
ದೆಹಲಿ: ಪಂಜಾಬ್ನಲ್ಲಿ ರೈತರನ್ನು ಉದ್ದೇಶಿಸಿ ಬೃಹತ್ ರ್ಯಾಲಿ ನಡೆಸಿ ಮಾತಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸ್ವ ಸಹಾಯ ಗುಂಪುಗಳ ಸದಸ್ಯರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಲಿದ್ದಾರೆ.
“ದೇಶಾದ್ಯಂತ ಇರುವ ಮಹಿಳಾ ಸ್ವಸಹಾಯ ಸಂಘಟನೆಗಳ ಸದಸ್ಯೆಯರನ್ನುದ್ದೇಶಿಸಿ ಮಾತನಾಡಲಿದ್ದೇನೆ. ಅವರ ಅನುಭವಗಳನ್ನು ಕೇಳುವುದು ಅದ್ಭುತ ಅನುಭವ, ಅದರಲ್ಲೂ ತಳಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿರುವವರನ್ನು ಮಾತನಾಡಿಸುವುದು ಇನ್ನೂ ಚೆನ್ನ” ಎಂದು ಬುಧವಾರದಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ದೀನ್ದಯಾಳ್ ಅಂತ್ಯಯೋದಯ ಯೋಜನೆ-ರಾಷ್ಟ್ರೀಯ ಜೀವನಾಧಾರ ಮಿಶನ್, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಹಾಗು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ ಅಡಿಯಲ್ಲಿ ಈ ಸಂಘಟನೆಗಳು ಬರಲಿವೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಹಾಗು ಇವುಗಳ ಮೂಲಕ ಸ್ತ್ರೀಯರ ಜೀವನಮಟ್ಟದಲ್ಲಿ ಆಗುತ್ತಿರುವ ಸುಧಾರಣೆಗಳ ಕುರಿತಂತೆ ನೇರವಾದ ಫೀಡ್ಬ್ಯಾಕ್ ಪಡೆದುಕೊಳ್ಳಲು ಪ್ರಧಾನಿಗೆ ಅನುವಾಗಲಿದೆ.
ಸಂಭಾಷಣೆಯನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಲಗವುದು. ರೈತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿರುವ ಕಾಂಗ್ರೆಸ್ 70 ವರ್ಷಗಳಿಂದ ಅವರಿಗೆ ಮೋಸ ಮಾಡುತ್ತಾ ಬಂದಿದೆ ಎಂದು ಪ್ರಧಾನಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.