ಜಿಡ್ಡಿಗೆರೆ ಸೋಲಾರ್ ಘಟಕ ಪರಿಶೀಲನೆ ನಡೆಸಿದ ಸಂಸದ ದಿ.ಕೆ ಸುರೇಶ್

Posted In : ತುಮಕೂರು

ಕುಣಿಗಲ್: ಎಡಿಯೂರು ಹೋಬಳಿ ಜಿಡ್ಡಿಗೆರೆ ಗ್ರಾಮದಲ್ಲಿ ೬೦ ಕೋಟಿ ರು.ವೆಚ್ಚದಲ್ಲಿ ೩೮ ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಸೋಲಾರ್ ವಿದ್ಯುತ್ ಘಟಕವನ್ನು ಸಂಸದ ಡಿ.ಕೆ ಸುರೇಶ್ ಪರಿಶೀಲಿಸಿದರು.

ಶನಿವಾರ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಕಾಮಗಾರಿ ಪರಿಶೀಲಿಸಿದ ಸಂಸದರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಅಭಾವ ನೀಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಘಟಕಗಳನ್ನು ಪ್ರಾರಂಭಿಸಿ ಆ ಮೂಲಕ ವಿದ್ಯುತ್ ಅಭಾವ ನೀಗಿಸಲು ಕ್ರಮಕೈಗೊಂಡಿದ್ದರು.

ಈ ನಿಟ್ಟಿನಲ್ಲಿ ಮೊದಲನೇ ಹಂತದಲ್ಲಿ ಪಾವಗಡ ಸೇರಿದಂತೆ ರಾಜ್ಯದ ೬೦ ತಾಲೂಕಿನಲ್ಲಿ ಸೋಲಾರ್ ವಿದ್ಯುತ್ ಘಟಕ ಪ್ರಾರಂಭಿಸಲು ಉದ್ದೇಶಿಸಿದ್ದು, ಈ ದಿಸೆಯಲ್ಲಿ ೧೨೦ ಕೋಟಿ ರು. ವೆಚ್ಚದಲ್ಲಿ ಕುಣಿಗಲ್ ತಾಲೂಕಿನ ಜಿಡ್ಡಿಗೆರೆ ಹಾಗೂ ಚೌಡನಕುಪ್ಪೆ ಗ್ರಾಮದಲ್ಲಿ ಘಟಕಗಳನ್ನು ಪ್ರಾರಂಭಿಸಿದ್ದು ಈ ಘಟಕಗಳಿಂದ ೨೦ ಮ್ಯಾಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ರೈತರ ಹಗಲು ವಿದ್ಯುತ್ ಬೇಡಿಕೆಯ ಕೂಗನ್ನು ನೀಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

5 × three =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top