About Us Advertise with us Be a Reporter E-Paper

ದೇಶಪ್ರಚಲಿತರಾಜ್ಯ

ತಮಿಳುನಾಡಿನಲ್ಲಿ ಅಮ್ಮಾ, ಕರ್ನಾಟಕದಲ್ಲಿ ಇಂದಿರಾ, ಆಂಧ್ರದಲ್ಲಿನ್ನು ಅಣ್ಣಾ ಕ್ಯಾಂಟೀನ್!

Anna
Anna

ಹೈದರಾಬಾದ್​: ಮುಂಬರುವ ಲೋಕಸಭಾ ಹಾಗೂ ವಿಧಾನ ಸಭೆ ಚುನಾವಣೆಗೆ ಭರ್ಜರಿಯಾಗಿ ತುಆರಿ ನಡೆಸುತ್ತಿರುವ ಆಂದ್ರ ಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಕರ್ನಾಟಕದ ಇಂದಿರಾ ಕ್ಯಾಂಟೀನ್​ ಮಾದರಿಯಲ್ಲೇ ಕಡಿಮೆ ದರದಲ್ಲಿ ಆಹಾರ ನೀಡುವ ಅಣ್ಣಾ ಕ್ಯಾಂಟೀನ್​ ಯೋಜನೆಗೆ ಇಂದು ಚಾಲನೆ ನೀಡಿದ್ದಾರೆ.

ಅಣ್ಣಾ ಕ್ಯಾಂಟೀನ್‍‍ನಲ್ಲಿ ಐದು ರೂಪಾಯಿಗೆ ಬಳಗ್ಗಿನ ಉಪಹಾರ ಹಾಘೂ ಮಧ್ಯಾಹ್ನದ ಭೋಜನ ನೀಡಲಾಗುತ್ತದೆ. ಬೆಳಗ್ಗಿನ ಉಪಹಾರದಲ್ಲಿ ಇಡ್ಲಿ, ಪೂರಿ, ಉಪ್ಪಿಟ್ಟು, ಪೊಂಗಲ್​ ನೀಡಿದರೆ, ಮಧ್ಯಾಹ್ನನದ ಭೋಜನದಲ್ಲಿ ಅನ್ನ ಸಾಂಬಾರ್​, ದಾಲ್​, ಉಪ್ಪಿನಕಾಯಿ ಮತ್ತು ಮೊಸರು ನೀಡಲಾಗುತ್ತದೆ. ಮೊದಲ ಹಂತದಲ್ಲಿ 110 ಮುನ್ಸಿಪಾಲಿಟಿಗಳಲ್ಲಿ 203 ಕ್ಯಾಂಟೀನ್​ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಎರಡನೇ ಹಂತದಲ್ಲಿ 143 ಕ್ಯಾಂಟೀನ್​ಗಳನ್ನು 85 ಪ್ರದೇಶಗಳಲ್ಲಿ ತೆರಯಲು ಉದ್ದೇಶಿಸಲಾಗಿದ್ದು ಆಗಸ್ಟ್ ಹೊತ್ತಿಗೆ ಎಲ್ಲ ಕ್ಯಾಂಟೀನ್​ಗಳ ನಿರ್ಮಾಣ ಪೂರ್ಣವಾಗಲಿದೆ. ಇಂದು 60 ಕ್ಯಾಂಟೀನ್​ಗಳನ್ನು ಸಿಎಂ ನಾಯ್ಡು ಚಾಲನೆ ನೀಡಿದ್ದಾರೆ.

ಸಬ್ಸಿಡಿ ದರದಲ್ಲಿ ಆಹಾರ ಪೂರೈಸುವ ಜನಪ್ರಿಯ ಯೋಜನೆಯನ್ನು ಮೊದಲ ಬಾರಿಗೆ ತಮಇಳು ನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಮ್ಮಾ ಕ್ಯಾಂಟೀನ್ ಹೆಸರಿನಲ್ಲಿ ಜಾರಿಗೆ ತಂದಿದ್ದರು. ಬಳಿಕ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‍ ಹೆಸರಿನಲ್ಲಿ ಜಾರಿಗೆ ತಂದಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close