About Us Advertise with us Be a Reporter E-Paper

ದೇಶ

ಟ್ರಕ್-ಟೆಂಪೋ ಡಿಕ್ಕಿ: 13 ಅಮರನಾಥ ಯಾತ್ರಿಗಳಿಗೆ ಗಾಯ

ಉಧಂಪುರ್: ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಹಾಗೂ ಟ್ರಕ್ ನಡುವೆ ಡಿಕ್ಕಿ ಹೊಡೆದಿದ್ದು, 13 ಅಮರನಾಥ್ ಯಾತ್ರಿಗಳಿಗೆ ಗಾಯಗಳಾಗಿವೆ.

ಉಧಮ್‌ಪುರ್ ಜಿಲ್ಲೆಯ ಮಲ್ಲರ್ದ್ ಧರ್ಮಾ ಸೇತುವೆ ಬಳಿ  ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಮ್ಮುವಿನ ಸರಕಾರಿ ಮೆಡಿಕಲ್ ಕಾಲೇಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಉಧಂಪುರ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದೆ.

ಅಮರನಾಥ್ ಹೊತ್ತೊಯ್ಯುತ್ತಿದ್ದ ಟೆಂಪೋಗೆ ಎದುರಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಟ್ರಕ್‌ನ ಚಾಲಕ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close