ಜಿಎಸ್‌ಟಿಯಿಂದ ಸಣ್ಣ ಉದ್ಯಮಕ್ಕೆ ಪೆಟ್ಟು

Posted In : ಧಾರವಾಡ

ಹುಬ್ಬಳ್ಳಿ: ಯುಪಿಎ ರೂಪಿಸಿದ್ದ ಜಿಎಸ್‌ಟಿ ಜನಪರವಾಗಿತ್ತು. ಆದರೆ, ಎನ್‌ಡಿಎ ಅತಿರೇಕದ ಜಿಎಸ್‌ಟಿ ರೂಪಿಸಿ ಜನರಿಗೆ ತೊಂದರೆಯುಂಟು ಮಾಡಿದೆ ಎಂದು ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿನ ಬಾಬು ಜಗಜೀವನರಾಮ್ ಅವರ ಪುತ್ಥಳಿಗೆ ಸೋಮವಾರ ಮಾಲಾರ್ಪಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಎಸ್‌ಟಿಯಿಂದಾಗಿ ಸಣ್ಣಸಣ್ಣ ಉದ್ಯಮಗಳು ಬಾಗಿಲು ಮುಚ್ಚಿವೆ. ಲಕ್ಷಾಂತರ ಯುವಕರು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಅದನ್ನು ಸರಿಪಡಿಸಿಕೊಳ್ಳುವ ನೆಪದಲ್ಲಿ ಕೇಂದ್ರ ಸರಕಾರ ಇದೀಗ ಜಿಎಸ್‌ಟಿ ಮಾರ್ಪಾಡು ಮಾಡಲು ಹೊರಟಿದೆ ಎಂದು ದೂರಿದರು.

ಪ್ರಸ್ತುತ ಮೀಸಲು ಬೇಡ ಎಂಬ ಕೂಗು ಸಹ ಎಲ್ಲೆಡೆಯೂ ಹೆಚ್ಚಾಗುತ್ತಿದೆ. ಮೀಸಲು ಬೇಡ ಎನ್ನುವವರು, ಜಾತಿಯತೆ ಬೇಡ ಎನ್ನಲಿ. ಜಾತಿಯತೆ ಪಾಲನೆ ಮಾಡಿ, ಮೀಸಲು ಬೇಡ ಅನ್ನೊದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಡಾ.ಬಿ.ಆರ್. ಅಂಬೇಡ್ಕರ್‌ರ ಆಶಯದಂತೆ ತುಳಿತಕ್ಕೊಳಗಾದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಂವಿಧಾನಿಕವಾಗಿ ಮೀಸಲು ನೀಡಲಾಗಿದೆ. ಈ ಬಗ್ಗೆ ಚಕಾರ ಎತ್ತುವುದು ಸರಿಯಲ್ಲ ಎಂದರು.

Leave a Reply

Your email address will not be published. Required fields are marked *

1 + 7 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

 

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

Back To Top