ಗುಜರಾತ್‌ ಚುನಾವಣೆ ಮೇಲೆ ಚೀನಾ ಕಣ್ಣು

Posted In : ದೇಶ

ದೆಹಲಿ: ಗುಜರಾತ್‌ ಚುನಾವಣೆಯನ್ನು ಚೀನಾದಲ್ಲಿ ಗಹನವಾಗಿ ವೀಕ್ಷಿಸಲಾಗುತ್ತಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸುಧಾರಣಾ ಕಾರ್ಯಕ್ರಮಗಳಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ.

ಭಾರತದೊಂದಿಗೆ ಹೆಚ್ಚುತ್ತಿರುವ ಆರ್ಥಿಕ ಸಹಕಾರದ ನಿಟ್ಟನಲ್ಲಿ ಮೋದಿ ಸರಕಾರ ತೆಗೆದುಕೊಂಡಿರುವ ಆರ್ಥಿಕ ಸುಧಾರಣೆಗಳು ಮಹತ್ವ ಪಡೆದುಕೊಂಡಿವೆ ಎಂದು ಚೀನಾದ ಗ್ಲೋಬಲ್‌ ಟೈಮ್ಸ್ ಹೇಳಿಕೊಂಡಿದ್ದು ಭಾರತದಲ್ಲಿನ ಸುಧಾರಣೆಗಳು ಚೀನಾ ಮೇಲೆ ಶೀಘ್ರ ಪರಿಣಾಮ ಬೀರಲಿವೆ ಎಂದು ತಿಳಿಸಿದೆ.

“ಭಾರತದಲ್ಲಿರುವ ಶಿಯೋಮಿ, ಒಪ್ಪೋದ ರೀತಿಯ ಸಂಸ್ಥೆಗಳು ಭಾರತಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿನ ಆರ್ಥಿಕ ಸುಧಾರಣೆಗಳು ಪ್ರಭಾವ ಬೀರಲಿವೆ. ಗುಜರಾತ್‌ನಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಗೆದ್ದರೆ ಮೋದಿ ಸರಕಾರ ಆರ್ಥಿಕ ಸುಧಾರಣೆಗಳಿಗೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಇವೆಲ್ಲದರ ಪ್ರಭಾವ ಚೀನೀ ಕಂಪನಿಗಳ ಮೇಲೆ ಆಗಲಿದೆ” ಎಂದು ಗ್ಲೋಬಲ್‌ ಟೈಮ್ಸ್ ವರದಿ ಮಾಡಿದೆ.

ಗುಜರಾತ್‌ನಲ್ಲಿ ಬಿಜೆಪಿ ಗೆದ್ದರೂ ಮತ ಗಳಿಕೆಯಲ್ಲಿ ಕಳೆದ ಬಾರಿಗಿಂತ ಇಳಿಕೆ ಕಂಡರೂ ಮೋದಿ ಸರಕಾರಕ್ಕೆ ಹಿನ್ನಡೆಯಾಗಲಿದ್ದು ಆರ್ಥಿಕ ಸುಧಾರಣೆಗಳು ಹೂಡಿಕೆದಾರರ ವಿಶ್ವಾಸ ಕಳೆದುಕೊಳ್ಳಲಿವೆ ಎಂದು ಹೇಳಿರುವ ಪತ್ರಿಕೆ ದೇಶದ ಸಣ್ಣ ಉದ್ಯಮಗಳು ಹಾಗೂ ಸಾಮಾನ್ಯ ಜನತೆಗೆ ಲಾಭ ತಂದುಕೊಡುವ ನಿಟ್ಟಿನಲ್ಲಿ ಜನರಲ್ಲಿ ಅನುಮಾನ ಹುಟ್ಟಲಿದೆ ಎಂದು ಹೇಳೀದೆ.

ಫಲಿತಾಂಶ ಘೋಷಣೆ ಬಳಿಕ ಭಾರತದಲ್ಲಿರುವ ಚೀನೀ ಸಂಸ್ಥೆಗಳು ಭಾರತ ಮಾರುಕಟ್ಟೆಗಳಲ್ಲಿ ಆಗಬಹುದಾದ ಏರಿಳಿತಗಳ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಪತ್ರಿಕೆ ತಿಳಿಸಿದೆ.

 

 

Leave a Reply

Your email address will not be published. Required fields are marked *

four × 2 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top