ವಿಶ್ವವಾಣಿ

ದಟ್ಸನ್ ರೆಡಿ-ಗೋ 1.0ಲೀ ಎಎಂಟಿ

ಹೊಸ ಹೊಸ ತಂತ್ರಜ್ಞಾನಗಳು, ನ್ಯಾಯೋಚಿತ ದರಗಳು, ಮೈಲೇಜ್‌ನಲ್ಲಿ ಕಂಡುಬರುತ್ತಿರುವ ಸುಧಾರಣೆಗಳು, ಸುಗಮ  ಸೇರಿದಂತೆ ಮತ್ತಿತರೆ ವಿಚಾರಗಳಲ್ಲಿ ಆಮೂಲಾಗ್ರ ಬದಲಾವಣೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಆಟೋಮೋಟಿವ್ ಉದ್ಯಮ ಉಚ್ಛ್ರಾಯ ಸ್ಥಿತಿಗೆ ತಲುಪುತ್ತಿದೆ ಮತ್ತು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಲಕ್ಷುರಿ ಮತ್ತು ಪ್ರೀಮಿಯಂ ವರ್ಗದ ಕಾರುಗಳು ಸುಸಜ್ಜಿತ ಆಟೋ ಬಾಕ್‌ಸ್ ಸಹಿತ ಕಡಿಮೆ ದರದಲ್ಲಿ ಲಭ್ಯವಾಗುವಂತಹ ವಾತಾವರಣ ನಿರ್ಮಾಣವಾಗಿದೆ.

ದಟ್ಸನ್‌ನ ಪ್ರಗತಿಯ ತತ್ತ್ವ ಗ್ರಾಹಕರ ತೃಪ್ತಿಯನ್ನು ಸೂಚಿಸುತ್ತದೆ. ನಾವು ನಮ್ಮ ಗ್ರಾಹಕರಿಗೆ ಯಾವಾಗಲೂ ಅತ್ಯುತ್ತಮವಾದ ತಂತ್ರಜ್ಞಾನಗಳು ಮತ್ತು ಆವಿಷ್ಕಾರ ವೈಶಿಷ್ಟ್ಯತೆಗಳನ್ನು ನೀಡುವ ಉದ್ದೇಶವಿಟ್ಟುಕೊಂಡು ಅದರಂತೆ  ಇದು ಮೌಲ್ಯವರ್ಧನೆಯ ಪ್ರತೀಕವಾಗಿದೆ. ದಟ್ಸನ್ ರೆಡಿ-ಗೋ 1.01 ಲೀಟರ್ ಎಎಂಟಿಯು ಆರಾಮದಾಯಕ ಮತ್ತು ಅನುಕೂಲಕರ ಹಾಗೂ ಸ್ಟೈಲಿಶ್ ಅನ್ನು ಬಯಸುವ ಯುವ ಗ್ರಾಹಕರ ನೆಚ್ಚಿನ ಆಯ್ಕೆ ಎನಿಸಿದೆ. ಈ ನಿಟ್ಟಿನಲ್ಲಿ ದಟ್ಸನ್ ಇಂಡಿಯಾ ಗ್ರಾಹಕರಿಗೆ ಎರಡು ಪೆಡಲ್‌ನ ತಂತ್ರಜ್ಞಾನ, ಕ್ಲಚ್‌ಗೆ ಆ್ಯಕ್ಚುಯೇಟರ್‌ಗಳು ಮತ್ತು ಗಿಯರ್ ಆಪರೇಷನ್‌ಗಳಿಗೆ ಆವಿಷ್ಕಾರಕ ವೈಶಿಷ್ಟ್ಯತೆಗಳನ್ನು ನೀಡುತ್ತಿದೆ.

ಆ್ಯಕ್ಚುಯೇಟರ್‌ಗಳು ಎಲೆಕ್ಟ್ರೋ-ಮೆಕ್ಯಾನಿಕಲ್ ಅಥವಾ ಎಲೆಕ್ಟ್ರೋ-ಹೈಡ್ರಾಲಿಕ್ ಮಾದರಿಯದ್ದಾಗಿರುತ್ತವೆ. ಈ ಯಾಂತ್ರಿಕತೆಯು ಕ್ಲಚ್ ಅನ್ನು ಒಳಗೊಂಡಿರುತ್ತವೆ. ಆದರೆ, ಕ್ಲಚ್ ಪೆಡಲ್‌ಗೆ  ಕ್ಲಚ್ ಮತ್ತು ಗಿಯರ್ ಶಿಫ್‌ಟ್ಗಳು ಆ್ಯಕ್ಚುಯೇಟರ್‌ಗಳ ಮೂಲಕ ಆಪರೇಟ್ ಆಗುತ್ತವೆ. ಈ ಎಲ್ಲವೂ ಟ್ರಾನ್‌ಸ್ಮಿಷನ್ ಕಂಟ್ರೋಲ್ ಯೂನಿಟ್(ಟಿಸಿಯು) ಮೂಲಕ ನಿಯಂತ್ರಿಸಲ್ಪಡುತ್ತವೆ. ದಟ್ಸನ್ ಇದೀಗ ಹೊಸ ಡ್ಯುಯೆಲ್-ಡ್ರೆûವಿಂಗ್ ಮೋಡ್ ಮತ್ತು ರಶ್ ಅವರ್ ಮೋಡ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಆಟೋಮೇಟೆಡ್ ಮತ್ತು ಮ್ಯಾನ್ಯುವಲ್ ಮೋಡ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದು ಅತ್ಯಂತ ಸರಳ ವಿಧಾನವಾಗಿದೆ. ಚಾಲಕರು ಓವರ್‌ಟೇಕ್ ಮಾಡುವಾಗ ಅಥವಾ ಗುಡ್ಡ ಪ್ರದೇಶದಲ್ಲಿ ಸುಲಭವಾಗಿ ಚಾಲನೆ ಮಾಡಲು ಈ ಮೋಡ್‌ಗಳು  ಪ್ರಸ್ತುತ ದಟ್ಸನ್ ರೆಡಿ-ಗೋ ಮಾದರಿಯ ವಾಹನಗಳ ಪೈಕಿ ದಟ್ಸನ್ ರೆಡಿ-ಗೋ 1 ಲೀಟರ್ ಎಎಂಟಿ ಸರಿಸುಮಾರು ಶೇ.25 ರಷ್ಟು ಮಾರಾಟವಾಗುತ್ತಿವೆ. ಈ ಶ್ರೇಣಿಯ ವಾಹನಗಳ ಪೈಕಿ ಎಎಂಟಿ ಮಾದರಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ವಿಶೇಷವಾಗಿ ದಟ್ಸನ್ ರೆಡಿ-ಗೋ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಏಕೆಂದರೆ, ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ನಗರ ಪ್ರದೇಶದ ಸಂಚಾರ ದಟ್ಟಣೆಯಲ್ಲಿ ನಿಲ್ಲಿಸುವುದು ಮತ್ತು ಚಲಾಯಿಸಲು ಅನುಕೂಲವಾಗುವ ರೀತಿಯ ಚಾಲನಾ ತಂತ್ರಜ್ಞಾನವನ್ನು ಈ ದಟ್ಸನ್ ರೆಡಿ-ಗೋ

ಭಾರತದಲ್ಲಿ ಎಎಂಟಿ ವಾಹನಗಳಿಗೆ ಬಹು ಬೇಡಿಕೆ ಬರಲು ಪ್ರಮುಖವಾಗಿ ಎರಡು ಕಾರಣಗಳಿವೆ:- ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿರಂತರವಾಗಿ ಗಿಯರ್‌ಗಳನ್ನು ಬದಲಾವಣೆ ಮಾಡಬೇಕಿರುವುದು. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಗ್ರಾಹಕರು ತಾವು ನೀಡುವ ಹಣಕ್ಕೆ ಮೌಲ್ಯವನ್ನು ಮತ್ತು ಆರಾಮದಾಯಕತೆ ಅಥವಾ ಅನುಕೂಲವನ್ನು ಬಯಸುತ್ತಿರುವುದರಿಂದ ಈ ಎಎಂಟಿ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎಎಂಟಿ ಗಿಯರ್ ರೇಶಿಯೋದ ಕಾರುಗಳು ಚಾಲನೆಯನ್ನು ಆರಾಮವಾಗುವಂತೆ ಮಾಡುವುದಲ್ಲದೇ, ಚಾಲಕರಿಗೆ ಆಗುವ ಆಯಾಸವನ್ನು  ಮಾಡಲಿವೆ. ವಿಶೇಷವಾಗಿ ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ ಸಂದರ್ಭದಲ್ಲಿ ನಿಧಾನಗತಿಯಲ್ಲಿ ಸಂಚರಿಸಬೇಕಾದಾಗ ಆಗುವ ಆಯಾಸವನ್ನು ಕಡಿಮೆ ಮಾಡಲಿವೆ. ಅದೇರೀತಿ, ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗಿಯರ್‌ಬಾಕ್‌ಸ್ ನಡುವಿನ ಬೆಲೆ ವ್ಯತ್ಯಾಸ ಕಡಿಮೆ ಇರುವುದರಿಂದ ಖರೀದಿ ನಿರ್ಧಾರಗಳೂ ಬದಲಾಗುತ್ತಿವೆ. ಇದಲ್ಲದೇ, ತಂತ್ರಜ್ಞಾನದಲ್ಲಿನ ಪರಿಪಕ್ವತೆ ಪರಿಣಾಮ ವಿವಿಧ ಮಾದರಿಯ ಕಾರುಗಳ ಖರೀದಿಯಲ್ಲಿ ಆಮೂಲಾಗ್ರ ರೂಪಾಂತರವಾಗುತ್ತಿದೆ.