ಜಪಾನ್‌ ಹಿಂದಿಕ್ಕಲಿರುವ ಭಾರತ: ವರದಿ

Posted In : ದೇಶ

ಮುಂಬಯಿ: ಕಳೆದ ಮೂರು ವರ್ಷಗಳಿಂದ ಸ್ಥಿರ ಆರ್ಥಿಕ ಪ್ರಗತಿ ಸಾಧಿಸುತ್ತಿರುವ ಭಾರತದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) 2028ಎ ವೇಳೆಗೆ ಜಪಾನ್‌ಅನ್ನು ಹಿಂದಿಕ್ಕಿ ವಿಶ್ವ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಫಾರಿನ್‌ ಬ್ರೋಕರೇಜ್‌ ವರದಿ ತಿಳಿಸಿದೆ.

ಈಗಾಗಲೇ ಬ್ರೆಜಿಲ್‌ ಹಾಗೂ ರಷ್ಯಾವನ್ನು ಹಿಂದಿಕ್ಕಿರುವ ಭಾರತ ಬ್ರಿಕ್ಸ್‌ ಒಕ್ಕೂಟದಲ್ಲಿ ಚೀನಾ ನಂತರದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಭಾರತ 2019ರೊಳಗೆ ಫ್ರಾನ್ಸ್ ಹಾಗೂ ಬ್ರಿಟನ್‌ಅನ್ನು ಹಿಂದಿಕ್ಕಿ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಜರ್ಮನಿ ನಂತರದ ಸ್ಥಾನದಲ್ಲಿರಲಿದೆ.

“ಮುಂದಿನ ದಶಕದಲ್ಲಿ ಭಾರತದ ಜಿಡಿಪಿ 10ರ ದರದಲ್ಲಿ ವೃದ್ಧಿಸಲಿದ್ದು ಜಪಾನ್‌ ಶೇ 1.6ರ ದರದಲ್ಲಿ ಪ್ರಗತಿ ಕಾಣಲಿದ್ದು ಭಾರತವವು ಜರ್ಮನಿ ಹಾಗೂ ಜಪಾನ್‌ಅನ್ನು ಹಿಂದಿಕ್ಕಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಭಾರತದ ಜಿಡಿಪಿ 2.26 ಲಕ್ಷ ಕೋಟಿ ಡಾಲರ್‌ನಷ್ಟಿತ್ತು.

ಅವಲಂಬನೆಯ ಅನುಪಾತದಲ್ಲಿ ಇಳಿಕೆ, ಆರ್ಥಿಕ ಪ್ರಬುದ್ಧತೆ ಹಾಗ ತಲಾ ಆದಾಯದಲ್ಲಿ ಏರಿಕೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಭಾರತದ ವೃದ್ಧಿ ದರದಲ್ಲಿ ಗಣನೀಯ ಏರಿಕೆ ಕಾಣಲಿದೆ ಎಂದು “ಇಂಡಿಯಾ 2028” ಎಂಬ ಹೆಸರಿನ ವರದಿಯಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭ ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಒಳಗೊಳ್ಳುವಿಕೆ ಕ್ರಮಗಳಿಂದ ಆಗಲಿರುವ ಪ್ರಯೋಜನಗಳೂ ದೇಶದ ತ್ವರಿತ ವೃದ್ಧಿಗೆ ನೆರವಾಗಲಿದೆ ಎಂದು ವಿವರಿಸಲಾಗಿದೆ.

ತಲಾ ಆದಾಯದಲ್ಲಿ ವೃದ್ಧಿಯಾಗುವ ಕಾರಣ ಮಾರುಕಟ್ಟೆಗಳ ಗಾತ್ರದಲ್ಲೂ ವೃದ್ಧಿ ಕಂಡು ಬರುವ ಕಾರಣ ಶೇ 7ರ ದರದಲ್ಲಿ ನಿಜವಾದ ವೃದ್ಧಿ ಸಾದ್ಯ ಎಂದು ಅಂದಾಜಿಸಲಾಗಿದೆ.

ಹೆಚ್ಚುತ್ತಿರುವ ಉಳಿತಾಯದ ಟ್ರಂಡ್‌ ಕಾರಣ 14ರೊಳಗಿನ ಹಾಗೂ 65ರ  ಮೇಲ್ಪಟ್ಟ ವಯೋಮಾನದವರು ಅವಲಂವನೆಯಿಂದ ಆಚೆ ಬರುತ್ತಿದ್ದಾರೆ. ಈ ಕಾರಣದಿಂದ 2028ರ ವೇಳೆಗೆ ಉಳಿತಾಯ ಹಾಗೂ ಜಿಡಿಪಿ ನಡುವಿನ ಅನುಪಾತ ಶೇ 35ಕ್ಕೆ ವೃದ್ಧಿಸಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಈ ಅನುಪಾತ ಶೇ 32.4ರಷ್ಟಿತ್ತು 1980 ಹಾಗೂ 1990ರ ದಶಕದಲ್ಲಿ ಇದೇ ಅನುಪಾತ ಶೇ 25ರಷ್ಟಿತ್ತು.  ಮೂಲಕ 2-2.5ರ ದರದಲ್ಲಿ ಜಿಡಿಪಿ ಹಣದುಬ್ಬರದ ಅನುಪಾತ ಇರಲಿದೆ.

ಇದೇ ಕಾಲಘಟ್ಟದಲ್ಲಿ ವಿದೇಶೀ ವಿನಿಮಯದಲ್ಲೂ ಗಣನೀಯ ಏರಿಕೆ ಕಂಡುಬರಲಿದೆ ಎಂದು ತಿಳಿಸಲಾಗಿದೆ.

 

 

 

Leave a Reply

Your email address will not be published. Required fields are marked *

nineteen − 7 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top