About Us Advertise with us Be a Reporter E-Paper

ದೇಶಪ್ರಚಲಿತ

ಜಗತ್ತಿನ ಆರನೇ ದೊಡ್ಡ ಆರ್ಥಿಕ ಶಕ್ತಿಯಾದ ಭಾರತ.

ಪ್ಯಾರಿಸ್‌:  ಫ್ರಾನ್ಸ್ ಅನ್ನು ಏಳನೇ ಸ್ಥಾನಕ್ಕೆ ತಳ್ಳುವ ಮೂಲಕ ಜಗತ್ತಿನ ಆರನೇ ಅತಿ ದೊಡ್ಡ ಆರ್ಥಿಕ  ಶಕ್ತಿಯಾಗಿ ಭಾರತ ಹೊರಹೊಮ್ಮಿರುವ ವಿಷಯವನ್ನು ವಿಶ್ವ ಬ್ಯಾಂಕ್‌ ಅಧ್ಯಯನ ಹೊರಹಾಕಿದೆ.

ಕಳೆದ ವರ್ಷದ ಅಂತ್ಯಕ್ಕೆ ಭಾರತ ಒಟ್ಟಾರೆ ಆಂತರಿಕ ಉತ್ಪನ್ನ(ಜಿಡಪಿ)ಯ ಮೌಲ್ಯವು  2.597 ಲಕ್ಷ ಕೋಟಿ ಡಾಲರ್‌ಗಳಷ್ಟಿತ್ತು. ಇದೇ ವೇಳೆ ಫ್ರಾನ್ಸ್ ಜಿಡಿಪಿ 2.582 ಲಕ್ಷ ಕೋಟಿ ಡಾಲರ್‌ಗಳಷ್ಟಿತ್ತು ಎಂದು ಕಂಡುಬಂದಿದೆ.

134 ಕೋಟಿ ಜನಸಂಖ್ಯೆ ಇದೆ ಎಂದು ಹೇಳಲಾಗುತ್ತಿರುವ ಭಾರತ ಶೀಘ್ರದಲ್ಲೇ ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯುಳ್ಳ ದೇಶವಾಗಲಿದೆ. ಫ್ರಾನ್ಸ್‌ ಜನಸಂಖ್ಯೆಯು 6.7 ಕೋಟಿಯಷ್ಟಿದೆ. ತಲಾ ಜಿಡಿಪಿ ಹಂಚಿಕೆ ವಿಚಾರದಲ್ಲಿ ಫ್ರಾನ್ಸ್ ಭಾರತಕ್ಕಿಂತ 20 ಪಟ್ಟು ದೊಡ್ಡದಿದೆ ಎಂದು ತಿಳಿದುಬಂದಿದೆ.ಉತ್ಪಾದನೆ ಹಾಗು ಗ್ರಾಹಕ ಖರ್ಚುಗಳು ಭಾರತದ ಆರ್ಥಿಕತೆಯ ವೃದ್ಧಿಯ ಪ್ರಮುಖ ಕಾರಣಗಳಾಗಿವೆ. ಚೀನಾದ ಪ್ರಗತಿ ದರ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ, ಏಷ್ಯಾದ ಅಭಿವೃದ್ಧಿ ಇಂಜಿನ್‌ ಆಗುವತ್ತ ಭಾರತ ಧೃಢ ಹೆಜ್ಜೆ ಇಟ್ಟಿದೆ.ತೆರಿಗೆ ಸುಧಾರಣೆ ಕಾರಣ ಪ್ರಸಕ್ತ ವರ್ಷದ 7.4% ರ ದರದಲ್ಲಿ ವಿತ್ತೀಯ ಪ್ರಗತಿ ಕಾಣಲಿರುವ ಭಾರತ ಮುಂದಿನ ವರ್ಷ 7.8% ದರದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅಂದಾಜು ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Language
Close