About Us Advertise with us Be a Reporter E-Paper

ಯಾತ್ರಾ panel2

ಗಂಡಿಕೋಟ – ದ ಗ್ರಾಂಡ್ ಕ್ಯಾನಿಯನ್ ಆಫ್ ಇಂಡಿಯಾ

ಸುಧೀರ್ ಸಾಗರ್

ಕಣಿವೆಯ ಮೇಲ್ಬಾಗದಲ್ಲಿ ನಿಂತು ಪ್ರಪಾತದಾಳಕ್ಕೊಂದು ಕಲ್ಲೆಸೆ ದರೆ ತಳ ಸೇರೋದು ಬಿಟ್ಟು, ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ಪುನಃ ಮೇಲ್ಮುಖವಾಗಿ ಚಲಿಸಲು ಮೊದಲಾಗೋದನ್ನೆಲ್ಲಿ ಯಾದರೂ ಕಂಡಿದ್ದೀರಾ? ನಂಬಲು ಅಸಾಧ್ಯವಾದರೂ ಇಂತಹ ದ್ದೊಂದು ವೈಚಿತ್ರ್ಯವಿರೋದು ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ಸೇರಿದ ಎಂಬ ಊರಿನಿಂದ ಹದಿನೈದು ಕಿಮೀ ದೂರದಲ್ಲಿರೋ ಗಂಡಿಕೋಟ ಎಂಬ ಗ್ರಾಮದಲ್ಲಿ.

ಮೂರು ಕಡೆ ಪ್ರಕೃತಿ ನಿರ್ಮಿತ ನೂರಾರು ಅಡಿಗಳ ಕಂದಕದ ತಡೆಗೋಡೆ, ಅದರ ಆಳದಲ್ಲಿ ರಭಸವಾಗಿ ಹರಿಯುತ್ತಿರೋ ನದಿ, ಮತ್ತೊಂದೆಡೆ ಸುಮಾರು ಹತ್ತಿಪ್ಪತ್ತು ಕಿಮೀ ಉದ್ದಗಲಕ್ಕೂ ಮೈ ಚಾಚಿಕೊಂಡಿರೋ ಕಲ್ಲುಬಂಡೆಗಳು ಹಾಗೂ ಕುರುಚಲು ಗಿಡಗಳಿಂದಾ ವೃತವಾದ ಬಯಲು ಪ್ರದೇಶ. ಇಂತಹದ್ದೊಂದು ಅದ್ಭುತ ರಕ್ಷಣಾ ವ್ಯವಸ್ಥೆಯ ನಡುವಲ್ಲಿರೋ ಎರ್ರಿಮಲೈ ಪರ್ವತದ ಮೇಲೆ ತಮ್ಮ ದೊಂದು ಸಾಮ್ರಾಜ್ಯ ಸ್ಥಾಪಿಸಿ ಕೊಂಡು 300ವರ್ಷಗಳಿಗೂ ಅಧಿಕ ಆಳ್ವಿಕೆ ನಡೆಸಿದ್ದು ವಿಜಯನಗರದ ಅರಸರ ಸಾಮಂತರೂ, ಸೇನೆಯ ಪ್ರಬಲ ಶಕ್ತಿಯೂ ಆಗಿದ್ದ ಪೆಮ್ಮಸಾನಿಗಳು.

ಈ ವಂಶದ ರಾಜರುಗಳಲ್ಲಿ ಪ್ರಮುಖನಾದ ಕುಮಾರ ತಿಮ್ಮಾ ನಾಯಕನ ಕಾಲದಲ್ಲಿ ನಿರ್ಮಾಣವಾಯಿ ತೆನ್ನಲಾಗುವ ಬಲಾಢ್ಯ ಕೋಟೆಯೇ ಗಿರಿದುರ್ಗ, ಜಲದುರ್ಗ, ಕಮರಿದುರ್ಗ ಎಂದೆಲ್ಲಾ ಪ್ರಖ್ಯಾತವಾಗಿರೋ, ಮೀರ್ ಜುಮ್ಲಾ ನಿಂದ ದಾಳಿಗೀಡಾಗಿ ಲೂಟಿ ಗೊಂಡು ಮತ್ತೊಂದು ಹಂಪಿಯಂತೆ ಕಂಡು ಬರೋ ಗ್ರಾಂಡ್ ಕ್ಯಾನಿಯನ್ ಆಫ್ ಇಂಡಿಯಾ ಎಂಬ ಖ್ಯಾತಿಯ ಗಂಡಿಕೋಟ.

ಸುಮಾರು ಎಂಟು ಕಿಮೀ ಸುತ್ತಳತೆಯಲ್ಲಿ ನಲವತ್ತು ಅಡಿ ಎತ್ತರ ಅಡಿ ದಪ್ಪದ ಬಲಿಷ್ಠವಾದ ರಕ್ಷಣಾ ಗೋಡೆ, ಅದರ ಮೇಲ್ಭಾಗ ದಲ್ಲಿರೋ ನಲವತ್ತಕ್ಕೂ ಅಧಿಕ ರಕ್ಷಣಾ ಗೋಪುರಗಳು, ಮಾಧವ ಹಾಗೂ ರಂಗನಾಥ ದೇವಸ್ಥಾನಗಳು,ಮದ್ದುಗುಂಡು ಸಂಗ್ರಹಾಗಾರ, ಉಗ್ರಾಣ ಗಳು, ರಾಣಿ ಮಹಲ್, ಬಂಧೀಖಾನೆ, ಪುಷ್ಕರಣಿಗಳು, ರ್ಚಾಮಿರ್ನಾ, ಜುಮ್ಲಾ ಮಸೀದಿ ಇಲ್ಲಿನ ಪ್ರಮುಖ ಆಕರ್ಷಣೆ ಯಾದರೆ, ಇವೆಲ್ಲವುಗಳನ್ನೂ ಮೀರಿಸುವಂತೆ ಜನರನ್ನು ಆಕರ್ಷಿಸು ತ್ತಿರೋದು ಮಾತ್ರ ಕೋಟೆಗೆ ಕಾವಲು ಗೋಡೆಯಂತೆ ಮೂರು ಭಾಗ ಆವರಿಸಿ ಕೊಂಡಿರುವ ಪೆನ್ನಾ ನದಿಯಿಂದಾಗಿ ಉಂಟಾಗಿರೋ ಮುನ್ನೂರು ಅಡಿ ಅಗಲ ಹಾಗೂ ಉದ್ದಕ್ಕೆ ಮಲಗಿರೋ ಆನಕೊಂಡಾ ಹಾವಿನಂತಿರೋ ಕಣಿವೆಯ ವಿಹಂಗಮ ದೃಶ್ಯಾವಳಿಗಳು.

ಮುಗಿಲೆತ್ತರಕ್ಕೆ ಚಾಚಿದಂತಿರೋ ಬಂಡೆಗಳ ತುದಿಯನ್ನೇರಿ ಕುಳಿತು ಸೂರ್ಯೋದಯ ಹಾಗೂ ಸೂರ್ಯಾಸ್ತ ಗಳೆರಡರ ದೃಶ್ಯ ವೈಭವ ವನ್ನು ಸವಿಯಬಹುದಾಗಿದ್ದು,ಚಾರಣ ಮಾಡ ಬಯಸು ವವರು ಎರಡು ಕಿಮೀ ಆಳದಲ್ಲಿರೋ ನದಿ ಪಾತ್ರದವರೆಗೊಂದು ಚಾರಣ ವೂ ಕೈಗೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಆಂಧ್ರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರಾಕ್ ಕ್ಲೈಂಬಿಂಗ್, ಯಾರ್‌ಪಲ್ಲಿಂಗ್, ಕಯಾಕಿಂಗ್, ಬೋಟಿಂಗ್ ಸೌಲಭ್ಯವೂ ಇದ್ದು, ಇತ್ತೀಚೆಗೆ ಜಲಾಶಯದ ನಡುವಲ್ಲಿರೋ ದ್ವೀಪದಲ್ಲಿಯೂ ರೆಸಾರ್ಟ್ ನಿರ್ಮಾಣವಾಗಿದ್ದು ಅಲ್ಲಿಗೂ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೇಲಂ ಗುಹೆಗಳು
ದೇಶದಲ್ಲಿಯೇ ಅತ್ಯಂತ ಉದ್ದ ಹಾಗೂ ದೊಡ್ಡದಾದ ನೈಸರ್ಗಿಕ ಗುಹೆಯೆಂಬ ಖ್ಯಾತಿಯ, ಮಿಲಿಯನ್ ವರ್ಷ ಗಳ ಹಿಂದೆ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ರಚನೆಗೊಂಡಿರೋ ಬೇಲಂ ಗುಹೆ ಜಮ್ಮಲ ಮಡುಗುವಿನಿಂದ ಕೇವಲ 46 ಞ ದೂರದಲ್ಲಿದೆ. ಸುಣ್ಣದ ಕಲ್ಲುಗಳಿಂದ ನಿರ್ಮಾಣವಾಗಿರೋ ಈ ಗುಹೆ ಭೂಮಟ್ಟದಿಂದ ನೂರೈವತ್ತು ಅಡಿ ಆಳದಲ್ಲಿದ್ದು,ಇಲ್ಲಿಯವರೆಗೂ 3.5 ಕಿಮೀ ವರೆಗೂ ಅನ್ವೇಷಿಸಲಾಗಿದ್ದು ಇದರಲ್ಲಿ ಕೇವಲ 1.5 ಕಿಮೀ ನಷ್ಟು ಮಾತ್ರ ಸಾರ್ವಜನಿಕ ವೀಕ್ಷಣೆಗೆ ತೆರೆದಿಡಲಾಗಿದೆ. ಸಾಗುತ್ತಾ ಹೋದಂತೆ ಹೊಸದೊಂದು ಪ್ರವೇಶಿಸುವಂತೆ ಭಾಸವಾಗುವ, ಸುತ್ತಲೂ ಕಂಡುಬರೋ ಚಿತ್ರವಿಚಿತ್ರ ರಚನೆಗಳು, ಕೆಲವೊಂದು ಕಡೆ ನೇರ ವಾಗಿ ನಡೆಯಲೂ ಆಗದಂತಹ ಕೊಳವೆ ಮಾರ್ಗಗಳ ಹಾದಿಯನ್ನು ಮತ್ತಷ್ಟು ರೋಚಕಗೊಳಿಸುತ್ತವೆ. ಹೀಗಿದ್ದೂ ಸಾಕಷ್ಟು ಬೆಳಕಿನ ಹಾಗೂ ಇಂಗಾಲ ಹೀರಿಕೊಳ್ಳುವ ಕೊಳವೆಗಳನ್ನು ಅಳವಡಿಸಲಾಗಿರೋ ಕಾರಣ ದಿಂದಾಗಿ ಸಮಸ್ಯೆಯೇನೂ ಉಂಟಾಗುವುದಿಲ್ಲ.

ಸಾಗುವ ಹಾದಿಯಲ್ಲಿ ವೀಕ್ಷಣೆಗೆ ಅನುಕೂಲವಾಗುವಂತೆ ಒಂಬತ್ತು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಅತೀ ಚಿಕ್ಕ ಹಾದಿಯಲ್ಲಿ ಅಗೋ ಸಿಂಹದ್ವಾರ, ಛಲಪತಿ ರೆಡ್ಡಿ ಹಾಲ್, ಗಧೆ, ಆನೆಯ ಕಾಲುಗಳ ರಚನೆಯಂತಿರೋ ರಾಮರೆಡ್ಡಿ ಮಂಟಪ, ತಲೆ ಕೆಳಗಾಗಿ ಇಳಿ ಬಿಟ್ಟಂತಿರುವ ರಚನೆಗಳಿರೋ ಕೋಟಿಲಿಂಗ, ಆಲದ ಮರದಂತೆಯೇ ರಚನೆಯಿರೋದ್ರಿಂದಾಗಿ ಆಲದಮರದ ಹಾಲ್, ತರಹೇವಾರಿ ಬೆಳಕು ಗಳ ವೈವಿದ್ಯಮಯ ಮಾಯಾ ಮಂದಿರ, ಶಿವಲಿಂಗ ಮೇಲೆ ನೀರು ಬೀಳುತ್ತಿರುವ ಗುಹೆಗಳಲ್ಲಿಯೇ ಅತೀ ಆಳದಲ್ಲಿರೋ ಪಾತಾಳ ಗಂಗೆ, ಧ್ಯಾನ ಮಂದಿರ, ಗೆಬರ್ ಹಾಲ್ ಎಂಬ ಹೆಸರು ನೀಡಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close