lakshmi-electricals

ದರೋಡೆಗೆ ಯತ್ನ: ಸಾರ್ವಜನಿಕರಿಂದ ಗೂಸಾ

Posted In : ರಾಜ್ಯ, ಹಾಸನ

ಹಾಸನ : ನಗರದ ವಿದ್ಯುತ್‌ನಗರ ಬಡಾವಣೆಯಲ್ಲಿ ಬಾಡಿಗೆಗೆ ಮನೆ ಹುಡುಕುವವರ ಸೋಗಿನಲ್ಲಿ ಬಂದ ಯುವಕರ ಗುಂಪೊಂದು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದೆ. ಕೃತ್ಯಕ್ಕೆ ಯತ್ನಿಸಿದ ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದು, ಒಬ್ಬನನ್ನು ಸೆರೆ ಹಿಡಿದ ನಿವಾಸಿಗರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಡಾವಣೆಯ ರಶ್ಮೀ ಎಂಬಾಕೆ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ್ದ ದರೋಡೆಕೋರರು ಮನೆ ಬಾಡಿಗೆಗೆ ಬೇಕು ಎಂದು ವಿಚಾರಿಸುವ ನೆಪದಲ್ಲಿ ಆಕೆಯನ್ನು ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಇಬ್ಬರು ಅಚಾನಕ್ಕಾಗಿ ಆಕೆಯ ಬಾಯಿಯನ್ನು ಮುಚ್ಚಿ ಮನೆಯೊಳಗೆ ಎಳೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಅದೃಷ್ಟವಷಾತ್ ಇವರಿಂದ ತಪ್ಪಿಸಿಕೊಂಡ ಆಕೆ ಜೋರಾಗಿ ಕಿರುಚಾಡಿದ್ದರಿಂದ ಸಮೀಪದಲ್ಲೇ ಇದ್ದ ಸಾರ್ವಜನಿಕರು ತಕ್ಷಣ ಸ್ಥಳಕ್ಕೆ ಧಾವಿಸಿ ಈ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

10 − 5 =

 
Back To Top