About Us Advertise with us Be a Reporter E-Paper

ರಾಜ್ಯ

ನಾನು ಮಹಾಭಾರತದ ಕರ್ಣ: ಕುಮಾರಸ್ವಾಮಿ

ಬೆಂಗಳೂರು: ತಮ್ಮನ್ನು ತಾವು ಮಹಾಭಾರತದ ಕರ್ಣನಿಗೆ ಹೋಲಿಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, “ನಾನು ಮಹಾಭಾರತದ ಕರ್ಣನಂತೆ ಸಾಂದರ್ಭಿಕ ಶಿಶು. ನಾನು ಮತ್ತು ಕರ್ಣ ಇಬ್ಬರೂ ಒಂದೇ” ಎಂದು ಹೇಳಿದ್ದಾರೆ.

ಮೈತ್ರಿ ಸರಕಾರದ ಬಜೆಟ್ ಮಂಡನೆಯಾದ ಎರಡು ದಿನಗಳ ನಂತರ ಸದನದಲ್ಲಿ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ವಿರೋಧ ಪಕ್ಷದ ನಾಯಕರು ಈ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಆದ ನನಗೆ ಅಪ್ಪ-ಅಮ್ಮ ಇಲ್ಲವೆಂದು ಹೀಯಾಳಿಸುತ್ತಿದ್ದಾರೆ. ಆದರೆ ನಂಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅಪ್ಪ, ಅಮ್ಮನ ಸ್ಥಾನದಲ್ಲಿದ್ದಾರೆ. ದೇವರು ಕೊಟ್ಟ ಆಶೀರ್ವಾದ, ಕಾಂಗ್ರೆಸ್ ಶಾಸಕರ ಸಹಕಾರದಿಂದ ಮುಖ್ಯಮಂತ್ರಿ ಆಗಿದ್ದೇನೆ. ನಾನು ಮಹಾಭಾರತದ ಕರ್ಣನಂತೆ ಸಾಂದರ್ಭಿಕ ಶಿಶುವೇ ಹೊರತು ಅನಾಥ ಶಿಶು ಅಲ್ಲ” ಎಂದಿದ್ದಾರೆ.

“ವಿಪಕ್ಷದವರು ಪದೇ ಪದೇ ಸಮ್ಮಿಶ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಆದರೆ ಇದು 37 ಜನ ಶಾಸಕರಿರುವ ಸರಕಾರ ಅಲ್ಲ. 120 ಶಾಸಕರಿರುವ ಸರಕಾರ. 12 ವರ್ಷಗಳ ಹಿಂದೆಯೂ ನಂಗೆ 38 ಶಾಸಕರೇ ಇದ್ದರು. ಆಗ ಬಿಜೆಪಿಯ 84 ಶಾಸಕರು ಬೆಂಬಲ ಕೊಟ್ಟಾಗ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲವೇ? ಈಗ ಕಾಂಗ್ರೆಸ್ ಪಕ್ಷ ಬೆಂಬಲ ಕೊಟ್ಟರೆ ಅಪವಿತ್ರ ಸರಕಾರವೇ? ಒಂದು ವೇಳೆ ಇದನ್ನು ಅಪವಿತ್ರ ಸರಕಾರ ಎನ್ನುವುದಾದರೆ, ಅಂದು ಬಿಜೆಪಿಯವರು ನಮಗೆ ಬೆಂಬಲ ಕೊಟ್ಟಿದ್ದೇಕೆ?” ಎಂದುಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Language
Close