ವಿಶ್ವವಾಣಿ

ಕ್ಯುಲಿಕ್ ಸಮೀಕ್ಷೆ ಏನು ಹೇಳುತ್ತದೆ ಗೊತ್ತಾ?

ರೊಬೊಟಿಕ್ಸ್ ಮತ್ತು ಆಟೋಮೇಷನ್ ಯುಗದಲ್ಲಿ ಡಾಟಾ ಕಾನ್ಫಿಡೆನ್ಸಿನ ಕೊರತೆ ಯಶಸ್ಸಿಗೆ ಅಡ್ಡಗಾಲು ಹಾಕುತ್ತದೆ ಎಂದು ಜಾಗತಿಕ ಸಮೀಕ್ಷಾ ವರದಿ ತಿಳಿಸಿದೆ. ಡಾಟಾ ಅನಲಿಟಿಕ್ಸ್ ನಲ್ಲಿ ನಾಯಕತ್ವದ ಸ್ಥಾನ ಹೊಂದಿರುವ ಕ್ಯುಲಿಕ್ ಪ್ರಾರಂಭಿಸಿರುವ ಹೊಸ ಜಾಗತಿಕ ಸಮೀಕ್ಷೆಯ ಪ್ರಕಾರ ವಾಣಿಜ್ಯೋದ್ಯಮದಲ್ಲಿ ಅಂತಿಮ ತೀರ್ಮಾನ ಮಾಡು ವವರಲ್ಲಿ ಡಾಟಾ ಮಿಷಿನ್ಸ್ ಕುರಿತು ಸೂಕ್ತ ಪ್ರಶ್ನೆಗಳನ್ನು ಕೇಳಲು ಕೌಶಲ್ಯದ ಕೊರತೆ ಎದುರಿಸುತ್ತಾರೆ ಎಂದು ತಿಳಿದುಬಂದಿದೆ.

ಮಕಿನ್ಸೆ ಈಗಾಗಲೇ ವರದಿ ನೀಡಿರುವಂತೆ, 2030ರ ವೇಳೆಗೆ ವಿಶ್ವಾದ್ಯಂತ ಸುಮಾರು 800 ಮಿಲಿಯನ್ ಕೆಲಸಗಾರರು ಆಟೋ ಮೇಷನ್ ಮತ್ತು ರೊಬೊಟಿಕ್‌ಸ್ ಕಾರಣ ದಿಂದಾಗಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ಗಾರ್ಟನರ್ ಡಾಟಾ ಸಾಕ್ಷರತೆ ಯನ್ನು ಕಾರ್ಯಸ್ಥಳದಲ್ಲಿ ಹೊಂದಿರಲೇ ಬೇಕಾದ ಕೌಶಲ್ಯ ಎಂದು ಬಣ್ಣಿಸಿದೆ. ಹೀಗಿದ್ದರೂ ಕೂಡ, ವಾಣಿಜ್ಯೋದ್ಯಮದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಹೆಚ್ಚಿನ (76%) ಮಂದಿ, ಡಾಟಾ ಓದಲಾಗಲೀ, ಅದರೊಡನೆ ಕೆಲಸ ಅದನ್ನು ಅರ್ಥೈಸಿ ಕೊಂಡು ವಿಮರ್ಶೆ ಮಾಡಲು ತಮ್ಮ ಕೌಶಲ್ಯದಲ್ಲಿ ಭರವಸೆಯನ್ನು ಹೊಂದಿಲ್ಲ. ಯುರೋಪಿಯನ್ ಎಕ್ಸಿಕ್ಯೂಟಿವ್‌ ಗಳಲ್ಲಿ ಈ ಕೊರತೆ ಹೆಚ್ಚಿನ ಪ್ರಮಾಣದಲ್ಲಿದ್ದು (83%), ಎಪಿಎಸಿ ದೇಶಗಳಲ್ಲಿ (80%) ಮತ್ತು ಅಮೆರಿಕಾದಲ್ಲಿ (67%) ಇದೆ.

ಕ್ಯುಲಿಕ್ ನಲ್ಲಿ ಡಾಟಾ ಲಿಟರೆಸಿ ಮುಖ್ಯಸ್ಥ ಜೊರ್ಡಾನ್ ಮೋರೋ ಹೇಳುವಂತೆ, ವಾಣಿಜ್ಯೋದ್ಯಮದಲ್ಲಿ ಸ್ಪರ್ಧಾತ್ಮಕತೆಗೆ ಡಾಟಾ ಹೊಸ ಆಧಾರ ಮತ್ತು ಮಾನದಂಡವಾಗಿ ಪರಿಣಮಿಸಿದೆ. ಮಾರುಕಟ್ಟೆ ಕುರಿತು ಹೆಚ್ಚಿನ ಜ್ಞಾನ ಪಡೆಯಲು ಜಾಗತಿಕ ಉದ್ಯಮಗಳು ಡಾಟಾವನ್ನು ಅವಲಂಬಿಸುತ್ತವೆ. ಆದರೆ, ಇಂದಿನ ಯುಗದಲ್ಲಿ ಯಾವುದೇ ಸಂಸ್ಥೆಯ ಯಶಸ್ಸು ಅದರ ಉದ್ಯೋಗಿಗಳು ಈ ಡಾಟಾ ವನ್ನು ಎಷ್ಟು ಉಪಯುಕ್ತವಾಗಿ ಬಳಸುವ ಕ್ಷಮತೆ ಹೊಂದಿದ್ದಾರೆ ಎನ್ನುವ ಅಂಶದ ಮೇಲೆ ಆಧಾರಿತವಾಗಿದೆ. ಡಾಟಾ ಈಗ ವ್ಯವಹಾರ ಜಗತ್ತಿನ ಹೊಸ ಭಾಷೆಯಾಗಿದೆ. ವಾಣಿಜ್ಯೋದ್ಯಮಗಳ ನಾಯಕತ್ವ ವಹಿಸಿಕೊಂಡಿರುವವರು ಡಾಟಾ ಅರ್ಥೈಸಿ ಕೊಳ್ಳಲು ಹೆಣಗಾಡುತ್ತಿದ್ದಲ್ಲಿ ಅವರು ತಮ್ಮ ನಾಯಕತ್ವದ ಸ್ಥಾನದಲ್ಲಿ ಮುಂದುವರೆಯಲು ಸವಾಲುಗಳನ್ನು ಎದುರಿಸುತ್ತಾರೆ.

ತನ್ನ ಹೊಸ ವರದಿಯಲ್ಲಿ ಕ್ಯುಲಿಕ್ ಡಾಟಾ ಅನಕ್ಷರತೆ ಕುರಿತು ಬೆಳಕು ಚೆಲ್ಲುವುದಲ್ಲದೆ, ಉದ್ಯೋಗಿಗಳು ಡಾಟಾವನ್ನು ಬಳಸು ವಂತೆ ಮಾಡಲು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ.