lakshmi-electricals

ನಾಪತ್ತೆಯಾಗಿದ್ದ ಉದ್ಯಮಿ ಶವವಾಗಿ ಪತ್ತೆ

Posted In : ದಕ್ಷಿಣ ಕನ್ನಡ, ರಾಜ್ಯ

ಮಂಗಳೂರು: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಿನ್ನಿಗೋಳಿ ಉದ್ಯಮಿ ಶವ ಮೂಡುಬಿದಿರೆಯ ನಿಡ್ಡೋಡಿ ಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿದೆ.
ಕಿನ್ನಿಗೋಳಿಯ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್‌ ಶೆಟ್ಟಿ (29) ಮೃತ ಉದ್ಯಮಿ ಡಿ.28ರಂದು ನಾಪತ್ತೆಯಾಗಿದ್ದರು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾರಿಗೆ ಉದ್ಯಮದಲ್ಲಿ ಪಾಲುದಾರರಾಗಿದ್ದ ಉಮೇಶ್ ಶೆಟ್ಟಿ, ವ್ಯವಹಾರ ನಿಮಿತ್ತ ಪಣಂಬೂರಿಗೆ ಹೋಗಿ ಬರುತ್ತಿದ್ದರು. ಡಿ.28ರಂದು ಮನೆಗೆ ಬಾರದೆ ಇದ್ದುದರಿಂದ ಕುಟುಂಬಸ್ಥರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಗಲ್ಫ್‌ ರಾಷ್ಟ್ರದಿಂದ ಕ್ರೈಸ್ತ್‌ ಕುಟುಂಬ ನಿಡ್ಡೋಡಿಯಲ್ಲಿ ಜಾಗ ಖರೀದಿಸಿದ್ದು, ಕ್ರಿಸ್ಮಸ್ ರಜೆಗಾಗಿ ಊರಿಗೆ ಬಂದಿದ್ದರು. ಡಿ.30 ರಂದು ಜಾಗ ವೀಕ್ಷಣೆಗೆಂದು ಬಂದಿದ್ದ ಉಮೇಶ್ ಶೆಟ್ಟಿ ಅವರ ಮತದಾರರ ಗುರುತು ಚೀಟಿ ಹಾಗೂ ಪರ್ಸ್‌ ಅಲ್ಲೇ ಬಿದ್ದಿತ್ತು. ನಿಡ್ಡೋಡಿ ಪರಿಸರದಲ್ಲಿ ಪರಿಶೀಲನೆ ಮಾಡುವಾಗ ನಿಡ್ಡೋಡಿ ದಡ್ಡು ಚರ್ಚ್‌ ಬಳಿಯ ಮುಖ್ಯ ರಸ್ತೆಯಿಂದ ಒಂದು ಕಿಲೋ ಮೀಟರ್ ದೂರದ ಗುಡ್ಡ ಪ್ರದೇಶದಲ್ಲಿ ಉಮೇಶ್‌ ಶವ ಪತ್ತೆಯಾಗಿದೆ.

Leave a Reply

Your email address will not be published. Required fields are marked *

twenty − 9 =

 
Back To Top