ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲಿರುವ ಬಿಜೆಪಿ, ಹಿ.ಪ್ರದಲ್ಲಿ ಕಾಂಗ್ರೆಸ್ ಧೂಳೀಪಟ: ಸಮೀಕ್ಷೆ

Posted In : ದೇಶ

ದೆಹಲಿ: ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲಿರುವ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

22 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಂಡು ಬಂದಿರುವ ಬಿಜೆಪಿ ಈ ಬಾರಿ ಭರೀ ಬಹುಮತ ಪಡೆಯುವ ಸಾಧ್ಯತೆಗಳು ಕ್ಷೀಣಿಸಿದ್ದು ಸರಳ ಬಹುಮತ ಪಡೆಯಲಿದೆ ಎಂದು ಸಾಕಷ್ಟು ಸಮೀಕ್ಷೆಗಳಿಂತ ಗೋಚರಿಸುತ್ತಿದೆ. ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಕನಿಷ್ಠ 99 ಸ್ಥಾನಗಳು ಲಭಿಸಲಿದೆ ಎಂದು ಹೇಳುತ್ತಿವೆ.

ಪಾಟೀದಾರ್‌ ಆಂದೋಲನ ಹಾಗೂ ನೋಟು ನಿಷೇಧದ ಕಾರಣ ಗುಜರಾತ್‌ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದು ಹೇಳಲಾಗಿತ್ತು, ಆದರೆ ಸಮೀಕ್ಷೆಗಳ ಅಭಿಪ್ರಾಯ ಬಿಜೆಪಿ ಪಾಳೆಯದಲ್ಲಿ ನಿರಾಳತೆ ಮೂಡಿಸಿದೆ. ಮೋದಿ ಅಲೆ ಇನ್ನೂ ಪ್ರಬಲವಾಗೇ ಇದ್ದು 2019ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳು ಈ ಮೂಲಕ ದಟ್ಟೈಸಿವೆ.

ಸಮೀಕ್ಷೆಗಳು ನಿಜವಾದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ರಾಹುಲ್‌ ಗಾಂಧಿ ನಾಯಕತ್ವದ ಕುರಿತು ಸಾಕಷ್ಟು ಪ್ರಶ್ನೆ ಏಳಲಿವೆ. ಸಮೀಕ್ಷೆ ನಡೆಸಿದ ಏಜೆನ್ಸಿಗಳ ಪೈಕಿ ಎರಡು ಸಂಸ್ಥೆಗಳು 2002ರಲ್ಲಿ ಪಡೆದಿದ್ದ 127 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಿಸಲಿದೆ ಎಂದು ಹೇಳಿವೆ. 2012ರಲ್ಲಿ ಗೆದ್ದಿದ್ದ 115 ಕ್ಷೇತ್ರಗಳಿಗಿಂತ ಈ ಬಾರಿ ಕಡಿಮೆ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿರುವ ಇಂಡಿಯಾ ಟುಡೇ ಬಿಜೆಪಿ 99-113 ಸ್ಥಾನಗಳಲ್ಲಿ ಜಯಿಸಲಿದೆ ಎಂದು ತಿಳಿಸಿದೆ.

ಟುಡೇಸ್‌ ಚಾಣಕ್ಯ ನಡೆಸಿದೆ ಸಮೀಕ್ಷೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆಯಲಿರುವ ಬಿಜೆಪಿ 135-146 ಸ್ಥಾನಗಳಲ್ಲಿ ಜಯಿಸಲಿದೆ ಎಂದು ತಿಳಿದುಬಂದಿದೆ. ಟೈಮ್ಸ್‌ ನೌ 113 ಬಿಜೆಪಿಗೆ ಹಾಗೂ 66 ಸ್ಥಾನಗಳು ಕಾಂಗ್ರೆಸ್‌ಗೆ ಒಲಿಯಲಿವೆ ಎಂದು ತಿಳಿಸಿದೆ.

ಇನ್ನು ಹಿಮಾಚಲ ಪ್ರದೇಶದ 68 ಸ್ಥಾನಗಳ ಪೈಕಿ ಬಿಜೆಪಿ 42-55 ಸ್ಥಾನಗಳಲ್ಲಿ ಜಯಿಸಲಿದ್ದು ಭಾರೀ ಬಹುಮತ ಪಡೆಯಲಿದೆ ಎಂದು  ತಿಳಿದುಬಂದಿದೆ.

ಹಿಮಾಚಲ ಪ್ರದೇಶದಲ್ಲಿ ನವೆಂಬರ್‌ 9 ರಂದು ಮತದಾನ ನಡೆದಿದ್ದರೆ ಗುಜರಾತ್‌ನಲ್ಲಿ ಡಿಸೆಂಬರ್‌ 9 ಹಾಗೂ 14ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಸೋಮವಾರ ಹೊರಬೀಳಲಿದೆ.

 

Leave a Reply

Your email address will not be published. Required fields are marked *

16 − 1 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top