ಪತ್ರಕರ್ತರ ಯಶಸ್ವಿ ಯಕ್ಷಗಾನ

Posted In : ದಕ್ಷಿಣ ಕನ್ನಡ, ರಾಜ್ಯ

yaksha10

ಮಂಗಳೂರು: ಮಂಗಳಾ ಸ್ಟೇಡಿಯಂ ಬಳಿಯ ಲಾಲ್‌ಬಾಗ್ ಸ್ಕೌಟ್ಸ್ ಭವನದಲ್ಲಿ ಭಾನುವಾರ ನಡೆದ ಪ್ರೆಸ್ ಕ್ಲಬ್ ದಿನಾಚರಣೆ ವೇಳೆ ಪತ್ರಕರ್ತರು ಯಕ್ಷಗನ ಪ್ರದರ್ಶಿಸಿ ಎಲ್ಲರನ್ನು ರಂಜಿಸಿದರು. ಧೀರಜ್ ಕೊಟ್ಟಾರಿ ನಿರ್ದೇಶನದ ರವಿ ಅಲೆವೂರಾಯ ಮಾರ್ಗದರ್ಶನದ ‘ ಮಹಿಷಮರ್ದಿನಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಪ್ರದರ್ಶನದಲ್ಲಿ ಮಹಿಷಾಸುರನಾಗಿ ವಿಶ್ವವಾಣಿಯ ಕಿಶೋರ್ ಭಟ್ ಕೊಮ್ಮೆ, ಶ್ರೀದೇವಿ ಪಾತ್ರದಲ್ಲಿ ವಿಶ್ವವಾಣಿ ವಿಶೇಷ ವರದಿಗಾರ ಜಿತೇಂದ್ರ ಅಭಿನಯಿಸಿದರು. ಸುಪಾರ್ಶ್ವಕ ಪಾತ್ರದಲ್ಲಿ ಹೊಸದಿಗಂತ ಹಿರಿಯ ವರದಿಗಾರ ಸುರೇಶ್ ಡಿ. ಪಳ್ಳಿ, ಒಯ್ಯಾರದ ಮಾಲಿನಿಯಾಗಿ ಇಂಡಿಯನ್ ಎಕ್ಸ್ ಪ್ರೆಸ್ ಹಿರಿಯ ವರದಿಗಾರ ಗಣೇಶ್ ಮಾವಂಜಿ ಅಭಿನಯಿಸಿದರೆ, ಹಾಸ್ಯಗಾರ ದೂತನಾಗಿ ವಿಶ್ವವಾಣಿ ವರದಿಗಾರ ಅಜಿತ ಆರಾಡಿ ಹಾಗೂ ದೇವೇಂದ್ರನ ಪಾತ್ರದಲ್ಲಿ ದಿಗ್ವಿಜಯ ಸುದ್ದಿವಾಹಿನಿಯ ದಿವಾಕರ ಪದ್ಮುಂಜ, ವರುಣನ ಪಾತ್ರದಲ್ಲಿ ಉದಯವಾಣಿಯ ಭರತ್‌ರಾಜ್ ಕಲ್ಲಡ್ಕ, ವಾಯು ಪಾತ್ರದಲ್ಲಿ ಐಸಿರಿ ವಾಹಿನಿಯ ಸಚಿನ್ ಶೆಟ್ಟಿ ಅಭಿನಯಿಸಿದರು. ತಡ್ಪೆ ಮುಂಡಾಸಿನ ಶಂಖಾಸುರನಾಗಿ ವಿಜಯವಾಣಿ ಹಿರಿಯ ವರದಿಗಾರ ಹರೀಶ್ ಮೋಟುಕಾನ, ದುರ್ಗಾಸುರನಾಗಿ ದಿಗ್ವಿಜಯ ವಾಹಿನಿಯ ವರದಿಗಾರ ಕಿಶನ್ ಶೆಟ್ಟಿ ಹಾಗೂ ಬಿಡಲಾಸುರನಾಗಿ ದ ಹಿಂದು ವರದಿಗಾರ ರಾಘವ ಮತ್ತಿಹಳ್ಳಿ ಅಭಿನಯಿಸಿದರು. ಅಲ್ಲದೇ, ವಿಷ್ಣು ಮತ್ತು ಬ್ರಹ್ಮನ ಅಪರೂಪದ ಜೋಡಿಯಾಗಿ ಉದಯವಾಣಿ ವರದಿಗಾರ್ತಿಯರಾದ ಪ್ರಜ್ಞಾ ಮತ್ತು ಧನ್ಯಾ , ಈಶ್ವರನಾಗಿ ಕೋಸ್ಟಲ್ ಡೈಜೆಸ್ಟ್‌ನ ಸುರೇಶ್ ವಾಮಂಜೂರು ಅಭಿನಯಿಸಿದರು.

Leave a Reply

Your email address will not be published. Required fields are marked *

three + seven =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top