ವಿಶ್ವವಾಣಿ

ಜೂನ್‌ವರೆಗೆ ಗಡಿಯೊಳಗೆ 69 ಉಗ್ರರು ನುಸುಳಿದ್ದಾರೆ: ಹನ್ಸರಾಜ್

ದೆಹಲಿ: ಈ ವರ್ಷದ ಜೂನ್‌ವರೆಗೆ ಜಮ್ಮು ಮತ್ತು ಕಾಶ್ಮೀ ಗಡಿಯೊಳಗೆ 69 ಉಗ್ರರು ನುಸುಳಿದ್ದಾರೆ ಎಂದು ಸರಕಾರ ಲೋಕಸಭೆಗೆ ಮಂಗಳವಾರ ತಿಳಿಸಿದೆ.

ದೇಶದ ಗಡಿಭಾಗಕ್ಕೆ 133 ಉಗ್ರರ ನುಸುಳುವಿಕೆಯ ಪ್ರಯತ್ನಗಳು ನಡೆದಿವೆಯಾದರೂ 69 ಉಗ್ರರು ಮಾತ್ರ ಅಕ್ರಮವಾಗಿ ಗಡಿಯೊಳಗೆ ನುಸುಳಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ಹನ್ಸರಾಜ್ ಗಂಗಾರಾಮ್ ಅಹಿರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ವರ್ಷದ ಜೂನ್‌ವರೆಗೆ 14 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, 50 ಮಂದಿ ಉಗ್ರರು ಗಡಿಯಿಂದ ಮರಳಿದ್ದಾರೆ. 2017ರಲ್ಲಿ 123 ಮಂದಿ ಉಗ್ರರು ಅಕ್ರಮವಾಗಿ ಗಡಿ ಪ್ರವೇಶಿಸಿದ್ದಾರೆ. ಈ ವರ್ಷದ ಜುಲೈವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 308 ಹಿಂಸಾಚಾರ ಪ್ರಕರಣಗಳು ವರದಿಯಾಗಿದ್ದು, 90 ಎನ್‌ಕೌಂಟರ್‌ಗಳಲ್ಲಿ 113 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.