ಚಿತ್ರದುರ್ಗದಲ್ಲಿ ಆರದ ಟಿಪ್ಪು ಕೆಂಡ

Posted In : ಚಿತ್ರದುರ್ಗ, ರಾಜ್ಯ

ಚಿತ್ರದುರ್ಗ:  ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಿಸುವುದರ ವಿರುದ್ಧ ಮದಕರಿನಾಯಕ ಹಿತರಕ್ಷಣಾ ಸಮಿತಿಯಿಂದ ಪೊಲೀಸರ ನಿಷೇಧದ ನಡುವೆಯೇ ಕೃತಕ ಒನಕೆ ಚಳವಳಿ ಹಿಡಿದು ಪ್ರತಿಭಟನೆ ಮಾಡಿದರು. ಭಜರಂಗದಳದ ಕ್ಷೇತ್ರೀಯ ಸಂಚಾಲಕ ಗೋಪಾಲ್ ಮಾತನಾಡಿ, ಟಿಪ್ಪುಜಯಂತಿ ಆಚರಿಸಲು ಬಿಡುವುದಿಲ್ಲ ಎಂದು ಸವಾಲು ಎಸೆದು ಜನರ ಭಾವನೆಯನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ. ಅಲ್ಪಸಂಖ್ಯಾತರ ಮನಗೆಲ್ಲಲು ಇಂತಹ ಕುತಂತ್ರ ಕೆಲಸ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ. ಜಯಂತಿ ನಿಲ್ಲಿಸಿ ಶಾಂತಿ ಕಾಪಾಡಿ. ಇಲ್ಲವಾದರೆ ರಾಜ್ಯಾದ್ಯಂತ ಟಿಪ್ಪುಜಯಂತಿ ಆಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು. ಸಾಹಿತಿ ಚಿದಾನಂದಮೂರ್ತಿ ಮಾತನಾಡಿ, ಮೈಸೂರು ದೊರೆಗಳನ್ನು ಕ್ರೌರ್ಯದಿಂದ ಹಿಂದಿಕ್ಕಿ ಮೈಸೂರನ್ನು ಆಳಿದ ಟಿಪ್ಪುಸುಲ್ತಾನ್‌ನನ್ನು ಗಾಂಧಿ, ವಲ್ಲಭಭಾಯಿ ಪಟೇಲ್, ಸುಭಾಷ್‌ಚಂದ್ರಬೋಸ್‌ಗೆ ಹೋಲಿಸುವುದು ಸರಿಯಲ್ಲ. ಮತಾಂಧನಾಗಿದ್ದ ಟಿಪ್ಪು ಸಾವಿರಾರು ಹಿಂದುಗಳನ್ನುಅಪಹರಿಸಿ ಬಲತ್ಕಾರವಾಗಿ ಮತಾಂತರಗೊಳಿಸಿ. ಹಿಂದು ದೇವಾಲಯಗಳನ್ನು ನಾಶಪಡಿಸಲು ಆಜ್ಞೆ ಹೊರಡಿಸಿದನು. ಇಂತಹ ಕ್ರೂರಿಯ ಜಯಂತಿಯನ್ನು ಆಚರಿಸಲು ಬಿಡಬಾರದು ಎಂದು ಘರ್ಜಿಸಿದರು. ಈ ಪ್ರತಿಭಟನೆಯನ್ನು ಸೆರೆ ಹಿಡಿಯಲು ಡ್ರೋಣ್ ಕ್ಯಾಮೆರಾ ಬಳಸಲಾಗಿತ್ತು. ನಿಷೇಧದ ನಡುವೆಯೂ ಪ್ರತಿಭಟನೆ ಮಾಡಿರುವ ಅನೇಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದರು.

Leave a Reply

Your email address will not be published. Required fields are marked *

ten − three =

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top