ನಾಗುಂಡಿ ಹೊಳೆಗೆ ಈಜಲು ಹೋದ ವಿದ್ಯಾರ್ಥಿ ಸಾವು

Posted In : ಉಡುಪಿ, ರಾಜ್ಯ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ  ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಎರುಗುಂಡಿ ಜಲಪಾತಕ್ಕೆ ಈಜಲು ಇಳಿದ ವಿದ್ಯಾರ್ಥಿಯೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.  

ಬಜ್ಪೆ-ಕೃಷ್ಣಾಪುರದ ನಿವಾಸಿ ಮುಸ್ತಾಫಾ ಎಂಬವರ ಪುತ್ರ, ಗೈಡೆನ್ಸ್ ಕಾಲೇಜಿನ ಪಿಯುಸಿ  ಕಾಮರ್ಸ್ ವಿದ್ಯಾರ್ಥಿ ಅಫ್ರಾಜ್(17) ಸಾವನ್ನಪ್ಪಿದ ದುರ್ದೈವಿ. ಈತ ಬಜ್ಪೆಯಲ್ಲಿ ಭಾನುವಾರ  ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ  ತನ್ನ ನಾಲ್ವರು ಸ್ನೇಹಿತರಾದ ಅಸ್ಸಾರ್, ಮಹಮ್ಮದ್, ರಮೀಝ್ ಹಾಗೂ ಮತ್ತೊರ್ವನ ಜತೆಗೂಡಿ 2 ದ್ವಿಚಕ್ರ ವಾಹನದಲ್ಲಿ ನಾಗುಂಡಿ ಹೊಳೆಯಲ್ಲಿ ಈಜಾಡಲು ಬಂದಿದ್ದ.

ಹೊಳೆಯಲ್ಲಿರುವ ಕಿರು ಅಣೆಕಟ್ಟಿನ ಬಳಿ ಸ್ವಲ್ಪ ಈಜಾಡಿ ನಂತರ ಎರುಗುಂಡಿ ಜಲಪಾತದ  ಆಳದಲ್ಲಿ ಎಷ್ಟು ನೀರು ಎಂದು ಪರೀಕ್ಷಿಸಲು ಈತನೊಬ್ಬನೇ ಇಳಿದಿದ್ದ. ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ತನ್ನ ಎರಡೂ ಕೈಗಳನ್ನು ಮೇಲೆತ್ತಿದ್ದ ಆಗ ಸ್ನೇಹಿತರು ಈತ ತಮಾಷೆ ಮಾಡುತ್ತಿರುವುದೆಂದು ಭಾವಿಸಿದ್ದರು. ನಂತರ ಪುನ: ಕೈಗಳನ್ನು ಮೇಲೆತ್ತಿದಾಗ ಅಪಾಯವನ್ನು ಅರಿತ ಸ್ನೇಹಿತರು ತಮ್ಮಲ್ಲಿದ್ದ ಬಟ್ಟೆಯನ್ನು ಕೆಳಗೆ ಇಳಿಸಿ ರಕ್ಷಿಸಲು ಪ್ರಯತ್ನಿಸಿದರು. ಆಗ ಬಟ್ಟೆಯನ್ನು ಒಂದು ಕೈಯಲ್ಲಿ ಹಿಡಿದಾಗ,  ಸ್ನೇಹಿತರ ಕೈಯಿಂದ ಬಟ್ಟೆ ತಪ್ಪಿ ಕೆಳಗೆ ಬಿದ್ದದರಿಂದ ಅಫ್ರಾಜ್ ನೀರಿನ ಆಳಕ್ಕೆ ಹೋಗಿ ಸಾವನ್ನಪ್ಪಿದ್ದಾನೆ. 

ಮೂಡುಬಿದಿರೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಕಿಶೋರ್ ಕುಮಾರ್ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಶವವನ್ನು ನೀರಿನಿಂದ ಮೇಲೆತ್ತಿದ್ದಾರೆ. ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.    

Leave a Reply

Your email address will not be published. Required fields are marked *

one × 5 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top