About Us Advertise with us Be a Reporter E-Paper

ರಾಜ್ಯ

ನಾನು ಸರಕಾರದ ವಿರೋಧಿ ಎನ್ನುವುದು ಸುಳ್ಳು: ಸಿದ್ದು ಸ್ಪಷ್ಟನೆ

ಬೆಂಗಳೂರು: ನಾನು ಸರಕಾರದ ವಿರೋಧಿ ಎನ್ನುವುದು ಸುಳ್ಳು. ಲೋಕಾಭಿರಾಮ ವಾಗಿ ಮಾತಾಡಿದ್ದೇನೆ ಅಷ್ಟೇ. ನನಗೂ ಆ ಹೇಳಿಕೆಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಚಿಕಿತ್ಸೆ ಬಳಿಕ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಮಾತನಾಡಿ, ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ನನಗೂ ಶಾಂತಿವನದಲ್ಲಿನ ವಿಡಿಯೋ ಬೈಟ್ ಗೂ ಸಂಬಂಧವಿಲ್ಲ. ನನ್ನ ಮಾತನ್ನು ರೆಕಾರ್ಡ್ ಮಾಡಿ, ಮರು ಚಿತ್ರಿಸ ಲಾಗಿದೆ. ಯಾರೋ ಕಿಡಿಗೇಡಿಗಳು ಮಾಡಿದ್ದಾರೆ. ಇದು ಅನೈತಿಕವಲ್ಲವೇ? ನಾನು ಯಾವ ದೃಷ್ಟಿಯಿಂದ ಮಾತನಾಡಿದ್ದೇನೆ ಎನ್ನುವುದು ತಿಳಿದಿದೆಯೇ? ಎಂದು ಪ್ರಶ್ನಿಸಿದರು.

ಕೋಮುವಾದಿ ಪಕ್ಷವನ್ನು ದೂರವಿಡಲು ಸಮ್ಮಿಶ್ರ ಸರಕಾರ ರಚಿಸಿದ್ದೇವೆ. ಐದು ವರ್ಷಗಳನ್ನು ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Language
Close