ಗೋವು ರಾಷ್ಟ್ರೀಯ ಪ್ರಾಣಿಯಾಗಲಿ

Posted In : ಚಿಕ್ಕಮಗಳೂರು, ರಾಜ್ಯ

ಬೀರೂರು: ಗೋ ಸಂರಕ್ಷಣೆಗಾಗಿ ಪ್ರತಿಯೊಬ್ಬ ಭಾರತದ ಪ್ರಜೆಯಿಂದ ಹಸ್ತಾಕ್ಷರ ಪಡೆದು ಅದರ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ತಿಳಿಸಬೇಕು, ಗೋವನ್ನು ನಮ್ಮ ರಾಷ್ಟ್ರ ಪ್ರಾಣಿ ಎಂದು ಬಿಂಬಿಸಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳೀದರು.

ಪಟ್ಟಣದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಗೋಸಂರಕ್ಷಣೆಗಾಗಿ ರೂಪಿಸಿರುವ ಗೋ ಪರಿವಾರದ ಚಿಕ್ಕಮಗಳೂರು ವ್ಯಾಪ್ತಿಯ ಸದಸ್ಯರೊಂದಿಗೆ ಗೋ ಸಂರಕ್ಷಣಾ ಜಿಲ್ಲಾ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಗೋಹತ್ಯೆಯನ್ನು ವಿರೋಧಿಸಿ ಕಾನೂನು ಕಾಯ್ದೆ ಮಾಡಲು ಒತ್ತಾಯಿಸಿ ಸಂವಿಧಾನ ಬದ್ಧ ಮತ್ತು ಕಾನೂನಿಗೆ ಅನುಸಾರವಾಗಿ ಪ್ರಜೆಗಳ ಹಸ್ತಾಕ್ಷರದ ಸಹಿ ಸಂಗ್ರಹ ನಡೆಸಿದ್ದು, ಧರ್ಮ ಹಾಗೂ ಕಾನೂನಿಗೆ ಅನುಸಾರವಾಗಿ ನ್ಯಾಯ ಕೇಳುವುದು ನಮ್ಮ ಹಕ್ಕಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಒತ್ತಾಯಿಸುವ ಅಭಿಯಾನ ಇದಾಗಿದೆ. ದೇಶೀಯ ಗೋವು ತಳಿಗಳ ಸಂರಕ್ಷಣೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೋರಾಟ ರೂಪಿಸಬೇಕಾದ ಅವಶ್ಯವಿದೆ ಎಂದರು.

 

Leave a Reply

Your email address will not be published. Required fields are marked *

1 × five =

 
Back To Top