About Us Advertise with us Be a Reporter E-Paper

Uncategorized

ಪ್ರಕೃತಿ-ಪುರುಷ ಪರಾಕ್ರಮದ ತಾಣ: ಬಾಂಧವ್ ಗಡ್

ಆಶಾ ಕುಲಕರ್ಣಿ

ಹಾರ್ಟ್ ಆಫ್ ಇಂಡಿಯಾ ಅಥವಾ ಭಾರತದ ಹೃದಯ ವೆಂದೇ ಖ್ಯಾತಿ ಪಡೆದಿರುವ ಮಧ್ಯಪ್ರದೇಶ ತನ್ನ ವಿಶಿಷ್ಟ ಸಂಪ್ರದಾಯ, ಸಂಸ್ಕೃತಿ, ಶ್ರೀಮಂತ ಐತಿಹಾಸಿಕ ಹಿನ್ನೆಲೆ, ಸಂಪದ್ಭರಿತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ ಯಾಗಿದೆ. ಇದರ ರಾಜಧಾನಿ ಭೂಪಾಲ್ ಅಂತೂ ಕೆರೆಗಳ ನಗರಿ ಎಂದೇ ಖ್ಯಾತಿಗಳಿಸಿದೆ. ಇಲ್ಲಿಗೆ ಬರುವ ಪ್ರವಾಸಿಗ ರಿಗೆ ಸಾಕಷ್ಟು ಸೌಲಭ್ಯ ಒದಗಿಸುವ ಈ ರಾಜ್ಯ ತನ್ನ ಹುಲಿ ರಕ್ಷಿತ ಅಭಯಾರಣ್ಯದಿಂದ ಹಿಡಿದು ಖಜರಾಹೋ ದಂತಹ ಉತ್ಕೃಷ್ಟ ಮಟ್ಟದ ವಾಸ್ತು ಶಿಲ್ಪವನ್ನು ಹೊಂದಿ ದ್ದು ಇಲ್ಲಿನ ಒಂದು ಪ್ರವಾಸ ಭಾರತ ದರ್ಶನದ ಅನು ಭವವನ್ನು ಒದಗಿಸುತ್ತದೆ ಎಂಬುದರಲ್ಲಿ ಎರಡು ಮಾತಿ ಲ್ಲ.

ಈ ಮಧ್ಯಪ್ರದೇಶದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವೇ ಬಾಂಧವ್‌ಗಢ್. ಇದು ವರ್ಷ ಪೂರ್ತಿ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಬಾಂಧವ್‌ಗಡ್‌ನ ಸುತ್ತಮು ತ್ತಲೂ ಸಾಕಷ್ಟು ಪ್ರವಾಸಿ ತಾಣಗಳಿದ್ದು ಇಲ್ಲಿಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರವಾಸಿಗ ಕೂಡ ಬಾಂಧವ್‌ಗಡ್ ಕೋಟೆ ಹಾಗೂ ವಿಂಧ್ಯಾ ಬೆಟ್ಟದ ನೋಡಲೇಬೇಕು. ಇದರ ಸಂಪೂರ್ಣ ವ್ಯಾಪ್ತಿಯಲ್ಲಿ ಅನೇಕ ಕಣಿವೆಗಳು ಅಂತರ್ಗತವಾಗಿದ್ದು ಸಣ್ಣ ಹಾಗೂ ಸುಂದರ ಹುಲ್ಲುಗಾವಲಿನೊಂದಿಗೆ ಕೊನೆಯಾಗುತ್ತವೆ. ಸ್ಥಳೀಯರು ಇದನ್ನು ಬೊಹೆರಾ ಎಂದು ಕರೆಯುತ್ತಾರೆ. ಇತಿಹಾಸ ಪ್ರಿಯರು ಇಲ್ಲಿರುವ ಬಾಂಧವ್‌ಗಡ್ ಕೋಟೆಯನ್ನು ಅವಶ್ಯಕವಾಗಿ ಸಂದರ್ಶಿಸಲೇ ಬೇಕು.

ಬೆಟ್ಟದ ತುತ್ತ ತುದಿಯಲ್ಲಿರುವ ಈ ಕೋಟೆ 2000 ವರ್ಷಗಳಷ್ಟು ಪುರಾತನವಾದದ್ದು ಎನ್ನಲಾ ಗುತ್ತಿದೆ. ಇದರ ನಿರ್ಮಾಣದ ಬಗ್ಗೆ ಎಲ್ಲಿಯೂ ಉಲ್ಲೇಖಗಳಿಲ್ಲ. ಮೂರನೇ ಶತಮಾನದಿಂದ ಹಿಡಿದು 10 ನೇ ಶತ ಮಾನದವರೆಗೆ ಹಲವಾರು ಮಹಾರಾಜರು ಈ ಕೋಟೆಯಲ್ಲಿ ವಾಸಿಸುತ್ತಿದ್ದರು ಎಂಬುದಾಗಿ ಮಾತ್ರ ತಿಳಿದುಬರುತ್ತದೆ. ಈ ಕೋಟೆಯ ಮೇಲೇರಿ ನಿಂತಾಗ ಒಂದು ಕ್ಷಣ ಉಸಿರು ನಿಂತ ಅನುಭವ. ಮೇಲಿಂದ ನೋಡಿದರೆ ಅಭಯಾರಣ್ಯದ ವಿಹಂಗಮ ನೋಟ ಎಂಥವರನ್ನೂ ಮಂತ್ರ ಮುಗ್ದಗೊಳಿಸುತ್ತದೆ. ಅಲ್ಲಿಂದಲೇ ಪ್ರಾಣಿ ಸಂಪತ್ತು ಹಾಗೂ ಸಸ್ಯ ಸಂಪತ್ತಿನ ದೃಶ್ಯವನ್ನು ನಾವು ಮನಸ್ಸಿ ನಾಳದಲ್ಲಿ ಸೆರೆಯಿಡಿಯಬಹುದು. ಅಷ್ಟೇ ಅಲ್ಲದೇ ಕ್ಯಾಮರಾ ಕಣ್ಣಿನಲ್ಲೂ ಸಾಕಷ್ಟು ವನ್ಯ ಜೀವಿಗಳ ವಿವಿಧ ಬಗೆಯ ಭಂಗಿ ಗಳನ್ನು ಸೆರೆಹಿಡಿಯಬಹುದು.

ಇನ್ನು ಅಭಯಾರಣ್ಯದ ಹತ್ತಿರದಲ್ಲಿಯೇ ಇರುವ ಮರಳು ದಿಣ್ಣೆಯಲ್ಲಿ ನಿರ್ಮಾಣವಾಗಿರುವ ಪುರಾತನ ಗುಹೆಗಳೂ ಕೂಡ ಪ್ರವಾಸಿ ಆಕರ್ಷಣೆಗಳಾಗಿವೆ. ಇಲ್ಲಿ ಸುಮಾರು 39 ಗುಹೆಗಳು 5 ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಇವುಗಳಲ್ಲಿ ಬ್ರಾಹ್ಮಿ ಲಿಪಿಯ ಕೆತ್ತನೆಗಳು ಹಾಗೂ ಕೆಲವೊಂದು ಗುಹೆಗಳಲ್ಲಿ ಹಂದಿ, ಕುದುರೆ, ಹುಲಿ, ಆನೆಗಳ ಮೇಲೆ ಕುಳಿತಿರುವ ಮನುಷ್ಯನ ಆಕೃತಿಗಳನ್ನು ಚಿತ್ರಿಸಲಾಗಿದೆ. ಇನ್ನು ಇಲ್ಲಿರುವ ಬಡೀ ಗುಫಾ ಎಂದರೆ ದೊಡ್ಡ ಗುಹೆ ಎಂದರ್ಥ. ಇಲ್ಲಿ 9 ಕೊಠಡಿಗಳಿದ್ದು ಸಾಕಷ್ಟು ವಿಶಾಲ ವಾಗಿವೆ. ಇಂದು ಈ ಗುಹೆಗಳು ಬಾವಲಿಗಳಿಗೆ ಮತ್ತು ಕೆಲ ಪ್ರಾಣಿಗಳಿಗೆ ಆಶ್ರಯ ತಾಣಗಳಾಗಿವೆ.

ಭಕ್ತಿ-ಭಾವ ಬಿಂದು
ಬಾಂಧವ್‌ಗಡ್ ರಾಷ್ಟ್ರೀಯ ಉದ್ಯಾನದ ಹತ್ತಿರವಿರುವ ಇನ್ನೊಂದು ಪ್ರಮುಖ ಪ್ರವಾಸಿ ತಾಣವೆಂದರೆ ಶೇಷಶಯನ. ಆಧಾತ್ಮದಲ್ಲಿ ಹೆಚ್ಚು ಆಸಕ್ತಿಯುಳ್ಳವರು ಅವಶ್ಯವಾಗಿ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಸುಮಾರು 65 ಅಡಿಗಳಷ್ಟು ಉದ್ದವಿರುವ ಐದು ಹೆಡೆಯ ಹಾವಿನ ಮೇಲೆ ಮಲಗಿರುವ ಭಂಗಿ ಯಲ್ಲಿರುವ ಶೇಷಶಯನ ವಿಷ್ಣುವಿನ ವಿಗ್ರಹವು ಇಲ್ಲಿ ಹರಿಯುವ ಪವಿತ್ರ ನದಿ ತಟದಲ್ಲಿದೆ. ವಿಷ್ಣುವಿನ ಪಾದದ ಬಳಿಯಲ್ಲಿಯೇ ಈ ನದಿಯು ಉಗಮವಾಗಿದೆ ಎನ್ನಲಾಗುತ್ತಿದೆ. ಸುತ್ತಲೂ ಹಚ್ಚಹಸಿರಿನಿಂದ ಕೂಡಿದ ಪ್ರಕೃತಿ ಸೌಂದರ್ಯ, ಎತ್ತರವಾದ ಗಿಡಗಳು, ಹರಿಯುವ ನದಿಯ ಶಬ್ದ ಇದರ ಪಕ್ಕದಲ್ಲಿಯೇ ಮಲಗಿರುವ ವಿಷ್ಣುವಿನ ವಿಗ್ರಹ ಇದನ್ನು ನೋಡುತ್ತಾ ನಿಂತರೇ ಭಕ್ತಿ ಭಾವ ತುಂಬಿ ಬರುತ್ತದೆ. ಇತ್ತೀಚೆಗೆ ಈ ನೀರು ಹಸಿರು ವರ್ಣಕ್ಕೆ ತಿರುಗಿದ್ದು, ಇದರಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿ ಇದೆ ಎನ್ನಲಾಗುತ್ತಿದೆ.

ಪಕ್ಷಿಸಂತತಿ
ಬಾಂಧವ್‌ಗಡ್ ಪ್ರವಾಸಕ್ಕೆ ಬರುವ ಇಲ್ಲಿಂದ 10 ಕಿ.ಮೀ ಅಂತರದಲ್ಲಿರುವ ಘಾರ್‌ಪುರಿ ಆಣೆಕಟ್ಟು ಪ್ರದೇಶಕ್ಕೆ ಅವಶ್ಯವಾಗಿ ಭೇಟಿ ನೀಡಲೇಬೇಕು. ಈ ಆಣೆಕಟ್ಟಿನ ಹಿನ್ನಿರಿನಲ್ಲಿ ಸ್ವಚ್ಛಂದವಾಗಿ ವಿಹರಿಸುವ ಬಿಳಿ ಕಪ್ಪು ಕೊಕ್ಕರೆಗಳು, ಬೆಳ್ಳಕ್ಕಿ ಸಿಪಾಯಿ ಕೊಕ್ಕರೆ, ಕೆಂಪು ಟಿಟಿಭ, ಕೊಳದ ಬಕ, ಸಾರಕ್ಕಿ ಹೀಗೆ ಹಲವಾರು ವಿವಿಧ ಬಗೆಯ ಪಕ್ಷಿಗಳ ಸಂತತಿಯನ್ನು ನಾವು ವೀಕ್ಷಿಸಬಹುದಾಗಿದೆ.

ಪ್ರವಾಸಿ ಆಕರ್ಷಣೆಗಳು
ಬಾಂಧವ್‌ಗಡ್‌ನ ಇನ್ನೊಂದು ಪ್ರವಾಸಿ ಆಕರ್ಷಣೆಯೆಂದರೆ ಇಲ್ಲಿರುವ ತಾಲ್‌ಗ್ರಾಮ. ಇದು ಅಭಯಾ ರಣ್ಯದ ಕೆಳದಲ್ಲಿದ್ದು ಇಲ್ಲಿ ಇನ್ನೂವರೆಗೆ ಮಣ್ಣಿನ ಮನೆಗಳನ್ನು ನಾವು ನೋಡಬಹುದಾಗಿದೆ. ಈ ಪ್ರದೇಶದಲ್ಲಿಯೇ ಸಾಕಷ್ಟು ದೇಶಿಯ ಮತ್ತು ವಿದೇಶಿಯ ಪ್ರವಾಸಿಗರನ್ನು ನಾವು ನೋಡ ಬಹುದಾಗಿದೆ.

ಇಲ್ಲಿರುವ ಕ್ಲೈಂಬರ್‌ಸ್ ಪಾಯಿಂಟ್ ಕೂಡ ಒಂದು ವಿಕ್ಷಣಾ ತಾಣವಾಗಿದ್ದು 13,000 ಅಡಿ ಎತ್ತರದಲ್ಲಿ ನಿಂತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಸವಿಯ ಬಹುದು. ಇನ್ನು ಇಲ್ಲಿರುವ ವನ್ಯಜೀವಿಧಾಮ 400 ಅಡಿ ಪ್ರದೇಶ ವ್ಯಾಪಿಸಿಕೊಂಡಿದ್ದು 22 ಬಗೆಯ ಸಸ್ತನಿಗಳು ಹಾಗೂ 250 ಬಗೆಯ ಪಕ್ಷಿಗಳು, 80 ವಿಧದ ಹೊಂದಿದೆ. ಇಲ್ಲಿ ಬಂಗಾಳದ ನರಿ, ಕತ್ತೆ ಕಿರುಬ, ಕರಡಿ ಜಾತಿಯ ಪ್ರಾಣಿ, ಕಾಡು ಬೆಕ್ಕು, ಅಂಗೈ ಅಗಲದ ಅಳಿಲು, ಬೂದು ಮುಂಗುಸಿ, ಚಿರತೆ, ಬೆಕ್ಕಿನಂಥ ಸಸ್ತನಿ ಹೀಗೆ ವಿವಿಧ ಪ್ರಾಣಿಗಳನ್ನು ನಾವು ವೀಕ್ಷಿಸಬಹುದಾಗಿದೆ. ಬಾಂಧವ್‌ಗಢ್‌ಗೆ ಭೇಟಿ ನೀಡಿದವರು ಭುಟ್ಟೆ ಕಿ ಕೀಸ್, ಮಾವ ಬಟಿ ಕಬಾಬ್‌ನ ಸವಿಯುಣ್ಣದಿದ್ದರೆ ಆ ಪ್ರವಾಸ ಅಪೂರ್ಣವಾದಂತೆ.

Related Articles

Leave a Reply

Your email address will not be published. Required fields are marked *

Language
Close