About Us Advertise with us Be a Reporter E-Paper

Breaking Newsಸಿನಿಮಾಸ್

ಪುಟಾಣಿಗಳ ‘ರಾಮರಾಜ್ಯ’ದಿಂದ ಸೂಪರ್ ಮೆಸೇಜ್..!

-ಮಂದಾರ ಸಾಗರ್

ಚಿತ್ರ ವಿಮರ್ಶೆ
ಚಿತ್ರ: ರಾಮರಾಜ್ಯ
ನಿರ್ದೇಶನ: ನೀಲ್ ಕೆಂಗಾಪುರ್
ನಿರ್ಮಾಣ: ಶಂಕರೇ ಗೌಡ
ಸಂಗೀತ: ಎ.ಟಿ.ರವೀಶ್

‘ರಾಮ ರಾಜ್ಯ’ ಪುಟಾಣಿಗಳಿಂದ ದೊಡ್ಡವರಿಗಾಗಿ ಮಾಡಿರುವ ಸಿನಿಮಾ. ಪ್ರಸ್ತುತ ಸಮಾಜ ಯಾವ ರೀತಿಯಲ್ಲಿದೆ..? ಸಮಾಜದ ನಿಲುವುಗಳಿಂದ ಎಷ್ಟು ಕೆಡುಕುಗಳಾಗುತ್ತಿವೆ. ನಿಜವಾಗಿಯೂ ಈಗಿನ ಸಮಸ್ಯೆಗಳಿಗೆ ಕಾರಣೀಕರ್ತರು ಯಾರು ಎಂದು ಯೋಚಿಸುವ ಮನಗಳು ಖಂಡಿತಾ ಈ ಚಿತ್ರವನ್ನು ನೋಡಬಹುದು.

ಮೂವರು ಅನಂತ ವಿದ್ಯಾನಿಕೇತನ ಮಕ್ಕಳು. ಅದರಲ್ಲಿ ಇಬ್ಬರು ಶ್ರೀಮಂತರ ಮಕ್ಕಳಾದರೆ ಒಬ್ಬ ಬಡವ. ಅವರೊಟ್ಟಿಗೆ ಇನ್ನೊಬ್ಬ ಟೀ ಅಂಗಡಿಯಲ್ಲಿ ಕೆಲಸ ಮಾಡುವ ಮೂಕ ಹುಡುಗ. ನಾಲ್ವರು ಮಕ್ಕಳ ಮೇಲೆ ಹೆಣೆದ ಕಥೆ ಇದು. ರಘುಪತಿ, ರಾಘವ, ರಾಜ, ರಾಮ ಎಂಬುದು ಮಕ್ಕಳ ಹೆಸರು. ರಾಘವ ಎನ್ನುವ ಬಡ ವಿದ್ಯಾರ್ಥಿಗೆ ಕ್ರಿಕೆಟ್ ಆಟಗಾರನಾಗಬೇಕೆಂಬ ಹುಚ್ಚು. ಆದರೆ ಅಚಾನಕ್ ಆಗಿ ಅವನಿಗೊಂದು ಆ್ಯಕ್ಸಿಡೆಂಟ್ ಆಗುತ್ತದೆ. ಆ ಆ್ಯಕ್ಸಿಡೆಂಟ್ ಮಾಡಿದವನನ್ನು ರಘುಪತಿ, ರಾಜ, ರಾಮ ಮತ್ತವರ ಜತೆ ಲಾಯರ್ ಸೇರಿಕೊಂಡು ಹೇಗೆ ಕಂಡುಹಿಡಿಯುತ್ತಾರೆ.

ರಾಜಕೀಯ ಹಿನ್ನೆಲೆಯುಳ್ಳ ಆ ವ್ಯಕ್ತಿಯನ್ನು ಕೋರ್ಟ್‌ನಲ್ಲಿ ಹೇಗೆ ಅಪರಾಧಿ ಎಂಬುದಾಗಿ ಸಾಬೀತು ಪಡಿಸುತ್ತಾರೆ ಎನ್ನುವುದು ಕಥೆ. ಒಬ್ಬ ಅನಕ್ಷರಸ್ಥ ಮೂಕ ಹುಡುಗ ರಾಜುವಿನ ಸಾಕ್ಷಿ ಇಟ್ಟುಕೊಂಡು ಸತ್ಯವನ್ನು ಹೇಗೆ ಗೆಲ್ಲಿಸುತ್ತಾರೆ ಎನ್ನುವುದು ತೆರೆ ಮೇಲೆ ಚೆನ್ನಾಗಿ ಮೂಡಿ ಬಂದಿದೆ.

ನಟ ಪ್ರೇಮ್ ಅವರ ಪುತ್ರನಾದ ಏಕಾಂತ್, ‘ಪುಟಾಣಿ ಪಂಟ್ರು’ ಖ್ಯಾತಿಯ ಹೇಮಂತ್, ಮಾಸ್ಟರ್ ಸೋಹೇಬ್ ಮತ್ತು ಕಾರ್ತಿಕ್ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರ ಕಾಮಿಕ್ ಪಾತ್ರ ನೋಡುಗರಿಗೆ ಇಷ್ಟವಾಗುತ್ತದೆ. ಚಿತ್ರಕ್ಕೆ ಪ್ಲಸ್ ಪಾಯಿಂಟ್ ಅದರ ಕಥೆ ಮತ್ತು ಸಂದೇಶ. ಬುದ್ಧಿಮಾತನ್ನು ಯಾವ ರೀತಿಯಲ್ಲಿ ಹೇಳಿದರೆ ಜನರಿಗೆ ಅರ್ಥವಾಗುತ್ತದೆ ಎಂದು ನಿರ್ದೇಶಕರು ಪೂರ್ತಿ ಪ್ರಮಾಣದಲ್ಲಿ ಅರಿತುಕೊಂಡಿದ್ದಾರೆ. ಚಿಕ್ಕ ಮಕ್ಕಳಿಂದ ದೊಡ್ಡವರಿಗೆ ನೀತಿ ಪಾಠ ಹೇಳಿದಂತಿದೆ ಈ ಚಿತ್ರ.

ಇನ್ನು ಚಿತ್ರದ ಹಾಡುಗಳು ಮಕ್ಕಳಿಗೆ ಇಷ್ಟವಾಗುತ್ತದೆ. ‘ಇನ್ನೆಲ್ಲಿ ರಾಮರಾಜ್ಯ’ ಎನ್ನುವ ಹಾಡು ಬುದ್ಧಿಜೀವಿಗಳಿಗೆ ಪ್ರಶ್ನಿಸಿದಂತಿದೆ. ಈ ವಾರದ ವೀಕೆಂಡ್‌ಗೆನಲ್ಲಿ ಮಕ್ಕಳೊಂದಿಗೆ ಹೋಗಿ ಸಿನಿಮಾ ನೋಡಿ ಬನ್ನಿ.

Tags

Related Articles

Leave a Reply

Your email address will not be published. Required fields are marked *

Language
Close