lakshmi-electricals

ತಮಿಳರು ಒಪ್ಪಿದರೆ ಮೇಲುಕೋಟೆಯಲ್ಲಿ ಅಮ್ಮನ ಸಮಾಧಿ

Posted In : ತುಮಕೂರು, ರಾಜ್ಯ

ತುಮಕೂರು: ತಮಿಳುನಾಡು ಜನತೆ ಒಪ್ಪಿದರೆ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜಯಲಲಿತಾ ಅವರ ಸಮಾಧಿ ನಿರ್ಮಾಣ ಮಾಡಲಾಗವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮೇಲುಕೋಟೆಯಲ್ಲಿ ಜಯಲಲಿತಾ ಅವರ ಸಮಾಧಿ ನಿರ್ಮಿಸಬೇಕೆಂಬ ಸಂಸದ ಪುಟ್ಟರಾಜು ಅವರ ಹೇಳಿಕೆ ಸ್ವಾಗತಾರ್ಹ ಎಂದರು. ಜಯಲಲಿತಾ ಕನ್ನಡ ನೆಲದಲ್ಲಿ ಜನಿಸಿ ತಮಿಳುನಾಡಿನಲ್ಲಿ ಸಾಧನೆ ಮಾಡಿದ್ದಾರೆ. ವೀರಪ್ಪನ್ ಕಾರ್ಯಾಚರಣೆ, ಕಾವೇರಿ ವಿವಾದದಲ್ಲಿ ಅವರ ಜೊತೆ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದೆ. ಅವರ ವಾಕ್ಚಾತುರ್ಯ ಮೆಚ್ಚುವಂತಹದ್ದು ಎಂದು ಸಚಿವ ಜಯಚಂದ್ರ ನೆನೆದರು.

Leave a Reply

Your email address will not be published. Required fields are marked *

19 + 1 =

 
Back To Top