About Us Advertise with us Be a Reporter E-Paper

ಪ್ರಚಲಿತವಿದೇಶ

ಥಾಯ್ ಗುಹೆಯಲ್ಲಿ ಬಂಧಿಯಾಗಿದ್ದ ಎಲ್ಲರ ರಕ್ಷಣೆ

ಮೇ ಸಾಯ್, ಥಯ್ಲಾಂಡ್: ಹದಿನಾರು ದಿನಗಳ ಸತತ ಕಾರ್ಯಾಚರಣೆ ಬಳಿಕ ಥಾಯ್ ಗುಹೆಯಿಂದ 12 ಮಂದಿ ಬಾಲಕರು ಹಾಗೂ ಒಬ್ಬ ಕೋಚ್‍ ಅನ್ನು ರಕ್ಷಣೆ ಮಾಡಲಾಗಿದ್ದು, ಎಲ್ಲರೂ ಸುರಕ್ಷಿರಾಗಿದ್ದಾರೆ.

ಥಾಯ್ಲಾಂಡ್ ಸಮಯ ಬೆಳಿಗ್ಗೆ ಹೊತ್ತಿಗೆ ಕಾರ್ಯಾಚರಣೆ ಮುಕ್ತಾಯವಾಗಿದೆ.ಮೂಲಗಳ ಪ್ರಕಾರ ಒಟ್ಟು 19 ಮಂದಿ ಮುಳುಗು ತಜ್ಞರು ಗುಹೆಯೊಳಗೆ ಪ್ರವೇಶಿಸಿದ್ದು,ಪ್ರತಿಯೊಬ್ಬರಿಗೆ ಒಬ್ಬರು ಬೆಂಗಾವಲಾಗಿ ಹೋಗಿದ್ದಾರೆ. ಎಲ್ಲಾ ನಾವಂದುಕೊಂಡತೆ ನಡೆದಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೋಮವಾರ ನಾಲ್ಕು ಮಂದಿಯ್ನು ರಕ್ಷಣೆ ಮಾಡಲಾಗದ್ದು, ಇಂದು ಐದು ಮಂದಿಯನ್ನು ಥಾಮ್ ಲಂಗ್ ಗುಹೆಯಿಂದ ಹೊರಗೆ ತರಲಾಗಿದೆ. ಮಳೆಯಿಂದಾಗಿ ಕೆಲ ಕಾಲ ರಕ್ಷಣಾ ಕಾರ್ಯಗಳಿಗೆ ಅಡಚಣೆ ಉಂಟಾಗಿದ್ದು, ಎಲ್ಲಾ ಸವಾಲನ್ನು ಮೆಟ್ಟಿ ನಿಂತು ರಕ್ಷಣಾ ಪಡೆಗಳು ಜಗಮೆಚ್ಚುವಂಥ ಕಾರ್ಯಾಚರಣೆ ನಡೆಸಿದೆ ಎಂದು ರಕ್ಷಣಾ ಪಡೆಗಳ ಸಾಹಸಕ್ಕೆ ಅಧಿಕಾರಿಯೊಬ್ಬರು ಅಭಿನಂದನೆ ಸಲ್ಲಿಸಿದ್ದಾರೆ.

ಸದ್ಯ ರಕ್ಷಿಸಿದವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಲ್ಡ್ ಬೋರ್ಸ್ ಎಂಬ ಬಾಲಕರ ಫುಟ್ಬಾಲ್ ತಂಡದ ಸದಸ್ಯರು ಇದಾಗಿದ್ದು ಜೂನ್ 23 ರಂದು ಗುಹೆಯೊಳಗೆ ಪ್ರವೇಶಿಸಿದ್ದರು. ಮಳೆಯಿಂದಾಗಿ ದಾರಿ ಕಾಣದೇ ಅಲ್ಲೇ ಬಾಕಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Language
Close