About Us Advertise with us Be a Reporter E-Paper

ಅಂಕಣಗಳು

ಕುಣಿಕೆಯಳತೆಗೆ ತಕ್ಕ ಕೊರಳು ಬೇಕಿದೆ, ಕೊಡುವಿರಾ?

ಗೌರಿ ಲಂಕೇಶ್ ಹತ್ಯೆಯಾಗಿ ಮುಂದಿನ ತಿಂಗಳ 5ನೇ ತಾರೀಖಿಗೆ ಭರ್ತಿ ಒಂದು ವರ್ಷ ತುಂಬುತ್ತದೆ. ರಾಜ್ಯದಲ್ಲಿ ನಡೆದ ಇಪ್ಪತ್ತಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಗಳು ಮತ್ತು ಡಾ. ಕಲಬುರ್ಗಿ ಕೊಲೆಯಂತೆಯೇ ಈ ಹತ್ಯೆಯ ಕಾರಣಕರ್ತರು ಯಾರು ಎಂಬುದನ್ನು ನಮ್ಮ ರಾಜ್ಯ ಪೊಲೀಸರಿಗೆ ಕಂಡುಹಿಡಿಯಲಾಗಿಲ್ಲ. 2009ರಲ್ಲಿ ಮಾಲೆಗಾಂವ್ ಸ್ಫೋಟವಾದಾಗ, ಕೃತ್ಯವೆಸಗಿದವರು ಹಿಂದೂ ಕೋಮುವಾದಿಗಳೇ ಎಂದು ಗೋವಾದ ಗೃಹಮಂತ್ರಿ ಬೀಸುಹೇಳಿಕೆ ಕೊಟ್ಟಿದ್ದರು. ಆಗ ಅಲ್ಲಿದ್ದದ್ದು ಕಾಂಗ್ರೆಸ್ ಸರಕಾರ. 2013ರಲ್ಲಿ ದಾಬೋಲ್ಕರ್  ಬುದ್ಧಿಜೀವಿಯ ಹತ್ಯೆ ನಡೆದಾಗ ಅದನ್ನು ಮಾಡಿದ್ದು ಸಂಘಿಗಳು, ಆರೆಸ್ಸೆಸ್ ಚೆಡ್ಡಿಗಳು, ಹಿಂದುತ್ವದ ಉಗ್ರಪ್ರತಿಪಾದಕರು ಎಂದು ಮಹಾರಾಷ್ಟ್ರದ ಗೃಹಮಂತ್ರಿ ತತ್‌ಕ್ಷಣದ ಹೇಳಿಕೆ ಕೊಟ್ಟುಬಿಟ್ಟರು. ಪೊಲೀಸರು ತನಿಖೆಯ ಉಳಿದೆಲ್ಲ ಆಯಾಮಗಳನ್ನೂ ಕೈಬಿಟ್ಟು ಮಠ-ಮಂದಿರಗಳಿಗೆ ಎಡತಾಕಿ ಹಿಂದೂಗಳನ್ನು ಬಂಧಿಸಲು ತುದಿಗಾಲಲ್ಲಿ ನಿಂತರು. ಸನಾತನ ಸಂಸ್ಥೆಯನ್ನು ಈ ಸಂದರ್ಭದಲ್ಲಿ ಪ್ರಕರಣದ ಮುಖ್ಯ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲಾಯಿತು. ಸರಿಯಾದ ದಾಖಲೆಗಳಿಲ್ಲದೆ ಸುಖಾಸುಮ್ಮನೆ ಕೇಸು ಜಡಿದರೆ ಮಾನಹಾನಿ ಪ್ರಕರಣಗಳ ಮೂಲಕ ಚುರುಕು ಮುಟ್ಟಿಸುವ ನ್ಯಾಯಯುತ ಬೆದರಿಕೆಯನ್ನು ಆ  ಹಾಕಿದ ಮೇಲೆ ಪೊಲೀಸರು ಸ್ವಲ್ಪ ಮೆತ್ತಗಾದರು. ಆಗ ಮಹಾರಾಷ್ಟ್ರದಲ್ಲಿದ್ದದ್ದು ಕಾಂಗ್ರೆಸ್ ಸರಕಾರ. 2010ರಲ್ಲಿ ‘ಸಂಜೋತಾ ಎಕ್‌ಸ್ಪ್ರೆಸ್ ಸ್ಫೋಟ’ ನಡೆದಾಗ ಘಟನೆ ನಡೆದು ಇನ್ನೂ ಹತ್ತಿಪ್ಪತ್ತು ನಿಮಿಷಗಳು ಕಳೆಯುವ ಮುನ್ನವೇ ಕೇಂದ್ರದ ಗೃಹಮಂತ್ರಿ ‘ಕೇಸರಿ ಭಯೋತ್ಪಾದನೆ’ ಎಂಬ ಪದಪುಂಜ ಹರಿಯಬಿಟ್ಟರು. ಬಂಧಿಸಿ ತಂದ ಪ್ರಜ್ಞಾಸಿಂಗ್ ಠಾಕೂರ್, ಸ್ವಾಮಿ ಅಸೀಮಾನಂದ ಮುಂತಾದವರಿಗೆ ಪೊಲೀಸರು ನಾಲ್ಕು ವರ್ಷ, ನರಕದಲ್ಲೂ ಕೊಡಬಾರದಂಥ ಚಿತ್ರಹಿಂಸೆಗಳನ್ನು ಕೊಟ್ಟು ಸತಾಯಿಸಿದರು. ಕರ್ನಲ್ ಪುರೋಹಿತ್ ಮನೆಯಲ್ಲಿ ಸ್ವತಃ ಪೊಲೀಸರೇ ಆರ್‌ಡಿಎಕ್‌ಸ್  ಅದರ ಆರೋಪವನ್ನು ಪುರೋಹಿತ್ ತಲೆಗೆ ಕಟ್ಟಿ, ಅವರನ್ನು ಅಕ್ಷರಶಃ ಜೈಲಲ್ಲಿ ಕೊಳೆಸಿದರು. ಆಗ ಕೇಂದ್ರದಲ್ಲಿದ್ದದ್ದು ಕಾಂಗ್ರೆಸ್ ಸರಕಾರ. ಇದೀಗ, ಗೌರಿಯ ಹತ್ಯೆ ವಿಚಾರದಲ್ಲಿ ನಾಲ್ವರು ಆರೋಪಿಗಳಿಗೆ ವಿನಾಕಾರಣ ಪೊಲೀಸ್ ಚಿತ್ರಹಿಂಸೆ ಕೊಡಲಾಗುತ್ತಿದೆ. ಕುರಿಯೊಂದನ್ನು ತಂದು ಹುಲಿಯೆಂದು ಒಪ್ಪಿಕೊಳ್ಳಲು ಬಡಿದು ಒತ್ತಾಯಿಸಿದಂತೆ, ಖಾಕಿಗಳು ಆರೋಪಿಗಳನ್ನು ಕಸ್ಟಡಿಯಲ್ಲಿಟ್ಟು ಥರ್ಡ್ ಡಿಗ್ರಿ ಹಿಂಸೆಗಳನ್ನು ಕೊಡುತ್ತಿದ್ದಾರೆ ಎಂದು ವಕೀಲರು ವಾದ ಮುಂದಿಟ್ಟಿದ್ದಾರೆ. ಸೆಷನ್‌ಸ್ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿಲ್ಲ; ಆರೋಪಿಗಳ ಮೇಲೆ ನಡೆಸಿರುವ ಪೊಲೀಸ್ ಹಲ್ಲೆಯನ್ನು  ವೈದ್ಯಕೀಯ ತಪಾಸಣೆ ನಡೆಸಬೇಕು ಎಂಬ ವಕೀಲರ ಬೇಡಿಕೆಗೆ ನ್ಯಾಯಾಲಯ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ವೋಚ್ಚ ನ್ಯಾಯಾಲಯ ರೂಪಿಸಿರುವ ಎಲ್ಲ ನಿಯಮಾವಳಿಗಳನ್ನೂ ಗಾಳಿಗೆ ತೂರಿ ತನ್ನ ಮನಸ್ಸಿಗೆ ಬಂದಂತೆ ವಿಚಾರಣೆಯ ನಾಟಕ ನಡೆಸುತ್ತಿರುವ ರಾಜ್ಯ ಸರಕಾರದ ವಿಶೇಷ ತನಿಖಾ ದಳದ ಕಾರ್ಯವೈಖರಿಗೆ ಹೈಕೋರ್ಟ್ ಹೋದ ವಾರ ತಪರಾಕಿ ಕೊಟ್ಟಿದೆ. ಹೈಕೋರ್ಟಿನ ಛೀಮಾರಿ ಹೊರಬಿತ್ತೋ ಇಲ್ಲವೋ, ಸ್ವತಃ ಮುಖ್ಯಮಂತ್ರಿಗಳೇ ಈ ನಾಟಕದ ರಂಗಮಂಚದ ನಡುಮಧ್ಯಕ್ಕೆ ಧುಮುಕಿ, ಪೊಲೀಸರು  ಟಾರ್ಚರ್ ಕೊಟ್ಟಿಲ್ಲ ಎಂಬ ತಿಪ್ಪೆ ಸಾರಿಸಿದ್ದಾರೆ. ಅಂದ ಹಾಗೆ, ಯಥಾಪ್ರಕಾರ, ಈಗಲೂ ಇಲ್ಲೂ ಇರುವುದು ಕಾಂಗ್ರೆಸ್ ಸರಕಾರವೇ!

ದ.ರಾ. ಬೇಂದ್ರೆಯವರು ಬರೆದ ಸಾಯೋ ಆಟ ಎಂಬ ನಾಟಕದಲ್ಲೊಂದು ಪ್ರಸಂಗ ಬರುತ್ತದೆ. ಗೋಡೆ ಕುಸಿದು ವ್ಯಕ್ತಿಯೊಬ್ಬ ಮೃತನಾಗಿದ್ದಾನೆ. ವಿಚಾರಣೆ ನಡೆಸಿ ತಪ್ಪಿತಸ್ಥನನ್ನು ಗಲ್ಲಿಗೇರಿಸಬೇಕು. ತನಿಖೆ ಶುರುವಾದಾಗ, ಗೋಡೆ ಕಟ್ಟಿದ ಮೇಸ್ತ್ರಿ ತಪ್ಪನ್ನು ಮಣ್ಣು ಕಲಸಿದ ಸಹಾಯಕನ ಮೇಲೆ ಹಾಕುತ್ತಾನೆ. ಆ ಸಹಾಯಕ, ನೀರು ಬೆರೆಸಿದ ಇನ್ನೊಬ್ಬನ ಮೇಲೆ ತಪ್ಪಿನ ಆರೋಪವನ್ನು  ನೀರು ಹಾಕಿದಾತ ತಪ್ಪನ್ನು ತನ್ನ ಕಣ್ಣಿಗೆ ಬಿದ್ದ ಸುಂದರ ಹೆಣ್ಣಿನತ್ತ ಎಸೆದುಬಿಡುತ್ತಾನೆ. ಹೀಗೆ ತನಿಖೆಯ ಕುಣಿಕೆ ಎಲ್ಲೆಲ್ಲೋ ಎಲ್ಲೆಲ್ಲೋ ಹೋಗಿ ಕೊನೆಗೊಬ್ಬ ನತದೃಷ್ಟನ ತಲೆಗೆ ಬೀಳುತ್ತದೆ. ಆದರೆ, ಸೈನಿಕರು ಮಾಡಿಟ್ಟ ಕುಣಿಕೆ ಆ ತಪ್ಪಿತಸ್ಥನ ಕೊರಳಿಗೆ ಸರಿಬರದು! ಹಾಗಾದರೆ ಕುಣಿಕೆಗೆ ಸರಿಹೊಂದುವ ವ್ಯಕ್ತಿಯನ್ನು ಎಳೆದುಕೊಂಡು ಬನ್ನಿ! ಎಂದು ರಾಜಾಜ್ಞೆಯಾಗುತ್ತದೆ. ಗೌರಿ ಹತ್ಯೆಯ ವಿಚಾರಣೆಯ ನಾಟಕ ನೋಡಿದರೆ ಬೇಂದ್ರೆಯವರು ಬರೆದ ನಾಟಕಕ್ಕಿಂತ ಇದೇ ಹೆಚ್ಚು ರೋಚಕವಾಗಿದೆ ಎನ್ನಿಸಬಹುದು! ಈ ಪ್ರಕರಣದಲ್ಲಿ  ಹಾಸ್ಯಚಟಾಕಿಯನ್ನು ಹೊಡೆದವರು ಸಿದ್ದರಾಮಯ್ಯ ಸರಕಾರದಲ್ಲಿ ಗೃಹಮಂತ್ರಿಯಾಗಿದ್ದ ರಾಮಲಿಂಗಾರೆಡ್ಡಿಯವರು. ನಾವು ಕೊಲೆಗಾರರನ್ನು ಅಂತಿಮಗೊಳಿಸಿಯಾಗಿದೆ. ಈಗ ಸಾಕ್ಷ್ಯ ಕಲೆಹಾಕುವ ಕೆಲಸ ಪ್ರಾರಂಭಿಸಿದ್ದೇವೆ – ಎಂಬ ಹಾಸ್ಯದ ಗರ್ನಾಲನ್ನು ರಾಮಲಿಂಗಾರೆಡ್ಡಿ ಸಿಡಿಸಿದ್ದರು. ನಾವು ಈ ಕಾರ್ಯಾಚರಣೆಯನ್ನು ಅತ್ಯಂತ ಗೌಪ್ಯವಾಗಿ ಮಾಡಬೇಕಿದೆ; ಯಾವ ಬಗೆಯಲ್ಲೂ ಪೊಲೀಸರ ತನಿಖೆಯ ಪತ್ತೆ ಹತ್ತದಂತೆ ಕಾರ್ಯಾಚರಿಸಿ ಕೊನೆಗೆ ಕೊಲೆಗಾರರನ್ನು ಹಿಡಿಯುತ್ತೇವೆ ಎಂದು ಹೇಳಿಕೆ ಕೊಟ್ಟ ಮರುದಿನವೇ ವಿಶೇಷ ತನಿಖಾ ದಳ ಮೂರು ಜನ ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿತ್ತು!  ಟ್ವೇನ್ ಬರೆದ ಆನೆಯ ಕಳವು ಎಂಬ ಕತೆಯಲ್ಲಿ ಇಂಥಾದ್ದೇ ಒಂದು ಸನ್ನಿವೇಶವಿದೆ. ಅಲ್ಲಿ, ಆನೆ ಕಳುವಾಗಿದೆಯೆಂಬುದನ್ನು ಸಾರ್ವಜನಿಕಗೊಳಿಸಬಾರದೆಂದು ದೂರುದಾರರ ಬಳಿ ಹೇಳಿದ ಮರುಕ್ಷಣವೇ ಅದೇ ಪೊಲೀಸ್ ಅಧಿಕಾರಿ ಆನೆ ಕಳವಿನ ಸುದ್ದಿಯ ಪೋಸ್ಟರ್ ಮಾಡಿ ಊರೆಲ್ಲ ಹಚ್ಚುವಂತೆ ಹೇಳುತ್ತಾನೆ! ಒಟ್ಟಾರೆ ಹೇಳಬೇಕಾದರೆ, ಎಲ್ಲ ಕಲ್ಪಿತ ಕಥಾನಕಗಳನ್ನು, ಅರ್ಥಾತ್ ಫಿಕ್ಷನ್ ಸಾಹಿತ್ಯವನ್ನು ನೀವಾಳಿಸಿ ಎಸೆಯುವ ಮಟ್ಟಿಗೆ ನಮ್ಮ ರಾಜ್ಯದಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಬಹುದು!

ಈ ಪ್ರಕರಣದಲ್ಲಿ ಮೊದಲು ಮಂಡ್ಯದ  ಎಂಬಾತನನ್ನು ಬಂಧಿಸಿದರು. ಆತನೇ ಬುಲೆಟ್, ಬಂದೂಕು ಸರಬರಾಜು ಮಾಡಿದ ಎನ್ನಲಾಯಿತು. ನಂತರ, ಆತ ಅವೆರಡನ್ನೂ ಪಡೆದದ್ದು ಶಬೀರ್ ಎಂಬಾತನಿಂದ ಎಂದು ಹೇಳಲಾಯಿತು. ತಮಾಷೆಯೆಂದರೆ ಈ ಶಬೀರ್‌ನನ್ನು ಪೊಲೀಸರು ಬಂಧಿಸಲಿಲ್ಲ. ಅದಕ್ಕೆ ಆತನ ಹೆಸರು ಶಬೀರ್ ಎಂದಾಗಿರುವುದೇ ಕಾರಣ ಎಂಬ ಸರಳ ನಿರ್ಣಯಕ್ಕೆ ನಾವೇನು ಬರುವುದು ಬೇಡ ಬಿಡಿ! ಗೌರಿಯ ಹತ್ಯೆಯಾದಾಗ ನವೀನ್ ಬೆಂಗಳೂರಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಕೊಲೆಯ ಆರೋನ್ನು ಮನೋಹರ್ ಎಂಬಾತನ ತಲೆಗೆ ಕಟ್ಟಿದರು. ಅದೂ ಯಾಕೋ  ಕೊನೆಗೆ ಪರಶುರಾಮನೆಂಬ ಮತ್ತೊಬ್ಬನ ಕೊರಳಿಗೆ ಈಗ ಆರೋಪದ ಹಾವನ್ನು ಬಿಗಿದಿದ್ದಾರೆ. ಗೌರಿಹತ್ಯೆಗೆ ಸಂಬಂಧಿಸಿದಂತೆ ಸುಜೀತ್ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಕರಾವಳಿ ಕರ್ನಾಟಕದಲ್ಲಿ ಮೇ 6ರಂದು ಬಂಧಿಸಿದರು. ಆದರೆ ಪೊಲೀಸ್ ದಫ್ತರಗಳಲ್ಲಿ, ಆತನನ್ನು ಮೇ 20ರಂದು ಕೋಲಾರದಿಂದ ಬಂಧಿಸಲಾಯಿತು ಎಂದು ಬರೆಯಲಾಗಿದೆ. ಹಾಗೆಯೇ ಅಮೋಲ್ ಮತ್ತು ಅಮಿತ್ ಎಂಬಿಬ್ಬರನ್ನು ಮಹಾರಾಷ್ಟ್ರ-ಕರ್ನಾಟಕದ ಗಡಿಭಾಗವಾದ ಕೊಲ್ಹಾಪುರದಲ್ಲಿ ಪೊಲೀಸರು ಬಂಧಿಸಿದ್ದು ಮೇ 14ರಂದು. ಆದರೆ ಅವರನ್ನು ಬೆಂಗಳೂರಲ್ಲಿ ಮೇ 20-21ರಂದು ಬಂಧಿಸಲಾಯಿತು ಎಂದು ದಾಖಲೆಗಳಲ್ಲಿ  ಹಾಗಾದರೆ ಈ ಸುಳ್ಳು ಮತ್ತು ನಿಜ ಅರೆಸ್ಟುಗಳ ನಡುವಿನ ಅವಧಿಯಲ್ಲಿ ಆ ಆರೋಪಿಗಳು ಎಲ್ಲಿದ್ದರು? ಗೌರಿಹತ್ಯೆಗೆ ಕೊಳ್ಳೇಗಾಲದಲ್ಲಿ ಶೂಟಿಂಗ್ ಪ್ರಾಕ್ಟೀಸ್ ನಡೆದಂತೆ ಈ ಆರೋಪಿಗಳಿಗೂ ತಪ್ಪೊಪ್ಪಿಕೊಳ್ಳಲು ಪೊಲೀಸರು ಪ್ರಾಕ್ಟೀಸ್ ಮಾಡಿಸಿದರೆ? ಅದೂ ಅಲ್ಲದೆ ಕತೆಗೊಂದು ಉಪಕತೆ ಇದ್ದರೆ ಚೆನ್ನಾಗಿರುತ್ತದೆಂದು, ಗೌರಿಹತ್ಯೆ ಮಾಡಿದವರೇ ಮೈಸೂರಿನ ಬುದ್ಧಿಜೀವಿ ಕೆ.ಎಸ್. ಭಗವಾನ್‌ನ ಕೊಲೆಗೂ ಸಂಚು ರೂಪಿಸಿದ್ದರೆಂಬ ಹೊಚ್ಚಹೊಸ ಕತೆಯನ್ನೂ ಹೆಣೆಯಲಾಗಿದೆ. ಗೌರಿಹತ್ಯೆಯ ವಿಷಯದಲ್ಲಿ ಬಂಧಿಸಲ್ಪಟ್ಟ ಕೆಲವು ಆರೋಪಿಗಳನ್ನು ಭಗವಾನ್ ಹತ್ಯೆಯತ್ನದ ಪ್ರಕರಣದಲ್ಲೂ ಸಿಕ್ಕಿಸಲಾಗಿದೆ.  ಮೂಲಕ, ಎರಡೆರಡು ವಿಚಾರಣೆ ನಡೆಸಬೇಕು ಎಂಬ ನೆಪ ಮುಂದೊಡ್ಡಿ ಆರೋಪಿಗಳನ್ನು ಹೆಚ್ಚು ದಿನ ಕಸ್ಟಡಿಯಲ್ಲಿ ಉಳಿಸಿಕೊಳ್ಳಲು ಅವಕಾಶ ಸೃಷ್ಟಿಸಲಾಗಿದೆ. ಈಗ ನೋಡಿದರೆ ಇದೇ ಆರೋಪಿಗಳು ಕಲಬುರ್ಗಿ ಕೊಲೆಯಲ್ಲೂ ಭಾಗಿಯಾಗಿದ್ದಾರಂತೆ. ವಿಚಾರಣೆ ಇನ್ನೂ ಒಂದೆರಡು ವರ್ಷ ನಡೆದರೆ ರಾಜೀವ್, ಇಂದಿರಾ, ನೆಹರೂ ಮುಂತಾದವರೆಲ್ಲ ಸತ್ತದ್ದು ಇವರಿಂದಲೇ ಎಂಬ ಹೊಸ ಥಿಯರಿಯೂ ಸ್ಥಾಪನೆಯಾಗಬಹುದು.

ವಿಷಯ ಅತ್ಯಂತ ಸ್ಪಷ್ಟ. 2019ರ ಲೋಕಸಭೆ ಚುನಾವಣೆಗೆ ರಾಷ್ಟ್ರಮಟ್ಟದಲ್ಲಿ ಮೋದಿಯನ್ನು ಎದುರಿಸಲು ಸದ್ಯಕ್ಕಾವ ವಿಷಯಗಳೂ ಸಿಗುತ್ತಿಲ್ಲ. ಭ್ರಷ್ಟಾಚಾರದ  ಮಾಡಲಾಗುತ್ತಿಲ್ಲ. ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಇರುವ ಏಕೈಕ ತಂತ್ರವೆಂದರೆ ಹಿಂದುತ್ವವನ್ನು ಕುಲಗೆಡಿಸುವುದು. ಹಿಂದೂ ಭಯೋತ್ಪಾದನೆ ದಿನದಿನಕ್ಕೂ ಉಲ್ಬಣಿಸುತ್ತಿದೆಯೆಂಬ ಹುಸಿಭಯವನ್ನು ದೇಶಾದ್ಯಂತ ಹಬ್ಬಿಸುವುದು. ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತದಾದರೆ ಜನವರಿಯಲ್ಲೇ ಪ್ರಚಾರಕ್ಕೆ ಹೊರಡಬೇಕು. ಅದಕ್ಕೆ ತಕ್ಕ ಗ್ರೌಂಡ್ ವರ್ಕ್ ಈ ವರ್ಷಾಂತ್ಯಕ್ಕೆಲ್ಲ ಪೂರ್ಣಗೊಳ್ಳಬೇಕು. ಹಾಗಾಗಿಯೇ ಸದ್ಯಕ್ಕೆ ಗೌರಿಯ ಹತ್ಯೆಯ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ದೇಶದಲ್ಲಿ ಹೊಸ ನರೇಟಿವ್ ಸೃಷ್ಟಿಸಲು ಯತ್ನಿಸುತ್ತಿದೆ. ಕರ್ನಾಟಕವೇ ಪ್ರಯೋಗಶಾಲೆ ಏಕೆ? ಏಕೆಂದರೆ ದೇಶದ ಉಳಿದ್ಯಾವ  ಕಾಂಗ್ರೆಸ್ ತನ್ನ ಅಸ್ಮಿತೆಯನ್ನೂ ಮಾನ-ಮರ್ಯಾದೆಗಳನ್ನೂ ಉಳಿಸಿಕೊಂಡಿಲ್ಲ. ದೇಶದ ಯಾವ ಭಾಗದಲ್ಲೂ ಇದು ತಾನು ಹೇಳಿದಂತೆ ಕಾರ್ಯಾಂಗ, ನ್ಯಾಯಾಂಗಗಳನ್ನು ಬಗ್ಗಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸರಕಾರವೇನೋ ಬದಲಾಗಿದೆ. ಆದರೆ ಪೊಲೀಸ್ ಅಧಿಕಾರಿಗಳು, ಸರಕಾರೀ ಅಧಿಕಾರಿಗಳು ಸಿದ್ದರಾಮಯ್ಯ ಎಲ್ಲೆಲ್ಲಿ ಕೂರಿಸಿದ್ದರೋ ಆಯಾಯಾ ಜಾಗಗಳಲ್ಲೇ ಮುಂದುವರಿಯುತ್ತಿದ್ದಾರೆ. ಇವರೆಲ್ಲರ ಜುಟ್ಟುಗಳು ಇನ್ನೂ ಕಾಂಗ್ರೆಸ್ ಕೈಯಲ್ಲೇ ಇದೆ. ಹಾಗಾಗಿ ದೇಶಾದ್ಯಂತ ಹಬ್ಬಿಸಬಹುದಾದ ಯಾವ ಸುಳ್ಳುಸುದ್ದಿಗಳಿದ್ದರೂ ಅವನ್ನೆಲ್ಲ ಕಾಂಗ್ರೆಸ್, ಕರ್ನಾಟಕವೆಂಬ ತನ್ನ ಏಕೈಕ ಪ್ರಯೋಗಶಾಲೆಯಲ್ಲೇ ಸಿದ್ಧಪಡಿಸಬೇಕು! ಮೋದಿಯನ್ನು ಕಟ್ಟಿಹಾಕಲು  ಹೊಸೆಯಬಹುದಾದ ಏಕೈಕ ಹುರಿಹಗ್ಗವೆಂದರೆ ಕಲಬುರ್ಗಿ, ಗೌರಿಯ ಹತ್ಯೆ. ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಚಳವಳಿ ಮಳೆಗೆಸೆದ ಠುಸ್ ಪಟಾಕಿಯಾದ ಮೇಲೆ, ಕೈಯಲ್ಲಿರುವ ಏಕೈಕ ಅಲ್ಲಾವುದ್ದೀನನ ದೀಪವನ್ನು ಈ ಕಾಂಗ್ರೆಸಿಗರು ಇನ್ನಿಲ್ಲದಂತೆ ಉಜ್ಜುತ್ತಿರುವುದು ಅದೇ ಕಾರಣಕ್ಕೆ.

ಒಂದು ಕಡೆ ಗೌರಿಯ ಹತ್ಯೆಯನ್ನು ಹಿಂದೂಗಳೇ, ಹಿಂದುತ್ವವಾದಿಗಳೇ ಮಾಡಿದರು ಎಂಬುದನ್ನು ಸ್ಥಾಪಿಸಲು ವಿಶೇಷ ತನಿಖಾ ದಳ ಯತ್ನಿಸುತ್ತಿದ್ದರೆ ಇನ್ನೊಂದೆಡೆ ಈ ರಾಜ್ಯದ ಅಸ್ಮಿತೆಯೇ ಆಗಿರುವ ಬುದ್ಧಿಜೀವಿಗಳು ಸುಮ್ಮನಿದ್ದಾರೆ ಎಂದುಕೊಂಡಿರಾ? ಅವರು ಗೌರಿ ಎಂಬ  ಹಗಲಿರುಳು ಗಾಳಿಹೊಡೆದು ಉಬ್ಬಿಸಲು ಯತ್ನಿಸುತ್ತಿದ್ದಾರೆ. ಎಡಪಂಥೀಯ ವಿಚಾರಧಾರೆಯ ಕವಿತಾ ಲಂಕೇಶ್ ತನ್ನೊಂದು ಸಂದರ್ಶನದಲ್ಲಿ, ಗೌರಿ ಎಂದೂ ಹಿಂದುಗಳ ವಿರೋಧಿಯಾಗಿರಲಿಲ್ಲ; ಆಕೆ ಹಿಂದುತ್ವದ ವಿರೋಧಿಯಾಗಿದ್ದಳು ಎಂಬ ಆಣಿಮುತ್ತುಗಳನ್ನು ಉದುರಿಸಿದ್ದಾರೆ. ಓಹೋ! ಹೌದೇ! ಇದೇ ಗೌರಿ 2012ರ ಆಗಸ್‌ಟ್ 4ರಂದು ಮಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಮಾತಾಡುತ್ತ ಹಿಂದು ಧರ್ಮಕ್ಕೆ ಅಪ್ಪ ಅಮ್ಮ ಇದಾರೇನ್ರೀ? ಅದನ್ನೂ ಒಂದು ಧರ್ಮ ಅಂತಾರೇನ್ರಿ? ಬ್ರಿಟಿಷರು ಬಂದು ಹೆಸರಿಡೋವರೆಗೆ ಇದಕ್ಕೊಂದು ಹೆಸರೂ ಇರಲಿಲ್ಲ.. ಎಂದೆಲ್ಲ ಬಡಬಡಿಸಿದ್ದು ಪಾಪ  ಕಣ್ಣು-ಕಿವಿಗಳಿಗೆ ಬಿದ್ದಿಲ್ಲವೇನೋ! ಹಿಂದೂ ಧರ್ಮ ಎಂದರೆ ಈ ಗೌರಿ ಉರಿದುಬೀಳುತ್ತಿದ್ದಳು. ಗಣೇಶ ಕೂರಿಸಲು ಚಂದಾ ಕೇಳಿಕೊಂಡು ಬಂದ ಇಬ್ಬರು ಅಮಾಯಕ ಹುಡುಗರನ್ನು ನಿಲ್ಲಿಸಿ ಅರ್ಧಗಂಟೆ ಲೆಕ್ಚರ್ ಕೊಟ್ಟು ಬರಿಗೈಯಲ್ಲಿ ಕಳಿಸಿ ರುಪಾಯಿ ಉಳಿಸಿದ್ದ ಮಹಾನ್ ವ್ಯಕ್ತಿತ್ವ ಗೌರಿಯದ್ದು! ಈಕೆ ಯಾವ ಆಂಗಲ್‌ನಲ್ಲಿ ಹಿಂದುತ್ವವನ್ನು ಮಾತ್ರ ಸೆಲೆಕ್ಟಿವ್ ಆಗಿ ದ್ವೇಷಿಸಿದ ಮಾನವತಾವಾದಿಯಾಗಿ ವಿಚಾರವಾದಿಯಾಗಿ ಪ್ರಗತಿಪರಳಾಗಿ ಕಾಣಿಸುತ್ತಾಳೆ? ಇನ್ನು ಕೆಲವು ಎಕ್ಕಡಪಂಥೀಯರು ಗೌರಿ ಸತ್ಯ-ಪ್ರಾಮಾಣಿಕತೆಗಳ ಮೂರ್ತರೂಪ ಎಂದು ಬಡಬಡಾಯಿಸುತ್ತಿದ್ದಾರೆ. 2008ರ ಜನವರಿ  ತನ್ನ ಪತ್ರಿಕೆಯಲ್ಲಿ ಗೌರಿ ದರೋಡೆಗಿಳಿದ ಬಿಜೆಪಿಗಳು ಎಂಬ ಲೇಖನ ಪ್ರಕಟಿಸಿದ್ದಳು. ಈ ಲೇಖನದ ಮೂಲಕ ತನ್ನ ಮಾನಹಾನಿಯಾಗಿದೆ ಎಂದು ಪ್ರಲ್ಹಾದ ಜೋಶಿ ಮತ್ತು ಮೂರು ಜನ ಮೊಕದ್ದಮೆ ಹೂಡಿದಾಗ, ತನ್ನನ್ನು ಸಮರ್ಥಿಸಿಕೊಳ್ಳುವ ಎದೆಗಾರಿಕೆ ಗೌರಿಗಿರಲಿಲ್ಲ. ಕೋರ್ಟ್ ಕಳಿಸಿದ ಎಲ್ಲ ಸಮನ್‌ಸ್ಗಳನ್ನೂ ಹರಿದು ಕಸದಬುಟ್ಟಿಗೆ ಎಸೆಯುತ್ತಿದ್ದ ಈ ಭಂಡ ಪತ್ರಕರ್ತೆಯನ್ನು ಕೊನೆಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಎಳೆದುಕೊಂಡು ಹೋಗಬೇಕಾಯಿತು. ಅಲ್ಲಿ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲು ಗೌರಿ ಹೇಳಿದ್ದೇನು ಗೊತ್ತೆ? ತಾನು  ವರದಿಯಿಂದ ಪ್ರಲ್ಹಾದ್ ಜೋಶಿಯವರ ಮಾನಹಾನಿ ಆಗಲಿಲ್ಲ. ಯಾಕೆಂದರೆ ವರದಿ ಪ್ರಕಟವಾದ ಮೇಲೂ ಅವರು ಸಂಸದರಾಗಿ ಗೆದ್ದು ಬಂದಿದ್ದಾರೆ! ಬಹುಶಃ ಭಾರತದ ಕೋರ್ಟಿನಲ್ಲಿ ಇದಕ್ಕಿಂತ ಹಾಸ್ಯಾಸ್ಪದ ಮತ್ತು ಬಾಲಿಶವಾದ ವಾದವನ್ನು ಯಾವ ಪತ್ರಕರ್ತನೂ ಮಂಡಿಸಿರಲು ಸಾಧ್ಯವಿಲ್ಲ. ತಾನು ಬರೆದದ್ದರಲ್ಲಿ ಸತ್ಯಾಂಶ ಇಲ್ಲ ಎಂಬುದನ್ನು ಮತ್ತು ತನ್ನ ಪತ್ರಿಕೆ ಸಮಾಜದಲ್ಲಿ ಕಿಂಚಿತ್ ಪರಿಣಾಮವನ್ನೂ ಉಂಡುಮಾಡಲು ಸಾಧ್ಯವಿಲ್ಲ ಎಂಬುದನ್ನು ಗೌರಿ ಈ ಸಮರ್ಥನೆಯ ಮೂಲಕ ಒಪ್ಪಿಕೊಂಡಿದ್ದಳಲ್ಲ? ಇದೇ ಏನು ಈಕೆಯ ನಿರ್ಬಿಢೆ? ಸತ್ಯಶೋಧನೆ?  ಸಮಯದಲ್ಲೂ ಈಕೆಯ ಮೇಲೆ ಹಲವು ಎಫ್‌ಐಆರ್‌ಗಳಿದ್ದವು. ರಾಜ್ಯದ ಹಲವು ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ದಾಖಲಾಗಿದ್ದವು. ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅಲೆಯುತ್ತ ಹೈರಾಣಾಗಿ ಹೊಗೆಗೂಡಿನಂತಾಗಿದ್ದ ಗೌರಿಯನ್ನು ಬುಲೆಟ್ ಹೊಡೆದು ಸಾಯಿಸುವ ದರ್ದು ಯಾವ ಹಿಂದುತ್ವವಾದಿಗಳಿಗಿತ್ತೋ ಕಾಂಗ್ರೆಸಿಗರೇ ಹೇಳಬೇಕು! ಈಕೆ ಎಡೆಬಿಡದೆ ನ್ಯಾಯಾಲಯಗಳಲ್ಲಿ ಹೋರಾಡುತ್ತಿದ್ದಾಗ ನಯಾಪೈಸೆಯ ಸಹಾಯ ಮಾಡದ ಬುದ್ಧಿಜೀವಿ ಸಾಕ್ಷಿಪ್ರಜ್ಞೆಗಳೆಲ್ಲರೂ ಈಕೆ ಸತ್ತ ನಂತರ ಈಕೆಯ ಹೆಸರಲ್ಲಿ ಉತ್ಸವ ಮಾಡಿಕೊಂಡು ದುಡ್ಡು ಮಾಡಿದರಲ್ಲ? ಈಕೆಯ ಹೆಣ ಮುಂದಿಟ್ಟುಕೊಂಡು ಅಸೆಂಬ್ಲಿ ಚುನಾವಣೆ ಎದುರಿಸಿದರಲ್ಲ? ಈಕೆಯ  ಎದುರಿಟ್ಟು ತಾವುತಾವೇ ಹಿಟ್‌ಲಿಸ್ಟುಗಳನ್ನು ಬರೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಯತ್ನಿಸಿದರಲ್ಲ? ಹೇಳಿ, ಗೌರಿಯ ಹತ್ಯೆಯಿಂದ ಲಾಭ ಮಾಡಿಕೊಂಡವರು ಈ ಸಾಕ್ಷಿಪ್ರಜ್ಞೆಗಳೋ ಅಥವಾ ಹಿಂದುತ್ವವಾದಿಗಳೋ? ಕೊಲೆ ಮಾಡಿಸುವವರು ಲಾಭ ಇರುವವರೋ ನಯಾಪೈಸೆಯ ಲಾಭಾಂಶವೂ ದಕ್ಕದವರೋ?

ಇನ್ನು ರಾಷ್ಟ್ರೀಯ ಮಟ್ಟದ ಗಂಜಿಗಿರಾಕಿಗಳ ಇಂಗ್ಲೀಷ್ ಪತ್ರಿಕೆಗಳು ಗೌರಿಯನ್ನು ಇನ್ನೊಂದು ಮೆಟ್ಟಿಲು ಮೇಲೆ ಹತ್ತಿಸಿ, ಆಕೆ, ಮೋದಿ ಹರಡುತ್ತಿರುವ ಹಿಂದುತ್ವದ ಹುಸಿಬಾಂಬಿಗೆ ಎದೆಯೊಡ್ಡಿ ನಿಲ್ಲಬಲ್ಲಂಥ ವ್ಯಕ್ತಿತ್ವವಾಗಿದ್ದಳು ಎಂದು ಬಣ್ಣಿಸುತ್ತಿವೆ. ಗೌರಿ ಬದುಕಿದ್ದಾಗ ಯಾವೊಂದು ರೀತಿಯಲ್ಲೂ  ಒಂದು ಕೂದಲಿಗೂ ಸಮನಿಲ್ಲುವ ವ್ಯಕ್ತಿತ್ವವಾಗಿರಲಿಲ್ಲ. ಮೋದಿಯನ್ನು ಯೂ ಈಡಿಯೆಟ್ ಮೋದಿ ಎಂದೋ ಮೋದಿ ಒಬ್ಬ ಕತ್ತೆ ಎಂದೋ ಹೀಗಳೆಯುವುದನ್ನು ಬಿಟ್ಟರೆ ಗೌರಿಯಲ್ಲಿ ಪತ್ರಕರ್ತರಲ್ಲಿರಬೇಕಾದ ಗುಣ ಎಳ್ಳಷ್ಟೂ ಇರಲಿಲ್ಲ. ಮೋದಿಗೆ ನ್ಯಾಪ್‌ಕಿನ್ ಕಳಿಸುವ ಚಳವಳಿ ಮಾಡೋಣ ಎಂದು ಯಾವುದೋ ಸಂದರ್ಭದಲ್ಲಿ ಗಂಜಿಗಿರಾಕಿಗಳು ನಿರ್ಧರಿಸಿದಾಗ ಈ ಗೌರಿ, ಹೊಚ್ಚಹೊಸ ನ್ಯಾಪ್‌ಕಿನ್ ಯಾಕೆ? ನಾವೆಲ್ಲ ಬಳಸಿ ಎಸೆದಿರುವ ನ್ಯಾಪ್‌ಕಿನ್‌ಗಳನ್ನು ಮೋದಿಗೆ ಕಳಿಸೋಣ – ಎಂದಿದ್ದಳು. ಇದು ಈಕೆಯ ಬೌದ್ಧಿಕತೆಯ ಮಟ್ಟ. ಈಕೆಯದ್ದು ಮಾತ್ರವಲ್ಲ,  ಗಂಜಿಗಿರಾಕಿಗಳ ಬೌದ್ಧಿಕತೆ ಇದರ ಆಸುಪಾಸಿನಲ್ಲೇ ಇದೆ. ತನ್ನ ಬದುಕಿನುದ್ದಕ್ಕೂ ಯಃಕಶ್ಚಿತ್ ವ್ಯಕ್ತಿತ್ವವಾಗಿದ್ದ ಗೌರಿ ಸತ್ತ ಮೇಲೆ ಹುತಾತ್ಮಳಾದಳು. ಅಥವಾ ಬಲವಂತವಾಗಿ ಆಕೆಯನ್ನು ಹುತಾತ್ಮಳಾಗಿಸಲಾಯಿತು. ಆಕೆಯ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ರಾಹುಲ್ ಘಂಡಿ ಟ್ವೀಟ್ ಮಾಡಿ ಚಳವಳಿಯ ದಿಕ್ಕು ಹೇಗಿರಬೇಕೆಂಬುದನ್ನು ನಿರ್ದೇಶಿಸಿಯಾಗಿತ್ತು. ಅಲ್ಲಿಂದ ಇಂದಿನವರೆಗೂ ಕರ್ನಾಟಕದ ವಿಶೇಷ ತನಿಖಾ ದಳ, ರಾಹುಲ್ ಘಂಡಿಯ ನಿರ್ದೇಶನದಂತೆ ಕೆಲಸ ಮಾಡುತ್ತಿದೆಯೇನೋ ಎಂಬ ಅನುಮಾನ ನಮಗೆಲ್ಲರಿಗೂ ಬರುವಂತೆ ಕಾರ್ಯಾಚರಿಸುತ್ತಿದೆ. ವರ್ಷಾಂತ್ಯ ಹತ್ತಿರ ಬಂದಂತೆ ತನಿಖಾ  ಮೇಲೆ ವಿಚಾರಣೆ ಮುಗಿಸುವ ಒತ್ತಡ ಕೂಡ ಹೆಚ್ಚುತ್ತಿದೆ. ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಒಂದಷ್ಟು ಜನರನ್ನು ಈ ಪ್ರಕರಣದಲ್ಲಿ ಹೇಗಾದರೂ ಫಿಕ್‌ಸ್ ಮಾಡಿಬಿಟ್ಟರೆ ಈ ಕೊಲೆಯನ್ನು ಕಲಬುರ್ಗಿ ಕೊಲೆಗೆ, ಅಲ್ಲಿಂದ ದಾಬೋಲ್ಕರ್ ಮತ್ತು ಪನ್ಸಾರೆ ಕೊಲೆಗೆ ಲಿಂಕ್ ಮಾಡಿ ಒಟ್ಟಾರೆ ದೇಶದಲ್ಲೊಂದು ದೊಡ್ಡ ಹಿಂದುತ್ವ ವಿರೋಧಿ ವಿಪ್ಲವವನ್ನು ಎಬ್ಬಿಸಬಹುದು ಎಂಬುದು ದೇಶದ ಮೂರುಮುಕ್ಕಾಲು ಭಾಗದಲ್ಲಿ ಹೊಡೆಸಿಕೊಂಡಿರುವ ರಾಷ್ಟ್ರೀಯ ಪಕ್ಷದ ಚಿಂತನೆ. ವಿಶೇಷ ತನಿಖಾ ದಳದ ವಿಚಾರಣೆಯ  ಮತ್ತು ತನಿಖೆಯ ಪ್ರಾಮಾಣಿಕತೆಯನ್ನು ಕೇಂದ್ರ ಸರಕಾರ ಈಗಲೇ ಎಚ್ಚೆತ್ತು ಪ್ರಶ್ನಿಸದೆ ಹೋದರೆ 2019ರ ವೇಳೆಗೆ ಸರಿಪಡಿಸಲಾಗದಷ್ಟು ಡ್ಯಾಮೇಜ್ ಮಾಡಿಕೊಂಡು ಮೋದಿಯ ಸರಕಾರ ಮಂಡಿಯೂರಿ ಕೂರಬೇಕಾಗಬಹುದು. ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಞಾಸಿಂಗ್‌ರಿಗೆ ಮಾಡಿದಂತೆ, ಗೌರಿಯ ಹಂತಕರು ಎಂದು ಒಂದಷ್ಟು ಅಮಾಯಕರನ್ನು ಕಂಬಿಯ ಹಿಂದೆ ಕೂಡಿಹಾಕಿ ಏರೋಪ್ಲೇನ್ ಹತ್ತಿಸಿ ನವರಂಧ್ರಗಳಲ್ಲಿ ನೆತ್ತರೊಸರುವಂತೆ ಶಿಕ್ಷೆ ಕೊಟ್ಟರೆ ಆ ತಪ್ಪಿಗಾಗಿ ರಾಜ್ಯ ಸರಕಾರವನ್ನೂ, ಮೌನಮುನಿಯಾಗಿ ಕೂತ ಮೋದಿ ಸರಕಾರವನ್ನೂ ಕ್ಷಮಿಸುವಷ್ಟು ಮತದಾರ ಮುಗ್ಧನಲ್ಲ.

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close