ಪ್ರಮುಖ ಹತ್ತು ವಲಯಗಳಲ್ಲಿ ತ್ವರಿತ ಬೆಳವಣಿಗೆ ಸಾಧಿಸಲು ಸಲಹೆ

Posted In : ದೇಶ

ದೆಹಲಿ: ಆರ್ಥಿಕ ಪ್ರಗತಿ ಕುಂಠಿತವಾಗಿದೆ ಎಂದು ಒಪ್ಪಿಕೊಂಡಿರುವ ಆರ್ಥಿಕ ಸಲಹಾ ಸಮಿತಿಯು ಮುಂದಿನ ಆರು ತಿಂಗಳಲ್ಲಿ ಅಭಿವೃದ್ಧಿ ಸಾಧಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಹತ್ತು ಪ್ರಮುಖ ವಲಯಗಳನ್ನು ಗುರುತಿಸಿದೆ.

ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್ರಾಯ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ವಿಘಟಿತ ವಲಯದ ಒಗ್ಗೂಡುವಿಕೆ, ವಿತ್ತೀಯ ಯೋಜನೆ, ಹಣಕಾಸು ನೀತಿ, ಸಾರ್ವಜನಿಕ ಆಯವ್ಯಯ, ಆರ್ಥಿಕ ಆಡಳಿತ ಸಂಸ್ಥೆಗಳು, ಕೃಷಿ ಹಾಗೂ ಜಾನುವಾರು ಸಾಕಣೆ ಅಲ್ಲದೇ, ಸಾಮಾಜಿಕ ವಲಯ, ಉತ್ಪಾದನೆ ಹಾಗೂ ಇನ್ನಿತರ ವಿಚಾರಗಳ ಕುರಿತಾಗಿ ಕೂಲಂಕಷವಾಗಿ ಚರ್ಚಿಸಲಾಗಿದೆ.

ಮುಂದಿರುವ ಆರ್ಥಿಕ ಸವಾಲುಗಳನ್ನೆದುರಿಸಲು ಅನುಷ್ಠಾನಗೊಳಿಸಬಲ್ಲ ಪರಿಹಾರಗಳನ್ನು ಪ್ರಧಾನಿ ಮುಂದೆ ಇಡಲಿದ್ದೇವೆ ಎಂದು ದೇಬ್ರಾಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದೇ ವೇಳೆ, ಆರ್ಥಿಕ ಅಭಿವೃದ್ಧಿಗೆಂದು ಯೋಜಿಸಲಾಗಿರುವ ಹಲವು ನೀತಿಗಳು ಹಾಗೂ ಕೆಲಸಗಳನ್ನು ಹಣಕಾಶು ಸಚಿವಾಲಯದ ಮುಖ್ಯ ವಿತ್ತೀಯ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.

ಜೂನ್‌ನಲ್ಲಿ ಕೊನೆಯಾದ ಕಳೆದ ವಿತ್ತೀಯ ತ್ರೈಮಾಸಿಕದಲ್ಲಿ ಮೂರು ವರ್ಷಗಳಲ್ಲೇ ಕನಿಷ್ಠ ಮಟ್ಟವಾದ ಶೇ 5.7ರಷ್ಟು ವೃದ್ಧಿ ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ವಿಚಾರವಾಗಿ ಪರಿಹಾರಗಳನ್ನು ಕಂಡುಕೊಳ್ಳಲೆಂದು ಆರ್ಥಿಕ ಸಲಹಾ ಸಮಿತಿ ರಚಿಸಿದ್ದಾರೆ.

One thought on “ಪ್ರಮುಖ ಹತ್ತು ವಲಯಗಳಲ್ಲಿ ತ್ವರಿತ ಬೆಳವಣಿಗೆ ಸಾಧಿಸಲು ಸಲಹೆ

Leave a Reply

Your email address will not be published. Required fields are marked *

11 − four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top