾವಣೆ ಪ್ರಕೃತಿಯ ನಿಯಮ, ಹಳೆಯದನ್ನು ಮೆಲಕು ಹಾಕುತ್ತಾ ಹೊಸತನ್ನು ಸ್ವಾಗತಿ ಸುತ್ತಾ, ಹೊಸ ವಿಚಾರಗಳನ್ನು ಅಪ್ಪಿಕೊಳ್ಳುತ್ತ, ಹೊಸ ಭಾವ, ಹೊಸ ಕಲ್ಪನೆ ಯೊಂದಿಗೆ, ಹೊಸ ಜನರನ್ನು ಸಂಧಿಸುತ್ತಾ ಸುಖೀ ಮತ್ತು ಮಂಗಳಮಯ ಜೀವನ ಕಳೆಯುವುದು ಜೀವನದ ಗುರಿಯಾಗಬೇಕು.

Related Articles

Leave a Reply

Your email address will not be published. Required fields are marked *

Language
Close