Sri Ganesh Tel

ಪಾಕ್‌: ಬುರ್ಖಾಧಾರಿ ತಾಲಿಬಾನಿಗಳಿಂದ ದಾಳಿ

Posted In : ವಿದೇಶ

ಪೇಶಾವರ: ಬುರ್ಖಾಧಾರಿಗಳಾಗಿ ಬಂದ ತಾಲಿಬಾನ್‌ ಭಯೋತ್ಪಾದಕರು ಪೇಶಾವರದ ಕೃಷಿ ವಿವಿ ಮೇಲೆ ದಾಳಿ ನಡೆಸಿದ ಪರಿಣಾಮ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪಾಕ್‌ ಮಿಲಿಟರಿಯ ಐಎಸ್‌ಐ ಘಟಕವನ್ನು ಗುರಿ ಮಾಡಿ ದಾಳಿ ನಡೆಸಲು ಸಂಚು ರೂಪಿಸಿದ್ದಾಗಿ ಪಾಕಿಸ್ತಾನಿ ತಾಲಿಬಾನ್‌ ಹೇಳಿದ್ದು ಘಟನೆಯ ಹೊಣೆ ಹೊತ್ತಿದೆ.

ಭದ್ರತಾ ಪಡೆಗಳ ಮೇಲೆ ಗುಂಡಿನ ಚಕಮಕಿ ನಡೆಸಿದ ದಾಳಿಕೋರರು ಪ್ರದೇಶದಲ್ಲಿ ಹೆಚ್ಚಿನ ಮಹಿಳೆಯರು ಧರಿಸುವ ಬುರ್ಖಾ ಧರಿಸಿ ರಿಕ್ಷಾವೊಂದರಲ್ಲಿ ಬಂದು ಶಾಲೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

2014ರ ಡಿಸೆಂಬರ್‌ನಲ್ಲಿ ಪೇಶಾವರದ ಸೇನಾ ಶಾಲೆ ಮೇಲೆ ದಾಳಿ ನಡೆಸಿದ್ದ ಬಂದೂಕುಧಾರಿಗಳು 134 ಮಕ್ಕಳನ್ನು ಕೊಂದಿದ್ದರು.

ಇಸ್ಲಾಮಿಕ್‌ ರಾಜ್ಯ ಸ್ಥಾಪಿಸಿ ಶರಿಯಾ ಕಾನೂನನ್ನು ತರಲು ಪಾಕಿಸ್ತಾನಿ ತಾಲಿಬಾನ್‌ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದೆ. 2001ರಲ್ಲಿ ಅಮೆರಿಕ ನೇತೃತ್ವದ ದಾಳಿಯಲ್ಲಿ ಛಿದ್ರಗೊಂಡಿದ್ದ ಅಫ್ಘಾನಿಸ್ತಾನದ ತಾಲಿಬಾನ್‌ ಪ್ರೇರಣೆಯಿಂದ ಪಾಕಿಸ್ತಾನೀ ತಾಲಿಬಾನ್‌ ಹುಟ್ಟಿಕೊಂಡಿದೆ.

2 thoughts on “ಪಾಕ್‌: ಬುರ್ಖಾಧಾರಿ ತಾಲಿಬಾನಿಗಳಿಂದ ದಾಳಿ

Leave a Reply

Your email address will not be published. Required fields are marked *

19 + eight =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top