Sri Ganesh Tel

ದೆಹಲಿ ಧೂಮಕ್ಕೆ ಕೊಲ್ಲಿಯ ಮಾರುತ ಕಾರಣ!

Posted In : ದೇಶ

ದೆಹಲಿ: ರಾಜಧಾನಿ ದೆಹಲಿಯನ್ನು ಆವರಿಸಿ ಮಾಲಿನ್ಯದ ಹೊದಿಕೆಗೆ ಕಾರಣವಾಗಿದ್ದ ಧೂಮದಲ್ಲಿ ಶೇ 40ರಷ್ಟು ದೂರದ ಕೊಲ್ಲಿ ಯಿಂದ ಬಂದಿತ್ತು ಎಂದು ವರದಿಯಿಂದ ತಿಳಿದುಬಂದಿದೆ.

ಇನ್ನು ಶೇ25 ರಷ್ಟು ಧೂಮ ನೆರೆಯ ಹರಿಯಾಣಾ ಹಾಗೂ ಪಂಜಾಬ್‌ನಲ್ಲಿ ಕಳೆ ಸುಟ್ಟ ಪರಿಣಾಮದಿಂದ ಬಂದರೆ ಇನ್ನುಳಿದ ಶೇ 35ರಷ್ಟು ಧೂಮಕ್ಕೆ ದೆಹಲಿಯಲ್ಲಿನ ಮಾಲಿನ್ಯವೇ ಕಾರಣ ಎಂದು ವಾಯುವಿನ ಗುಣಮಟ್ಟದ ಸಂಶೋಧನೆ ನಡೆಸುವ ಸಫರ್‌ ಸಂಸ್ಥೆ ತಿಳಿಸಿದೆ. ನವೆಂಬರ್‌ 7ರಿಂದ ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶವನ್ನು ಉಸಿರುಗಟ್ಟಿಸಿದ ಮಾಲಿನ್ಯ ಪೂರಿತ ಧೂಮ ಸಾಕಷ್ಟು ಆತಂಕ ಸೃಷ್ಟಿಸಿತ್ತು.

ಕೊಲ್ಲಿಯಲ್ಲಿ ಬೀಸಿದ ಮಾರುತಗಳು ತಮ್ಮೊಟ್ಟಿಗೆ ಧೂಳನ್ನು ಹೊತ್ತು ಗಂಟೆಗೆ 15-20 ಕಿಮೀ ವೇಗದಲ್ಲಿ ಬೀಸುವ ಮೂಲಕ ಉತ್ತರ ಭಾರತವನ್ನು ಪ್ರವೇಶಿಸಿದೆ. ಜೊತೆಯಲ್ಲಿ ಪಂಜಾಬ್‌ ಹಾಗು ಹರಿಯಾಣಾದಲ್ಲಿ ಕಳೆ ಸುಟ್ಟ ಹೊಗೆಯೂ ಸೇರಿಕೊಂಡಿತ್ತು. ಅಲ್ಲದೇ ಉತ್ತರ ಭಾರತದಲ್ಲಿ ಇದೇ ಸಂದರ್ಭ ಬೀಸಿದ ಚಂಡಮಾರುತ ವಿರೋಧಿ ಹವೆಯಿಂದಾಗಿ ಮಾಲಿನ್ಯಕಾರಕಗಳೆಲ್ಲಾ ನೆಲಕ್ಕೆ ಇಳಿ ದವು.

ನವೆಂಬರ್‌ 6ರಂದು ಆರಂಭಗೊಂಡ ಈ ಮಾರುತ ನವೆಂಬರ್‌ 10ರ ವರೆಗೂ ಮುಂದುವರೆದಿದೆ. ನವೆಂಬರ್‌ 7ರ ಸಂಜೆ 5ಗಂಟೆ ವೇಳೆಗೆ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ನವೆಂಬರ್‌ 7ರಂದು ಪಿಎಂ 2.5 ಮಾಲಿನ್ಯಕಾರಕದ ದಟ್ಟಣೆ ಪ್ರತಿ ಘನಮೀಟರ್‌ಗೆ 537 ಮೈಕ್ರೋ ಗ್ರಾಂಗೆ ಏರಿಕೆ ಕಂಡು ಬಂದು ಆರೋಗ್ಯದ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾರನೇ ದಿನ ಇದೇ ಮಟ್ಟ 640ಮೈಕ್ರೋ ಗ್ರಾಂ/ ಘನ ಮೀಟರ್‌ಗೆ ಏರಿಕೆ ಕಂಡಿತ್ತು. ಒಂದು ವೇಳೆ ಬಾಹ್ಯ ಪ್ರಭಾವವಿರದಿದ್ದರೆ ಮಾಲಿನ್ಯದ ಮಟ್ಟ ಪ್ರತಿ ಘನ ಮೀಟರ್‌ಗೆ 200 ಮೈಕ್ರೋ ಗ್ರಾಂನಷ್ಟಿತ್ತು.

ನವೆಂಬರ್‌ 10ರ ವೇಳಗೆ ಮಾರುತದ ವೇಗ ತಗ್ಗಿದ ಕಾರಣ ಪರಿಸ್ಥಿತಿ ತಿಳಿಯಾಯಿತು ಎಂದು ಸಂಸ್ಥೆಯ ವರದಿಯಿಂದ ತಿಳಿದು ಬಂದಿದೆ.

ಅಕ್ಟೋಬರ್‌ 29ರಂದು ಸೌದಿ ಅರೇಬಿಯಾ, ಇರಾಕ್‌ ಹಾಗೂ ನೆರೆ ದೇಶಗಳ ಮೇಲೆ ದಾಳಿ ನಡೆಸಿದ ಮಾರುತ ತನ್ನೊಂದಿಗೆ ಬೃಹತ್‌ ಪ್ರಮಾಣದಲ್ಲಿ ಮರಳು ಹಾಗೂ ಧೂಳಿನ ಮೋಡವನ್ನು ತನ್ನೊಂದಿಗೆ ಹೊತ್ತೊಯ್ದಿದ್ದು ನಾಸಾದ ಉಪಗ್ರಹಗಳ ಕಣ್ಣಿಗೆ ಬಿದ್ದಿತ್ತು.

ನವೆಂಬರ್‌ 11ರ ವೇಳೆಗೆ ಪರಿಸ್ಥಿತಿ ತಿಳಿಯಾಯಿತಾದರೂ ಇನ್ನೂ ಎರಡು ದಿನಗಳ ಮಟ್ಟಿಗೆ ಮಾಲಿನ್ಯದ ವಿಷಮ ಪ್ರಭಾವ ಪೂರ್ಣ ತಗ್ಗಿರಲಿಲ್ಲ.

 

Leave a Reply

Your email address will not be published. Required fields are marked *

four × 5 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top