ಕೊಹ್ಲಿಗೆ ಟೆಸ್ಟ್‌ನಲ್ಲಿ ಜೀವದಾನ ನೀಡಿದ್ದ ಧೋನಿ

Posted In : ಕ್ರೀಡೆ

ದೆಹಲಿ: ಇಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಗೆಲುವುಗಳನ್ನು ಕಂಡಂತಹ ನಾಯಕ ವಿರಾಟ್ ಕೊಹ್ಲಿ ಹಿಂದೆ ಟೆಸ್ಟ್ ಪಂದ್ಯದಲ್ಲಿ ಕಾಯಂ ಸ್ಥಾನ ಪಡೆಯಲು ಒದ್ದಾಡುತ್ತಿದ್ದರು. ಒಂದು ಸಲ ಅವರನ್ನು ತಂಡದಿಂದ ಹೊರಗಿಡುವಂತೆ ಆಯ್ಕೆ ಸಮಿತಿ ನಿರ್ಧರಿಸಿದಾಗ ನಾಯಕ ಧೋನಿ ಅವರಿಗೆ ಮತ್ತೊಂದು ಅವಕಾಶ ನೀಡಿದ್ದರು.

ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಕೊಹ್ಲಿ ಇಂದು ಟೆಸ್ಟ್ ಪಂದ್ಯದಲ್ಲಿ ತಮ್ಮದೇ ಛಾಪನ್ನು ಹೊಂದ್ದಿದಾರೆ. ಈ ವಿಷಯವನ್ನು ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಮೊಹಾಲಿ ಟೆಸ್ಟ್ ಪಂದ್ಯದ ವೇಳೆ ವೀಕ್ಷಕ ವಿವರಣೆ ಮಾಡುವಾಗ ಬಹಿರಂಗ ಪಡಿಸಿದ್ದಾರೆ. ‘2012ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಬದಲು ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವಂತೆ ಆಯ್ದಕೆ ಸಮಿತಿ ಹೇಳಿತ್ತು. ಆಗ ನಾನು ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆ. ಆದರೆ ನಾಯಕ ಧೋನಿ ಕೊಹ್ಲಿಗೆ ಮತ್ತೊಂದು ಅವಕಾಶ ನೀಡಲು ತೀರ್ಮಾನಿಸಿದ್ದರು. ಮುಂದೆ ನಡೆದುದೆಲ್ಲ ಇತಿಹಾಸ ಎಂದು ಸೆಹ್ವಾಗ್ ಹೇಳಿದ್ದಾರೆ.

ಕೊಹ್ಲಿ 2011ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಗೈದರೂ ಅವರು ಟೆಸ್ಟ್‌ನಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಲು ವಿಫಲರಾಗಿದ್ದರು. ಅವರು ಪರ್ತ್ ಟೆಸ್ಟ್ ವೇಳೆಗೆ 12 ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಅರ್ಧಶತಕವನ್ನಷ್ಟೇ ಸಿಡಿಸಿದ್ದರು. ಪರ್ತ್ ಟೆಸ್ಟ್‌ನಲ್ಲಿ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 44 ಹಾಗೂ 75 ರನ್ ಗಳಿಸಿದ್ದರು. ಬಳಿಕ ಹಿಂತಿರುಗಿ ನೋಡದ ಕೊಹ್ಲಿಗೆ ವಿಶಾಖಪಟ್ಟಣ ಟೆಸ್ಟ್ 50ನೇ ಟೆಸ್ಟ್ ಪಂದ್ಯವಾಗಿತ್ತು. ಅವರು ಟೆಸ್ಟ್‌ನಲ್ಲಿ 14 ಶತಕ ಹಾಗೂ 13 ಅರ್ಧಶತಕಗಳನ್ನೊಳಗೊಂಡ 3891 ರನ್ ಗಳಿಸಿದ್ದಾರೆ.ಅಂದು ಅವಕಾಶ ವಂಚಿತರಾದ ರೋಹಿತ್ ಶರ್ಮಾ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದು 2013 ರಲ್ಲಿ. ಅವರು ಈಡನ್‌ಗಾರ್ಡನ್‌ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದರು.

Leave a Reply

Your email address will not be published. Required fields are marked *

3 × three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top