About Us Advertise with us Be a Reporter E-Paper

ಆಟೋಮೊಬೈಲ್

ಝೆರಾಕ್ಸ್ ನಿಂದ ಐರಿಡೆಸ್ಸೆ ಪ್ರೊಡಕ್ಷನ್ ಪ್ರೆಸ್ ಬಿಡುಗಡೆ

ಝೆರಾಕ್ಸ್ ನಿಂದ ಐರಿಡೆಸ್ಸೆ ಪ್ರೊಡಕ್ಷನ್ ಪ್ರೆಸ್ ಬಿಡುಗಡೆ

Posted In : ಗೆಜೆಟಿಯರ್

ಪ್ರಿಂಟ್‌ಎಕ್‌ಸ್ಪೋ 2018 ದಲ್ಲಿ ಝೆರಾಕ್ಸ್ ಕಂಪೆನಿ ತನ್ನ ಇತ್ತೀಚಿನ ಹೊಸ ಪ್ರಿಂಟ್ ತಂತ್ರಜ್ಞಾನಗಳು, ಅಡ್ವಾನ್ಸ್ಡ್ ವರ್ಕ್‌ ಫ್ರೋ ಪರಿಹಾರಗಳು ಮತ್ತು ಗ್ರಾಹಕರಿಗೆ ತಮ್ಮ ವ್ಯವಹಾರಗಳನ್ನು ವೃದ್ಧಿಸಿ ಕೊಳ್ಳುವ ಹೊಸ ಮಾರ್ಗಗಳನ್ನು ಮತ್ತು ಅವಕಾಶಗಳನ್ನು ಪ್ರದರ್ಶನ ಮಾಡುವ ಮೂಲಕ ನೆರವಾಗುತ್ತಿದೆ.

ಈ ಹಿನ್ನೆಲೆ, ಕಂಪನಿ ಕಾಪಿಯರ್, ಲೇಸರ್ ಪ್ರಿಂಟಿಂಗ್ ಮತ್ತು ಪ್ರಿಂಟ್-ಆನ್-ಡಿಮ್ಯಾಂಡ್ ಅನ್ನು ಆವಿಷ್ಕರಿಸಿದೆ. ವಿಶ್ವದ ವೇಗವಾದ ಪ್ರಿಂಟರ್, ನಾಲ್ಕು ಕಲರ್ ಪ್ರಿಂಟಿಂಗ್ ಒಳಗೊಂಡ ಆರು ಸ್ಟೇಷನ್ ಕಲರ್ ಪ್ರೆಸ್ ಅನ್ನು ಬಿಡುಗಡೆ ಮಾಡಿದೆ. ಝೆರಾಕ್ಸ್ ಐರಿಡೆಸ್ಸೆ ಪ್ರೊಡಕ್ಷನ್ ಪ್ರೆಸ್ ಡಿಜಿಟಲ್ ಪ್ರೆಸ್ ಎನಿಸಿದ್ದು, ಪ್ರಿಂಟ್ ಮೆಟಾಲಿಕ್ ಗೋಲ್ಡ್ ಅಥವಾ ಸಿಲ್ವರ್ ಡ್ರೆ` ಇಂಕ್, ಸಿಎಂವೈಕೆ ಮತ್ತು ಡ್ರೆ` ಇಂಕ್ ಅನ್ನು ಸಿಂಗಲ್ ಪಾಸ್‌ನಲ್ಲಿ ಪ್ರಿಂಟ್ ಮಾಡುತ್ತದೆ. ಈ ಮೂಲಕ ಡಿಜಿಟಲ್ ಮಾರುಕಟ್ಟೆಯಲ್ಲಿ ಡಿಜಿಟಲ್ ಪ್ರಿಂಟ್ ಉನ್ನತೀ ಕರಣ ಮಾಡುತ್ತಿದೆ. ಪ್ರಿಂಟ್‌ಎಕ್‌ಸ್ಪೋ-2018 ರಲ್ಲಿ ಝೆರಾಕ್ಸ್ ಹೊಸ ಐರಿಡೆಸ್ಸೆ ಪ್ರೆಸ್ ಅಲ್ಲದೇ ವರ್ಸಂಟ್ 3100, ವರ್ಸಂಟ್ 180, ಡಿ110, ಕಲರ್ ಸಿ70 ಮತ್ತು ಅಲ್ಟಾಲಿಂಕ್ ಸಿ8030 ಯಂತ್ರಗಳನ್ನು ಪ್ರದರ್ಶನ ಮಾಡುತ್ತಿದೆ. ಇದೇ ಎಕ್ಸ್ ಪೋದಲ್ಲಿ ಝೆರಾಕ್ಸ್ ಇತ್ತೀಚಿನ ವರ್ಸಂಟ್ 180 ಯ ಬಿಡುಗಡೆಯ ಘೋಷಣೆಯನ್ನೂ ಮಾಡಲಿದೆ.

ಝೆರಾಕ್ಸ್ ಐರಿಡೆಸ್ಸೆ ಡಿವೈಸ್
*ಝೆರಾಕ್ಸ್ ಐರಿಡೆಸ್ಸೆ ಪ್ರೊಡಕ್ಷನ್ ಪ್ರೆಸ್ ಒಂದು ಹೈ-ಎಂಡ್ ಪ್ರೊಡಕ್ಷನ್ ಕಲರ್ ಪ್ರೆಸ್ ಆಗಿದ್ದು, ಇದು ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಡಿಜಿಟಲ್ ಪ್ರಿಂಟ್ ತೆಗೆಯುವ ಸಾಮರ್ಥ್ಯ ಹೊಂದಿದೆ.
*ಇನ್‌ಲೈನ್ ಡ್ರೆ` ಇಂಕ್ ಸ್ಟೇಷನ್ಸ್ ಮೂಲಕ ಗ್ರಾಹಕರು ಅತ್ಯುತ್ತಮವಾದ ಕಲರ್, ಮೆಟಾಲಿಕ್ ಮತ್ತು ಮಿಕ್ಸ್ಡ್ ಮೆಟಾಲಿಕ್ ಪ್ರಿಂಟ್‌ ಗಳನ್ನು ತೆಗೆಯಬಹುದಾಗಿದೆ. ಬಂಗಾರ ಮತ್ತು ಬೆಳ್ಳಿ ಬಣ್ಣದ ಡ್ರೆ` ಇಂಕ್ ಮೆಟಾಲಿಕ್ ಇಂಕ್ ಅನ್ನು ಸಿಎಂವೈಕೆಗೆ ಬಳಸ ಬಹು ದಾಗಿದೆ.
*ಪ್ರೊಡಕ್ಷನ್-ಕಲರ್ ಝೆರಾಕ್ಸ್ ವರ್ಸಂಟ್ 3100 ಪ್ರೆಸ್ ಅತ್ಯುತ್ಕೃಷ್ಠವಾದ ಇಮೇಜ್ ಗುಣಮಟ್ಟ ನೀಡುತ್ತದೆ. ಅತ್ಯುತ್ತಮ ಉತ್ಪಾದ ಕತೆ ಮತ್ತು ಸಾಮರ್ಥ್ಯವನ್ನು ಹೊಂದಿದೆ.
*ಮಿಡ್-ಪ್ರೊಡಕ್ಷನ್-ಕಲರ್ ಝೆರಾಕ್ಸ್ ವರ್ಸಂಟ್ 180 ಪ್ರೆಸ್ ಪರ್ಫಾಮೆನ್ಸ್ ಪ್ಯಾಕ್‌ನೊಂದಿಗೆ ಅತ್ಯುತ್ತಮವಾದ ನೀಡುತ್ತದೆ.
*ಝೆರಾಕ್ಸ್ ಕಲರ್ ಸಿ70 ಒಂದು ಆರಂಭಿಕ ಪ್ರೊಡಕ್ಷನ್ ಪ್ರೆಸ್ ಆಗಿದ್ದು, ವೈವಿಧ್ಯತೆಯ ಮತ್ತು ವೃತ್ತಿಪರವಾದ ಇಮೇಜ್ ಗುಣ ಮಟ್ಟವನ್ನು ಹೊಂದಿದೆ.
*ಝೆರಾಕ್ಸ್ ಡಿ110 ಯಂತ್ರ ಅತ್ಯುತ್ತಮವಾದ ಗುಣಮಟ್ಟವನ್ನು ಹೊಂದಿದ್ದು, ಮೋನೋ ಕ್ರೋಮ್ ಪರಿಹಾರಗಳನ್ನು ನೀಡುತ್ತದೆ. ಶಿಕ್ಷಣ, ಆರೋಗ್ಯ ಕಲ್ಯಾಣ ಮತ್ತು ಪುಸ್ತಕಗಳನ್ನು ತಯಾರು ಮಾಡುವ ಉದ್ಯಮಗಳು, ವಿಡಿಪಿ ಮತ್ತು ಕಮರ್ಷಿಯಲ್ ಪ್ರಿಂಟಿಂಗ್ ಅಪ್ಲಿಕೇಶನ್‌ಗಳಿಗೆ ಸೂಕ್ತವಾದ ಯಂತ್ರ ಇದಾಗಿದೆ.
*ಝೆರಾಕ್ಸ್ ಅಲ್ಟಾಲಿಂಕ್ ಸರಣಿಯ ಯಂತ್ರಗಳು ಅತ್ಯುತ್ತಮವಾದ ಪ್ರಿಂಟರ್ ಸರಣಿಯ ಸಣ್ಣ ಮತ್ತು ಮಧ್ಯಮ ವರ್ಗದ ವ್ಯವಹಾರ ಸಂಸ್ಥೆಗಳು, ದೊಡ್ಡ ದೊಡ್ಡ ಸಂಸ್ಥೆಗಳ ಅಗತ್ಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಪೂರೈಸಲಿದೆ.

Related Articles

Leave a Reply

Your email address will not be published. Required fields are marked *

Language
Close